ಐಸಿಸ್​ ಜತೆ ನಂಟು ಶಂಕೆ: ಮಾಜಿ ಕಾಂಗ್ರೆಸ್​ ಶಾಸಕ, ಸಾಹಿತಿ ಇದಿನಬ್ಬ ಪುತ್ರನ ಮನೆ ಮೇಲೆ NIA ದಾಳಿ

ಐಸಿಸ್​ ಜತೆ ನಂಟು ಶಂಕೆ: ಮಾಜಿ ಕಾಂಗ್ರೆಸ್​ ಶಾಸಕ, ಸಾಹಿತಿ ಇದಿನಬ್ಬ ಪುತ್ರನ ಮನೆ ಮೇಲೆ NIA ದಾಳಿ

ದಕ್ಷಿಣ ಕನ್ನಡ: ಇಂದು ಬೆಳ್ಳಂ ಬೆಳಿಗ್ಗೆ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಮಾಜಿ ಶಾಸಕರ ಮಗನ ಮನೆ ಮೇಲೆ ದಾಳಿ ಮಾಡಿದೆ. ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಶಂಕೆಯಡಿ ಮಂಗಳೂರು ಹೊರವಲಯದ ಉಳ್ಳಾಲದಲ್ಲಿನ ಮನೆಯ ಮೇಲೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿರುವುದಾಗಿ ವರದಿಯಾಗಿದೆ.

blank

ಉಳ್ಳಾಲದ ಮಾಜಿ ಕಾಂಗ್ರೆಸ್​ ಶಾಸಕ ಹಾಗೂ ಸಾಹಿತಿ ಬಿ.ಎಂ.ಇದಿನಬ್ಬ ಅವರ ಪುತ್ರ ಬಾಷಾನ ಮನೆಗೆ ಇಂದು ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಸಿಸ್​ (ISIS) ಭಯೋತ್ಪಾದನಾ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆ ವ್ಯಕ್ತಪಡಿಸಿ ದಾಳಿ ನಡೆಸಿದೆ ಎನ್ನಲಾಗಿದ್ದು, ಇದಿನಬ್ಬ ಮೊಮ್ಮಗ ಅನಾಸ್ ಹಾಗೂ ಸೊಸೆ ಮರಿಯಂ ನನ್ನು ವಿಚಾರಣೆ ನಡೆಸುತ್ತಿರುವದಾಗಿ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:  ಕೊರೊನಾ ಆತಂಕ; ಮಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ

ಈ ಹಿಂದಿನಿಂದಲೂ ಮನೆ ಮಂದಿಯ ಮೇಲೆ ಕಣ್ಣಿಟ್ಟಿದ್ದ ಅಧಿಕಾರಿಗಳು, 2015 ರಲ್ಲಿ ಮಾಜಿ ಶಾಸಕ ಇದಿನಬ್ಬ ಅವರ ಮರಿ ಮೊಮ್ಮಗಳು ಐಸಿಸ್ ಸೇರಿದ್ದ ಆರೋಪ ಕೇಳಿ ಬಂದಿತ್ತು. 6 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಇದಿನಬ್ಬ ಮರಿ ಮೊಮ್ಮಗಳ ಕುಟುಂಬ ಕೆಲ ವರ್ಷಗಳ ಹಿಂದೆ ಕಾಸರಗೋಡಿನ 17 ಮಂದಿ ಜೊತೆ ಸಿರಿಯಾದ ಐಸಿಸ್ ಉಗ್ರ ಸಂಘಟನೆ ಸೇರಿದ್ದ ಬಗ್ಗೆ ವರದಿಯಾಗಿತ್ತು. ಈ 17 ಜನರ ಪೈಕಿ ಇದಿನಬ್ಬ ಅವರ ಮರಿ ಮೊಮ್ಮಗಳು ಅಜ್ಮಲ್ ಕುಟುಂಬವೂ ಇತ್ತು.

ಅಜ್ಮಲ್​ಳನ್ನ ಕೇರಳ ಮೂಲದ ಎಂಬಿಎ ಪದವೀಧರ ಸಿಯಾಝ್ ಎಂಬಾತನ ಜೊತೆ ವಿವಾಹ ಮಾಡಿ ಕೊಡಲಾಗಿತ್ತು ವರ್ಷಗಳ ಹಿಂದೆ ಗಂಡ ಸಿಯಾಝ್ ಉನ್ನತ ಶಿಕ್ಷಣಕ್ಕಾಗಿ ಶ್ರೀಲಂಕಾಕ್ಕೆ ಹೋಗ್ತಿರೋದಾಗಿ ಹೇಳಿ ಹೋದವರು ಇಂದಿನವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ.

ಶ್ರೀಲಂಕಾದಿಂದ ಮಸ್ಕತ್ ಹಾಗೂ ಕತಾರ್​ಗೆ ತೆರಳಿ ಅಲ್ಲಿಂದ ಸಿರಿಯಾಕ್ಕೆ ಹೋಗಿ ಐಸಿಸ್ ಸೇರಿದ್ದಾರೆಂದು ಮಾಹಿತಿ ಇದ್ದು, ಈ ಬಗ್ಗೆ ಕೇರಳ ಆಂತರಿಕ ಭದ್ರತಾ ಹಾಗೂ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಿತ್ತು. ಈ ಪ್ರಕರಣದ ಭಾಗವಾಗಿ ದಾಳಿ ನಡೆದಿರಬಹುದು ಎನ್ನಲಾಗ್ತಿದೆ.

Source: newsfirstlive.com Source link