ನಮ್ಮ ಮರ್ಯಾದೆ ಕಳೆಯೋದಕ್ಕೆ ಇದೆಲ್ಲ ಮಾಡಿದ್ದಾರೆ -ವಿನೋದ್​ ರಾಜ್​ ಬೇಸರ

ನಮ್ಮ ಮರ್ಯಾದೆ ಕಳೆಯೋದಕ್ಕೆ ಇದೆಲ್ಲ ಮಾಡಿದ್ದಾರೆ -ವಿನೋದ್​ ರಾಜ್​ ಬೇಸರ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಟ ವಿನೋದ್ ರಾಜ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಿನ್ನೆಲೆ ಯಶವಂತಪುರ ಕೇಂದ್ರಿಯ ಪೊಲೀಸ್ ಠಾಣೆಗೆ ಅವರು ಭೇಟಿ ನೀಡಿದ್ದು ತನಿಖೆ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಪಡೆದಿದ್ದಾರೆ.

ಈ ವೇಳೆ ನ್ಯೂಸ್​ಫಸ್ಟ್​ನೊಂದಿಗೆ ಮಾತನಾಡಿದ ವಿನೋದ್​ ರಾಜ್​​​ ಕಳೆದ 8 ತಿಂಗಳ ಹಿಂದೆ ಕಿಡಿಗೇಡಿಗಳು ಫೇಸ್​​ಬುಕ್​​​​ನಲ್ಲಿ ಅವಹೇಳನಕಾರಿ ಮತ್ತು ಅಶ್ಲೀಲ ಚಿತ್ರಗಳನ್ನು ಮಾರ್ಪಿಂಗ್​ ಮಾಡಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ತನಿಖೆ ವಿಚಾರವಾಗಿ ಠಾಣೆಗೆ ಭೇಟಿ ನೀಡಿದ್ದೆನೆ ಎಂದಿದ್ದಾರೆ. ಇಲ್ಲಿಯವರೆಗಿನ ತನಿಖಾ ಹಂತದಲ್ಲಿ ಪೊಲೀಸರು ಕೆಲವು ಮಾಹಿತಿಯನ್ನು ಕಲೆ ಹಾಕಿದ್ದಾರೆ ಎಂದರು.

blank

ನನಗೆ ಇಲ್ಲಿಯವರೆಗೆ ಈ ಫೇಸ್​ಬುಕ್​, ವಾಟ್ಸಾಪ್​ಗಳನ್ನು ಉಪಯೋಗಿಸುವುದೇ ಗೊತ್ತಿಲ್ಲ, ಈ ಕೃತ್ಯದಿಂದ ಮನಸ್ಸಿಗೆ ಬಹಳ ನೋವಾಗಿದೆ ಅದರಲ್ಲೂ ಕಲಾವಿದರಾದ ನಮಗೆ ಇಂತಹ ಘಟನೆಗಳು ತುಂಬಾನೆ ನೋವನ್ನುಂಟು ಮಾಡುತ್ತವೆ.

ನನಗೆ ಯಾರು ವಿರೋಧಿಗಳು ಇಲ್ಲ ಹೀಗಾಗಿ ಯಾರ ಮೇಲೆ ಆರೋಪ ಮಾಡಬೇಕು ಎಂದಿರುವ ಅವರು ನಮ್ಮ ಮಾನ ಮರ್ಯಾದೆ ಕಲೇಯೊಕೆ ಈ ಕೆಲಸ ಮಾಡಿದ್ದಾರೆ ಅಷ್ಟೇ, ಈ ರೀತಿಯ ಕೃತ್ಯಗಳು ಕಲಾವಿದರಿಗಾಗಲಿ, ಸಾಮಾನ್ಯರಿಗಾಗಲಿ ಆಗಬಾರದು ಎಂದಿದ್ದಾರೆ.
ಇನ್ನು ಈ ಬಗ್ಗೆ ತನಿಖೆ ನಡೆಯುತ್ತಿದೆ ಯುವಕರು ಕೆಟ್ಟ ಮನಸ್ಥಿತಿಯಿಂದ ಹೊರಬರಬೇಕು ಅಂತ ನಟ ವಿನೋದ್​​ ರಾಜ್​ ತಿಳಿಸಿದ್ದಾರೆ.

Source: newsfirstlive.com Source link