ದಲಿತ ಬಾಲಕಿ ಮೇಲೆ ಅತ್ಯಾಚಾರ; ಸಂತ್ರಸ್ತೆ ಮನೆಗೆ ಭೇಟಿ ನೀಡಿದ್ದ ರಾಹುಲ್​​ ಗಾಂಧಿ ಹೇಳಿದ್ದೇನು?

ದಲಿತ ಬಾಲಕಿ ಮೇಲೆ ಅತ್ಯಾಚಾರ; ಸಂತ್ರಸ್ತೆ ಮನೆಗೆ ಭೇಟಿ ನೀಡಿದ್ದ ರಾಹುಲ್​​ ಗಾಂಧಿ ಹೇಳಿದ್ದೇನು?

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿನಿತ್ಯ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ನಿದರ್ಶನ ಎಂಬಂತೆ ಈಗೊಂದು ಪ್ರಕರಣ ನಡೆದಿದೆ. ಎರಡು ದಿನಗಳ ಹಿಂದೆ ಆಗಸ್ಟ್​ 1ನೇ ತಾರೀಕಿನಂದು ದೆಹಲಿಯ ಕ್ಯಾಂಟ್ ಪ್ರದೇಶದಲ್ಲಿ ದುಷ್ಕರ್ಮಿಗಳು 9 ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬಲವಂತವಾಗಿ ಕೊಲೆ ಮಾಡಿದ ಪ್ರಕರಣವೀಗ ಕಾವು ಪಡೆದುಕೊಳ್ಳುತ್ತಿದೆ. ಸೋಷಿಯಲ್​​ ಮೀಡಿಯಾದಲ್ಲಿ ಜಸ್ಟೀಸ್​ ಫಾರ್​​ ಡೆಲ್ಲಿ ಗರ್ಲ್ ಎಂಬ ಹ್ಯಾಷ್​​ ಟ್ಯಾಗ್​​​ ಟ್ರೆಂಡ್​​ ಮೂಲಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ಇಂದು ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿ ಮೃತ ಅತ್ಯಾಚಾರ ಸಂತ್ರಸ್ತೆ ಮನೆಗೆ ಭೇಟಿ ಸಾಂತ್ವನ ಹೇಳಿದ್ದಾರೆ.

ಅತ್ಯಾಚಾರ ಸಂತ್ರಸ್ತೆ ಕುಟುಂಬದ ಭೇಟಿ ಬಳಿಕ ಮಾತಾಡಿದ ರಾಹುಲ್​ ಗಾಂಧಿ, ದಲಿತ ಹೆಣ್ಣುಮಗಳಿಗೆ ನ್ಯಾಯ ಸಿಗುವತನಕ ಹೋರಾಡುತ್ತೇನೆ. ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದೇನೆ. ನಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಪೋಷಕರು ಕೇಳಿಕೊಂಡಿದ್ದಾರೆ. ಈ ಹೆಣ್ಣುಮಗಳ ಸಾವಿಗೆ ನ್ಯಾಯ ಬೇಕು. ನ್ಯಾಯ ಸಿಗೋವರೆಗು ಇವರೊಂದಿಗೆ ನಿಲ್ಲುತ್ತೇನೆ ಎಂದರು.

blank

ಈ ಮುನ್ನವೂ ದಲಿತರ ಮಗಳೂ ದೇಶದ ಮಗಳೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಇದರ ಜತೆಗೆ ಸುದ್ದಿಯ ಸ್ಕ್ರೀನ್ ಶಾಟ್ ಕೂಡಾ ಲಗತ್ತಿಸಿದ್ದರು.

ಏನಿದು ಪ್ರಕರಣ?

ಮೋಹನ್ ಲಾಲ್ ಮತ್ತು ಸುನೀತಾ ದೇವಿ ಎಂಬ ದಂಪತಿ 9 ವರ್ಷದ ಮಗಳೊಂದಿಗೆ ಹಳೆಯ ನಂಗಲ್ ಗ್ರಾಮದಲ್ಲಿ ಶ್ಮಶಾನದ ಮುಂಭಾಗದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಭಾನುವಾರ ಸಂಜೆ ಸ್ಮಶಾನದಲ್ಲಿರುವ ಕೂಲರ್‌ನಲ್ಲಿ ನೀರು ತರಲು ಅಪ್ರಾಪ್ತ ಬಾಲಕಿ ಹೋಗಿದ್ದಳು ಎನ್ನಲಾಗಿದೆ. ಆದರೆ ಸಂಜೆ 6 ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಅದೇ ಸಮಯಕ್ಕೆ ಸ್ಮಶಾನದಲ್ಲಿದ್ದ ಸಲೀಂ, ಲಕ್ಷ್ಮೀನಾರಾಯಣ, ಕುಲದೀಪ್, ಪೂಜಾರಿ ರಾಧೇಶ್ಯಾಮ್ ಎಂಬ ದುಷ್ಕರ್ಮಿಗಳ ಗುಂಪು ಸುನೀತಾ ದೇವಿಯವರನ್ನು ಕರೆದು ಮಗಳ ಮೃತದೇಹ ತೋರಿಸಿ ನೀರು ತರುವಾಗ ಕರೆಂಟ್ ಶಾಕ್​​ ತಗಲಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದರು. ಆದರೆ, ಪೋಷಕರು ಮಗಳ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಚಾರ ಎಸಗಿ ಬಲವತದಿಂದ ಕೊಂದಿದ್ದಾರೆ ಎಂಬುದು ಬಯಲಿಗೆ ಬಂದಿದೆ. ಹೀಗಾಗಿ ನಾಲ್ವರು ಆರೋಪಿಗಳ ವಿರುದ್ಧ ಐಪಿಸಿ 304, 342, 201 ಮತ್ತು ಎಸ್​​ಸಿ/ಎಸ್​​ಟಿ ಕಾಯ್ದೆಯಡಿ ಎಫ್​​ಐಆರ್​​ ದಾಖಲಿಸಿದ್ದಾರೆ.

Source: newsfirstlive.com Source link