ಅಧಿಕಾರಿಗಳ ನಿರ್ಲಕ್ಷ್ಯ – ತಿಪ್ಪೆಸೇರಿದ ಶ್ರೀರಾಮದೂತನ ವಿಗ್ರಹ – ಭಕ್ತರ ಆಕ್ರೋಶ

ಬೆಂಗಳೂರು: ಶ್ರೀ ರಾಮದೂತ, ಭಜರಂಗಿ ನಮ್ಮನ್ನು ಕ್ಷಮಿಸಿಬಿಡು ಎಂದು ಭಕ್ತ ವೃಂದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ, ಇದಕ್ಕೆಲ್ಲಾ ಕಾರಣವಾಗಿದ್ದು ಆಂಜನೇಯನ ವಿಗ್ರಹ ಅನಾಥವಾಗಿ ಕಸದ ರಾಶಿ ಮುಂದೆ ಬಿಸಾಡಿರೋದು.

ಬೆಂಗಳೂರು ಹೊರವಲಯ ನೆಲಮಂಗಲ ನಗರದ ಹೃದಯಭಾಗದ ಡಾ.ರಾಜ್‍ಕುಮಾರ್ ಸರ್ಕಲ್ ನಲ್ಲಿದ್ದ ತಪಸ್ವಿ ವಿರಾಂಜನೇಯ ದೇಗುಲವನ್ನ, ನ್ಯಾಯಾಲಯದ ಆದೇಶದ ಮೇರೆಗೆ ನೆಲಮಂಗಲ ತಾಲೂಕು ಆಡಳಿತದ ವತಿಯಿಂದ ತಹಶೀಲ್ದಾರ್ ಕೆ.ಮಂಜುನಾಥ್ ನೇತೃತ್ವದಲ್ಲಿ ತೆರವು ಕಾರ್ಯ ನಡೆದಿತ್ತು. ಇನ್ನೂ ತೆರವು ಕಾರ್ಯದ ವೇಳೆ ಸ್ಥಳೀಯರು, ಭಕ್ತರು ಹಾಗೂ ಭಜರಂಗದಳದವರು ಕೂಡ ತೆರವು ಮಾಡದಂತೆ ಆಗ್ರಹಿಸಿದರು. ಇದನ್ನೂ ಓದಿ: ಹಾಕಿ ಆಟಗಾರ್ತಿ ಸಲೀಮಾ ಆಟ ನೋಡಲು ಗ್ರಾಮಕ್ಕೆ ಟಿವಿ ಅಳವಡಿಸಿದ ಜಿಲ್ಲಾಡಳಿತ

ಅಧಿಕಾರಿಗಳು ಸಹ ಕೋರ್ಟ್ ಆದೇಶವಿದೆ ಎಂದು ದೇವಸ್ಥಾನ ತೆರವುಗೊಳಿಸಿದ್ದರು. ತೆರವು ಮಾಡಿದ ನಂತರ ಅನಾಥವಾಯ್ತು ಶ್ರೀ ರಾಮದೂತನ ವಿಗ್ರಹ ಹೌದು ಆಂಜನೇಯನ ವಿಗ್ರಹವನ್ನು ಗೌರವದಿಂದ ನೋಡದೆ ನಗರಸಭೆ ಕಸದ ರಾಶಿಯಲ್ಲಿ ತೆಗೆದುಕೊಂಡು ವಿಗ್ರಹವನ್ನು ಬಿಸಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ನೆಲಮಂಗಲ ನಗರದ ಕಸವನ್ನು ಎಸೆಯುವ ಜಾಗದಲ್ಲಿ ಆಂಜನೇಯ ಸ್ವಾಮಿಯ ವಿಗ್ರಹವನ್ನು ನೋಡಿದ ಭಕ್ತರು ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಕ್ಷಮಿಸಿಬಿಡು ಭಜರಂಗಿ ಎಂದು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಅಧಿಕಾರಿಗಳೇ ನಿಮಗೆ ಶ್ರೀ ವೀರಾಂಜನೇಯನ ಶಾಪ ನಿಮ್ಮನ್ನ ತಟ್ಟದೇ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಫೈನಲ್‍ಗೆ ಎಂಟ್ರಿ

Source: publictv.in Source link