ಬಿಗ್‍ಬಾಸ್ ಮನೆಯಲ್ಲಿ ಮಂಜುಗೆ ಶುರುವಾಗಿದೆ ಭಯ

ಬಿಗ್‍ಬಾಸ್ ಸೀಸನ್-8ರ ಫೈನಲ್‍ಗೆ ದಿನಗಣನೆ ಆರಂಭವಾಗಿದೆ. ಇಷ್ಟು ದಿನ ಆರಾಮಾಗಿದ್ದ ಸ್ಪರ್ಧಿಗಳಿಗೆ ಇದೀಗ ಏನೋ ತಳಮಳ ಶುರುವಾಗಿದೆ. ಅದರಂತೆ ಮಂಜು ಪಾವಗಡ ನನಗೆ ಇದೀಗ ಮನೆಯಲ್ಲಿ ಭಯ ಶುರುವಾಗಿದೆ ಎಂದು ನೇರವಾಗಿ ಹೇಳಿಕೊಂಡಿದ್ದಾರೆ.

ಬಿಗ್‍ಮನೆಯಲ್ಲಿ ತುಂಬಾ ಸಂತೋಷವಾಗಿ ಕಾಲ ಕಳೆಯುತ್ತಿದ್ದ ಸ್ಪರ್ಧಿಗಳಿಗೆ ಕೆಲದಿನಗಳು ಬಾಕಿ ಇರುವಂತೆ ಇದೀಗ ಎಲಿಮಿನೇಶನ್ ಭಯ ಶುರುವಾಗಿದೆ. ಇಷ್ಟು ದಿನ ಮನೆಯಲ್ಲಿದ್ದು, ಕೊನೆ ಕ್ಷಣದಲ್ಲಿ ಹೊರ ನಡೆದರೆ ಹೇಗೆ ಎಂಬ ಲೆಕ್ಕಾಚಾರದಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳಲ್ಲಿ ಮನೆಮಾಡಿದೆ.

ಇನ್ನು ಫೈನಲ್‍ಗೆ ಆರು ದಿನ ಇರುವಂತೆ ಆರು ಜನ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಇದೀಗ ಮಂಜು ತಮ್ಮ ಭಯವನ್ನು ದಿವ್ಯಾ ಸುರೇಶ್ ಮತ್ತು ದಿವ್ಯಾ ಉರುಡುಗರೊಂದಿಗೆ ಹೇಳಿಕೊಂಡಿದ್ದಾರೆ. ನನಗೆ ಆ ಬೋರ್ಡ್ ನೋಡಿದ್ರೆ ಭಯ ಆಗುತ್ತಿದೆ ಎಂದಿದ್ದಾರೆ. ಇದನ್ನು ಕೇಳಿಸಿಕೊಂಡ ದಿವ್ಯಾ ಉರುಡುಗ ಹೌದು ನನಗೂ ಹಾಗೆ ಅನಿಸುತ್ತಿದೆ. ಹಾಗೋ ಹೀಗೊ ಅಂತ ಇಷ್ಟು ದಿನ ಕಳೆದಿದ್ದೇವೆ. ಮೊದಲು ಬರಬೇಕಾದರೆ 20 ಜನ ಬಂದು ಬಳಿಕ ಇದೀಗ 6 ಜನ ಉಳಿದುಕೊಂಡಿದ್ದೇವೆ. ಇದೀಗ ಇಲ್ಲಿ ಇದ್ದು ಹೊರಗಡೆ ಹೋದವರಿಗೆ ಈ ವಾರವನ್ನು ನೋಡುತ್ತಿದ್ದಂತೆ ನಾವು ಕೂಡ ಈಗ ಅಲ್ಲಿ ಇರಬೇಕಿತ್ತು ಎಂದು ಅನಿಸುತ್ತಿರಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ವೈಷ್ಣವಿಯನ್ನು ಹಾಡಿ ಹೊಗಳಿದ ಸ್ಪರ್ಧಿಗಳು

blank

ಮಂಜು ಇದೀಗ ನಾವು ಇರುವುದು 6 ಜನ ಇನ್ನು ನಮಗೆ ಇಲ್ಲಿ ಉಳಿದಿರುವ ದಿನ ಕೂಡ 6. ನಾವು ಮತ್ತೆ ಜೀವನದಲ್ಲಿ ಇನ್ನುಮುಂದೆ ಈ ರೀತಿ ಇರುವುದಕ್ಕೆ ಆಗುವುದಿಲ್ಲ. ಇದು ಕನಸಿನಲ್ಲೂ ಸಾಧ್ಯವಿಲ್ಲ ಎಂದರು.

blank

ಬಳಿಕ ದಿವ್ಯಾ ಉರುಡಗ ನಾವು ಇಲ್ಲಿ ಇದ್ದು ಅನುಭವಿಸಿದಂತಹ ಅನುಭವಗಳನ್ನು ನಾವು ಹೇಳಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಇದ್ದು ಅನುಭವಿಸಿದರೆ ಮಾತ್ರ ಅದು ಸಾಧ್ಯ. ಬೇರೆ ಅವರಿಗೆ ನಾವು ಹೇಳಿಕೊಳ್ಳಬಹುದು ಹೀಗಿತ್ತು, ಆ ಮನೆಯಲ್ಲಿ ನಾವೆಲ್ಲ ಹೀಗೆ ಇದ್ದೇವು ಎಂದು, ಆದರೆ ಇಲ್ಲಿ ಇದ್ದು ಕಳೆದಂತಹ ಕ್ಷಣ ಬೇರೆ ಎಂದು ಮನದ ಮಾತು ಹಂಚಿಕೊಂಡರು.

20 ಸಜನರಿದ್ದ ಬಿಗ್ ಮನೆ ಇದೀಗ 6 ಜನರಿಂದ ಕೂಡಿದೆ. ಕೊನೆ ವಾರ ಈ ವಾರದಲ್ಲಿ ಮನೆಗೆ ಹೋದರೆ ಇಷ್ಟು ದಿನ ಇದ್ದಿದ್ದು ವ್ಯರ್ಥ ಎಂಬ ಭಾವನೆ ಸ್ಪರ್ಧಿಗಳಲ್ಲಿ ಬರುತ್ತಿದೆ. ಹಾಗಾಗಿ ಕೊನೆವಾರದಲ್ಲಿ ಭಯ ಶುರುವಾದಂತಿದೆ.

Source: publictv.in Source link