ಕೋವಿಡ್ ಲಸಿಕೆ ಉತ್ಪಾದನೆ; ಭಾರತಕ್ಕೆ ನೆರವು ನೀಡುತ್ತೇವೆ ಅಂತ ಈಗ ಹೇಳಿದ್ರು ಜೋ ಬೈಡನ್

ಕೋವಿಡ್ ಲಸಿಕೆ ಉತ್ಪಾದನೆ; ಭಾರತಕ್ಕೆ ನೆರವು ನೀಡುತ್ತೇವೆ ಅಂತ ಈಗ ಹೇಳಿದ್ರು ಜೋ ಬೈಡನ್

ವಾಷಿಂಗ್ಟನ್: ಮಾರಕ ಕೊರೋನಾ ವೈರಸ್​​ ವಿರುದ್ಧ ಲಸಿಕೆ ಉತ್ಪಾದನೆಗೆ ಮುಂದಾಗುವ ಎಲ್ಲಾ ದೇಶಗಳಿಗೂ ಅಮೆರಿಕಾ ನೆರವು ನೀಡಲಿದೆ ಎಂದು ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಈ ಸಂಬಂಧ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಜೋ ಬೈಡನ್​​, ಕೋವಿಡ್​​-19 ವಿರುದ್ಧದ ಲಸಿಕೆಯನ್ನು ಸ್ವಯಂ ಉತ್ಪಾದನೆ ಮಾಡುತ್ತಿರುವ ಭಾರತ ಸೇರಿದಂತೆ ಇತರೆ ರಾಷ್ಟ್ರಗಳಿಗೆ ಅಗತ್ಯ ನೆರವು ಒದಗಿಸಲಿದ್ದೇವೆ ಎಂದರು.

ಜಗತ್ತಿನಾದ್ಯಂತ ಕೊರೋನಾ ವೈರಸ್​ ಹತೋಟಿಗೆ ತರಲು ಹಲವು ಶತಕೋಟಿ ಡೋಸ್‌ಗಳ ಲಸಿಕೆ ಅಗತ್ಯವಿದೆ. ನಾವು ಎಲ್ಲಾ ದೇಶಗಳಿಗೂ 50 ಕೋಟಿ ಡೋಸ್‌ಗಳನ್ನು ನೀಡಲು ಬದ್ಧರಿದ್ದೇವೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹೇಳಿದರು.

ಭಾರತ ಸೇರಿದಂತೆ ಹಲವು ದೇಶಗಳು ಸ್ವಯಂ ಲಸಿಕೆ ಉತ್ಪಾದನೆಯಲ್ಲಿ ತೊಡಗಿವೆ. ಇಂತಹ ದೇಶಗಳ ಸಾಮರ್ಥ್ಯ ವೃದ್ದಿಗೆ ಅಗತ್ಯ ನೆರವು ನೀಡಲು ಪ್ರಯತ್ನಿಸುತ್ತೇವೆ. ನಾವು ಉಚಿತ ನೆರವು ನೀಡುತ್ತಿದ್ದೇವೆ ಹೊರತು ಯಾವುದೇ ಶುಲ್ಕ ವಿಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಶ್ವದ ಎಲ್ಲಾ ದೇಶಗಳು ಕೋವಿಡ್-19 ವಿರುದ್ಧ ಸಮರ ಸಾರುತ್ತಿವೆ. ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಭಾರತವೂ ಲಸಿಕೆ ಉತ್ಪಾದನೆಯಲ್ಲಿ ತೊಡಗಿವೆ. ಕೋವಿಡ್-19 ಲಸಿಕೆಗಳ ಪೂರೈಕೆಯಲ್ಲಿ ಯಾವುದೇ ದೇಶಗಳು ನೀಡದಷ್ಟು ಕೊಡುಗೆ ಭಾರತವೇ ನೀಡಿದ್ದರೂ ನಮ್ಮದೇ ಸಿಂಹಪಾಲು ಎಂದು ಅಮೆರಿಕಾ ಜಂಬ ಕೊಚ್ಚಿಕೊಳ್ಳುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಶುರುವಾಗಿದೆ.

ಭಾರತ ಕೊರೋನಾ ಲಸಿಕಾ ಅಭಿಯಾನದಲ್ಲಿ ವಿಶ್ವದ ಇತರ ಟಾಪ್‌ ದೇಶಗಳನ್ನು ಹಿಂದಿಕ್ಕಿದೆ. ಭಾರತದಲ್ಲಿ ಈವರೆಗೆ 48 ಕೋಟಿಗೂ ಅಧಿಕ ಡೋಸ್​​ ಲಸಿಕೆ ನೀಡಲಾಗಿದೆ. ಇದು ವಿಶ್ವದಲ್ಲೇ ಅತೀ ಹೆಚ್ಚು. ಅಮೆರಿಕಾ ಕೇವಲ 34 ಕೋಟಿ ಡೋಸ್ ಲಸಿಕೆ ನೀಡಿದೆ.

Source: newsfirstlive.com Source link