ಸಚಿವ ಸ್ಥಾನ ರೇಸ್​ನಲ್ಲಿ ಹೆಸರಿರುತ್ತೆ, ಆದ್ರೆ ರಾಜಭವನಕ್ಕೆ ಹೋದ್ರೆ ಕಾಣೆಯಾಗುತ್ತೆ -ರಾಜೂ ಗೌಡ ಬೇಸರ

ಸಚಿವ ಸ್ಥಾನ ರೇಸ್​ನಲ್ಲಿ ಹೆಸರಿರುತ್ತೆ, ಆದ್ರೆ ರಾಜಭವನಕ್ಕೆ ಹೋದ್ರೆ ಕಾಣೆಯಾಗುತ್ತೆ -ರಾಜೂ ಗೌಡ ಬೇಸರ

ಬೆಂಗಳೂರು: ನೂತನ ಸಂಪುಟದಲ್ಲಿ ಸಚಿವ ಸ್ಥಾನ ಕೈ ತಪ್ಪಿರುವದಕ್ಕೆ ಶಾಸಕ ರಾಜೂ ಗೌಡ ಬೇಸರ ವ್ಯಕ್ತ ಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಜೂ ಗೌಡ ಅವರು, ನನ್ನ ಕ್ಷೇತ್ರದ ಜನರು ಶಾಸಕನಾಗಿ ನನ್ನನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಹೀಗಾಗಿ ಶಾಸಕನಾಗಿಯೇ ಇರ್ತೇನೆ. ಸಚಿವ ಸ್ಥಾನ ಕೈತಪ್ಪಿರುವದರಿಂದ ಯಾರು ಬೇಸರ ಮಾಡಿಕೊಳ್ಳಬಾರದು ಎಂದು ಕ್ಷೇತ್ರದ ಜನತೆಗೆ ವಿನಂತಿಸಿಕೊಂಡಿದ್ದಾರೆ.

ಪ್ರತಿ ನೂತನ ಸಂಪುಟ ರಚನೆ ವೇಳೆಯಲ್ಲಿ ನನ್ನ ಹೆಸರು ಇರುತ್ತೆ. ಆದರೆ ರಾಜಭವನಕ್ಕೆ ಹೋದಾಗ ನನ್ನ ಹೆಸರು ಕಾಣೆಯಾಗಿರುತ್ತದೆ. ಇದು ನನಗೆ ಅಭ್ಯಾಸವಾಗಿದೆ ಎಂದು ರಾಜೂ ಗೌಡ ಬೇಸರ ವ್ಯಕ್ತ ಪಡಿಸಿದ್ದು, ಇನ್ನು ಪಕ್ಷ ತಾಯಿ ಇದ್ದಂಗೆ. ಆ ತಾಯಿಗೆ ದ್ರೋಹ ಮಾಡಲ್ಲ ಪಕ್ಷದ ಜೊತೆಯೇ ಇರ್ತೇನೆ ಹೊರತು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Source: newsfirstlive.com Source link