ಮಂತ್ರಿಯಾಗೋ ಪಟ್ಟಿಯಲ್ಲಿ ವಿಜಯೇಂದ್ರ ಹೆಸರು ಇಲ್ಲ -ಸಿಎಂ ಬೊಮ್ಮಾಯಿ ಸ್ಪಷ್ಟನೆ

ಮಂತ್ರಿಯಾಗೋ ಪಟ್ಟಿಯಲ್ಲಿ ವಿಜಯೇಂದ್ರ ಹೆಸರು ಇಲ್ಲ -ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ಸಚಿವ ಸಂಪುಟ ರಚನೆ ಮುಹೂರ್ತ ಕೊನೆಗೂ  ನಿಗದಿಯಾಗಿದೆ. ನೂತನ ಮಂತ್ರಿಗಳ ಪಟ್ಟಿಗೆ ಹೈಕಮಾಂಡ್​ ಅಂಕಿತವೂ ಬಿದ್ದಿದ್ದು, ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್​ ಆದ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟದ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇಂದು ಮಧ್ಯಾಹ್ನ 2:15ಕ್ಕೆ ನೂತನ ಸಚಿವ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಿ ಪಟ್ಟಿ ಅಂತಿಮ ಮಾಡಿದ್ದು, 29 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ಆದರೆ ಈ ಬಾರಿ ಡಿಸಿಎಂ ಸ್ಥಾನ ಇರೋದಿಲ್ಲ. ಅನುಭವ ಹಾಗೂ ಹೊಸ ಯುವ ಶಕ್ತಿಯ ಎಲ್ಲರಿಗೂ ಸ್ಥಾನ ನೀಡಲಾಗಿದೆ. 7 ಒಬಿಸಿ, 7 ಒಕ್ಕಲಿಗ, ದಲಿತ 3, ಎಸ್​​ಟಿ 1, 8 ಲಿಂಗಾಯತ ಸಮುದಾಯ ಹಾಗೂ ಒಂದು ಮಹಿಳಾ ಸ್ಥಾನಕ್ಕೆ ಅವಕಾಶ ನೀಡಲಾಗಿದೆ ಎಂದರು.

ಪ್ರಧಾನಿ ಮೋದಿ, ನಡ್ಡ ಹಾಗೂ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಸಚಿವ ಸಂಪುಟ ರಚನೆ ಆಗಿದೆ. ಇದರೊಂದಿಗೆ ಬರುವಂತ ಚುನಾವಣೆಯ ಸವಾಲು ಎದುರಿಸಲು ಸಚಿವ ಸಂಪುಟ ರಚನೆಯಾಗಿದ್ದು, ಜನರ ವಿಶ್ವಾಸ ಗಳಿಸಿ, ಒಳ್ಳೆಯ ಆಡಳಿತ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು. ಇದೇ ವೇಳೆ ಪಟ್ಟಿಯಲ್ಲಿ ವಿಜಯೇಂದ್ರ ಹೆಸರು ಇಲ್ಲ ಎಂದು ಸ್ಪಷ್ಟಪಡಿಸಿದರು.

Source: newsfirstlive.com Source link