ಒಲಿದ ಸಚಿವ ಸ್ಥಾನ.. ಕ್ಷೇತ್ರದ ಜನತೆಗೆ ನಾನು ಧನ್ಯವಾದ ತಿಳಿಸಿದ ಶಾಸಕ ಮುನಿರತ್ನ

ಒಲಿದ ಸಚಿವ ಸ್ಥಾನ.. ಕ್ಷೇತ್ರದ ಜನತೆಗೆ ನಾನು ಧನ್ಯವಾದ ತಿಳಿಸಿದ ಶಾಸಕ ಮುನಿರತ್ನ

ಬೆಂಗಳೂರು: ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ರಾಜರಾಜೇಶ್ವರಿ ನಗರ ಶಾಸಕರಾದ ಮುನಿರತ್ನ ಅವರಿಗೆ ಸಚಿವ ಸ್ಥಾನ ಕನ್ಫರ್ಮ್​ ಆಗಿದ್ದು, ಈ ಬಗ್ಗೆ ನ್ಯೂಸ್​ಫಸ್ಟ್​​ನೊಂದಿಗೆ ಮಾತನಾಡಿದ ಮುನಿರತ್ನ ಅವರು ಧನ್ಯವಾದ ತಿಳಿಸಿದ್ದಾರೆ.

ಸಚಿವ ಸ್ಥಾನ ಕುರಿತು ಪ್ರತಿಕ್ರಿಯೆ ನೀಡಿದ ಮುನಿರತ್ನ ಅವರು, ಪಕ್ಷ ನನ್ನನ್ನ ಗುರುತಿಸಿ ಸ್ಥಾನ ಕೊಟ್ಟಿರುವದಕ್ಕೆ ಪಕ್ಷಕ್ಕೆ ಋಣಿಯಾಗಿರುತ್ತೇನೆ. ಜನರ ಮತ ಭಿಕ್ಷೆ ಬೇಡಿ ಶಾಸಕನಾಗಿದ್ದೇನೆ. ಈ ನಿಟ್ಟಿನಲ್ಲಿ ಅವರೆ ಸೇವೆ ಮಾಡುತ್ತೇನೆ ಎಂದರು.

ನನಗೆ ಅರ್ಧ ಗಂಟೆ ಮುಂಚೆಯಷ್ಟೇ ಕರೆ ಬಂದಿದೆ. ನಮ್ಮ ಕಚೇರಿ ಕರೆ ಬಂದಿತ್ತು. ಇಂದು ಸಚಿವನಾಗಿ ಪ್ರಮಾಣವಚನ ಸ್ವೀಕಾರ ಮಾಡಲು ಹೋಗುತ್ತಿದ್ದೇನೆ. ನನ್ನ ಕ್ಷೇತ್ರದ ಜನತೆಗೆ ನಾನು ಧನ್ಯವಾದ ಹೇಳುತ್ತಿದ್ದೇನೆ. ಇಂತದ್ದೇ ಖಾತೆ ಬೇಕು ಅನ್ನೋ ನಿರೀಕ್ಷೆಯಲ್ಲಿ ನಾನು ಇಲ್ಲ. ಜನರ ಸೇವೆ ಮಾಡಲು ಯಾವ ಖಾತೆಯಾದ್ರು ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

Source: newsfirstlive.com Source link