ದೇಶದ ಶ್ರೀಮಂತ ದೇವರ ಹುಂಡಿಯಲ್ಲಿ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹ.. ಎಷ್ಟು ಕೋಟಿ ಗೊತ್ತಾ?

ದೇಶದ ಶ್ರೀಮಂತ ದೇವರ ಹುಂಡಿಯಲ್ಲಿ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹ.. ಎಷ್ಟು ಕೋಟಿ ಗೊತ್ತಾ?

ಆಂಧ್ರ ಪ್ರದೇಶ: ಕಳೆದೆರಡು ವರ್ಷಗಳಿಂದ ಕೊರೊನಾ ತಂದಿಟ್ಟ ಫಜೀತಿ ಅಷ್ಟಿಷ್ಟಲ್ಲ. ಕೊರೊನಾ ಜನರ ಜೀವನವನ್ನ ಮಾತ್ರ ಬರಿದಾಗಿಸದೆ ದೇವರ ಹುಂಡಿಯನ್ನು ಕೂಡ ಬರಿದಾಗಿಸಿತ್ತು. ಆದರೆ ಕ್ರಮೇಣ 2 ನೇ ಅಲೆಯ ಬಳಿಕ ಲಾಕ್​​ಡೌನ್​ ಸಡಿಲಿಕೆಯಾಗಿ ದೇವಸ್ಥಾನಗಳು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾದ ಬೆನ್ನಲ್ಲೆ ದೇಶದ ಶ್ರೀಮಂತ ದೇವರೆಂದೆ ಹೆಸರಾದ ತಿರುಪತಿಯ ಶ್ರೀ ವೆಂಕಟೇಶನ ಸನ್ನಿದ್ಧಿಯಲ್ಲಿ ನಿನ್ನೆ ಒಂದೇ ದಿನಕ್ಕೆ 1.80 ಕೋಟಿ ರೂಪಾಯಿ ಹುಂಡಿಗೆ ಕಾಣಿಕೆಯಾಗಿ ಸಂಗ್ರಹವಾಗಿ ದಾಖಲೆ ಬರೆದಿದೆ.

ಹೌದು, ಕೊರೊನಾ ಎರಡನೇ ಅಲೆಯ ​ ನಂತರದಲ್ಲಿ ದೇವಾಲಯಕ್ಕೆ ಪ್ರವೇಶಕ್ಕೆ ಕಲ್ಪಿಸಲಾಗಿದ್ದು ಭಕ್ತರು ದೇವರ ದರ್ಶನಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ಪರಿಣಾಮ ಕಳೆದ‌ 24 ಗಂಟೆಗಳಲ್ಲಿ ತಿರುಮಲದ‌ ಬಾಲಾಜಿ ದೇವಾಲಯದ ಹುಂಡಿಯಲ್ಲಿ ಅಧಿಕ ಪ್ರಮಾಣದ ಆದಾಯ‌ ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

blank

ನಿನ್ನೆ ಅಂದರೆ ಆಗಸ್ಟ್, 3ರಂದು ಬರೋಬ್ಬರಿ 1.80 ಕೋಟಿ ರೂಪಾಯಿ ಹುಂಡಿಗೆ‌ ಆದಾಯ ಸಂಗ್ರಹವಾಗಿದ್ದು, 20,421 ಭಕ್ತರು ಬಾಲಾಜಿಯ ದರ್ಶನ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಕಳೆದ ಬಾರಿ ಅಂದರೆ ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿನ ಲಾಕ್​ಡೌನ್​ಗೂ ಮುನ್ನ ತಿರುಮಲದ ಬಾಲಾಜಿ ದೇವಸ್ಥಾನದಲ್ಲಿ 800 ಕೋಟಿ ರೂಪಾಯಿ ಹುಂಡಿ ಹಣ ಸಂಗ್ರಹವಾಗುತ್ತಿತ್ತು. ಅದಾದ ಬಳಿಕ ಅಂದರೆ ಮೊದಲ ಕೊರೊನಾ ಅಲೆಯ ಅನ್​ಲಾಕ್​ ಬಳಿಕ ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹಲವಾರು ನಿರ್ಬಂಧಗಳೊಂದಿಗೆ ದೇವಾಲಯವನ್ನು ತೆರೆಯಲಾಯಿತು.

blank

ಕೋವಿಡ್​ಗೂ ಮುನ್ನ 70,000 ದಿಂದ ಒಂದು ಲಕ್ಷ ಭಕ್ತರು ಪ್ರತಿದಿನ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಸರಾಸರಿ ಹುಂಡಿ ಸಂಗ್ರಹವು ಪ್ರತಿದಿನ ಸುಮಾರು 3.7 ರಿಂದ 5 ಕೋಟಿ ರೂಪಾಯಿವರೆಗೆ ಸಂಗ್ರಹವಾಗುತ್ತಿತ್ತು. ಮೊದಲನೇ ಅಲೆಯ ಲಾಕ್​ಡೌನ್​ ಮುಗಿದ ನಂತರ ಹಂತ ಹಂತವಾಗಿ ಹುಂಡಿ ಆದಾಯ ಹೆಚ್ಚಾಗಿದ್ದು, ಜೂನ್‌ನಲ್ಲಿ ದೇವಾಲಯಕ್ಕೆ 1.1 ಕೋಟಿ ರೂಪಾಯಿ, ಜುಲೈ 16.69 ಕೋಟಿ ರೂಪಾಯಿ, ಆಗಸ್ಟ್ 18.43 ಕೋಟಿ ರೂಪಾಯಿ, ಸೆಪ್ಟೆಂಬರ್ 32.04 ಕೋಟಿ ರೂಪಾಯಿ, ಅಕ್ಟೋಬರ್ 47.52 ಕೋಟಿ ರೂಪಾಯಿ, ನವೆಂಬರ್ 61.29 ಕೋಟಿ ರೂಪಾಯಿ, ಡಿಸೆಂಬರ್ 79.64 ಕೋಟಿ ರೂಪಾಯಿ ಸಂಗ್ರಹವಾಗಿದೆ.

Source: newsfirstlive.com Source link