ಸಚಿವ ಸ್ಥಾನ ಕನ್ಫರ್ಮ್ ಬೆನ್ನಲ್ಲೇ ರೋಲ್ಸ್‌ರಾಯ್ಸ್​ನಲ್ಲಿ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟ ಎಂಟಿಬಿ..

ಸಚಿವ ಸ್ಥಾನ ಕನ್ಫರ್ಮ್ ಬೆನ್ನಲ್ಲೇ ರೋಲ್ಸ್‌ರಾಯ್ಸ್​ನಲ್ಲಿ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟ ಎಂಟಿಬಿ..

ಬೆಂಗಳೂರು: ಸಚಿವ ಸಂಪುಟಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ನೂತನ ಮಂತ್ರಿಗಳ ಪಟ್ಟಿಗೆ ಹೈಕಮಾಂಡ್​ ಅಂಕಿತವೂ ಬಿದ್ದಿದೆ. ಅಧಿಕೃತವಾಗಿ ಸಚಿವರ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಸಚಿವ ಸ್ಥಾನ ಗಿಟ್ಟಿಸಿಕೊಂಡ ವಿಧಾನ ಪರಿಷತ್​ ಸದಸ್ಯ ಎಂಟಿಬಿ ನಾಗರಾಜ್ ವಿಧಾನಸೌಧಕ್ಕೆ ರಾಯಲ್​ ಎಂಟ್ರಿ ಕೊಟ್ಟಿದ್ದಾರೆ.. ನೂತನ ಸಂಪುಟಕ್ಕೆ ತೀವ್ರ ಪೈಪೋಟಿ ನಡೆದ ಬೆನ್ನಲ್ಲೇ ಮಂತ್ರಿಗಿರಿ ಗಿಟ್ಟಿಸಿಕೊಂಡ ಎಂಟಿಬಿ ನಾಗರಾಜ್ ಸಂತಸ ವ್ಯಕ್ರಪಡಿಸಿದ್ದು, ಶಕ್ತಿಸೌಧಕ್ಕೆ ಐಷಾರಾಮಿ ರೋಲ್ಸ್‌ರಾಯ್ಸ್ ಕಾರಿನಲ್ಲಿ ಆಗಮಿಸಿದ್ದಾರೆ.

blank

 

ಈ  ವೇಳೆ ನ್ಯೂಸ್​ಫಸ್ಟ್​ನ ಜೊತೆ ಮಾತನಾಡಿದ ಅವರು ಯಾವ ಖಾತೆ ಕೊಟ್ಟರು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ ಎಂದಿದ್ದು, ನಮ್ಮನ್ನು ಗುರುತಿಸಿ ಮತ್ತೇ ಸಚಿವ ಸ್ಥಾನ ಕೊಡುತ್ತಾರೆ ಎಂಬ ಭರವಸೆ ಇತ್ತು ಆ ಪ್ರಕಾರ ಹೈ ಕಮಾಂಡ್​ ನನಗೆ ಅವಕಾಶ ನೀಡಿದ್ದು ಪಕ್ಷಕ್ಕೆ ಆಭಾರಿಯಾಗಿದ್ದೇನೆ ಎಂದಿದ್ದಾರೆ.

ಈ ಹಿಂದೆ ಅವರು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರು ಬಿಎಸ್​ವೈ ಸಂಪುಟದಲ್ಲಿ ಪೌರಾಡಳಿತ ಮತ್ತು ಸಕ್ಕರೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜ್ಯದ ಶ್ರೀಮಂತ ರಾಜಕಾರಣಿಯಾಗಿರುವ ಎಂಟಿಬಿ ನಾಗರಾಜ್​ ಸಿಎಂ ಬೊಮ್ಮಾಯಿಯವರ ಸಂಪುಟ ಸೇರಲು ತೀವ್ರ ಕಸರತ್ತು ನಡೆಸಿದ್ದರು.

Source: newsfirstlive.com Source link