ಮಾಹಿಷ್ಮತಿಯಿಂದ BSF ಸೇರಿದ ಬಲ್ಲಾಳದೇವ -ಬಾರ್ಡರ್ ಕಾಯಲು ರಾಣಾ ಗನ್‌ ಹಿಡಿದ್ದಿದ್ದು ಯಾಕೆ?

ಮಾಹಿಷ್ಮತಿಯಿಂದ BSF ಸೇರಿದ ಬಲ್ಲಾಳದೇವ -ಬಾರ್ಡರ್ ಕಾಯಲು ರಾಣಾ ಗನ್‌ ಹಿಡಿದ್ದಿದ್ದು ಯಾಕೆ?

ಬಾಹುಬಲಿಯ ಬಲ್ಲಾಳ ದೇವ ಯಾರೆಗೆ ಪರಿಚಯ ಇಲ್ಲ ಹೇಳಿ? ಸಿನಿಮಾದಲ್ಲಿ ತೋರಿದ ಆತನ ಪರಾಕ್ರಮಕ್ಕೆ ನಾವೆಲ್ಲ ಶರಣಾಗಿದ್ವಿ. ಆ ಬಲ್ಲಾಳ ದೇವ ಮಾಹಿಷ್ಮತಿ ಸಾಮ್ರಾಜ್ಯ ಕಾಯೋದು ಬಿಟ್ಟು ಭಾರತದ ಗಡಿ ಕಾಯಲು ಬಂದಿದ್ರಂತೆ. ಹೌದು ಬಾಹುಬಲಿಯ ಬಲ್ಲಾಳ ದೇವ, ನಮ್ಮೆಲ್ಲರ ನೆಚ್ಚಿನ ಖಳನಾಯಕ ರಾಣಾ ದಗ್ಗುಬಾಟಿ ಭಾರತೀಯ ಸೇನೆಯಲ್ಲಿದ್ದಾರೆ! ಅವರು ಅಲ್ಲೇನ್ ಮಾಡ್ತಾ ಇದ್ದಾರೆ.

blank

ಹೌದು.. ರಾಣಾ ನಮ್ಮ ಭಾರತೀಯ ಗಡಿ ರಕ್ಷಣಾ ಪಡೆಯ ಜೊತೆಯಲ್ಲಿದ್ದಾರೆ. ಅಲ್ಲಿ ಯೋಧನಾಗಿ ಗಡಿ ಕಾಯುವ ಕೆಲಸ ಮಾಡ್ತಿದ್ದಾರೆ. ಈ ಹಿಂದೆ ಅವರು ಗಾಜಿ ಅಟ್ಯಾಕ್ ಸಿನಿಮಾದಲ್ಲಿ ನೇವಲ್ ಆಫೀಸರ್ ಆಗಿ ನಟನೆ ಮಾಡಿ, ದೇಶದ ಜನರ ಹತ್ತಿರ ಶಹಬಾಶ್ ಅನ್ನಿಸಿಕೊಂಡಿದ್ರೂ. ಸಮುದ್ರ ಲೋಕದಲ್ಲಿ ಗಡಿ ಕಾಯುವ ಯೋಧನಾಗಿ ನಮ್ಮ ನಿಮ್ಮೆಲ್ಲರ ಮನ ಗೆದ್ದಿದ್ರು. ಆದ್ರೆ ಈಗ ಅವರು ನಿಜವಾದ ಭಾರತೀಯ ಸೈನಿಕರ ಜೊತೆ ಕೈನಲ್ಲಿ ಭಾರವಾದ ವೆಪನ್ ಹಿಡಿದು ಭಾರತ- ಪಾಕ್ ಗಡಿ ಪ್ರದೇಶದ ಕಾವಲಿಗೆ ನಿಂತಿದ್ದಾರೆ. ಗಡಿ ಕಾಯುವ ಯೋಧನಾಗುವುದು ಸಿನಿಮಾದಲ್ಲಿ ನಟನೆ ಮಾಡಿದಷ್ಟು ಸುಲಭ ಅಲ್ಲ ಅಂತ ಅರಿತು ಕೊಳ್ತಾ ಇದ್ದಾರೆ.

ರೈಫಲ್ ಟ್ರೈನಿಂಗ್ ನಲ್ಲಿ ರಾಣಾ ಪಟ್ಟ ಪಾಡು ಏನು?
ಅಸಲಿಗೆ ಅವರು ಬಾರ್ಡರ್ ಸ್ಯೆಕ್ಯುರಿಟಿ ಫೋರ್ಸ್ ನವರ ಜೊತೆ ಏನ್ ಏನ್ ಮಾಡ್ತಾ ಇದ್ದಾರೆ ಗೊತ್ತಾ?

ರಾಣಾ ದಗ್ಗುಬಾಟಿ ಬಿ ಎಸ್ ಎಫ್ ಯೋಧರ ಕಷ್ಟಗಳೇನು, ಅವರು ಅಲ್ಲಿ ಏನೆಲ್ಲ ತೊಂದರೆಗಳನ್ನು ಅನುಭವಿಸುತ್ತಾರೆ ಅನ್ನುವ ಅನುಭವ ಪಡೆಯಲು ಒಂದು ದಿನದ ಮಟ್ಟಿಗೆ ಆರ್ಮಿ ಸೇರಿದ್ದಾರೆ. ಆ ಪ್ರದೇಶ ಎಂತದ್ದು ಅಂದ್ರೆ ಅಲ್ಲಿ ನಮ್ಮ ನಿಮ್ಮ ತರ ಸಾರ್ವಜನಿಕರು ಹೋಗಲು ಅನುಮತಿ ಸಹ ಇಲ್ಲ. ಸ್ವಲ್ಪ ಎಚ್ಚರ ತಪ್ಪಿದರೆ ಕೈಯಲ್ಲಿ ಬಂದೂಕಗಳನ್ನು ಹಿಡಿದ ಪಾಕ್ ಟೆರೆರಿಸ್ಟ್ ಗಳು ಕದ್ದು ನುಗ್ಗಿ ಬರುವ ಜಾಗವದು. ಅಂತಹ ಕುತಂತ್ರಿಗಳನ್ನು ಮಟ್ಟ ಹಾಕಲು ನಮ್ಮ ಬಾರ್ಡರ್ ಸ್ಯೆಕ್ಯೂರಿಟಿ ಫೋರ್ಸ್ ಯಾವಾಗಲು ಹದ್ದಿನ ಕಣ್ಗಾವಲಿನಲ್ಲಿ ಇರುತ್ತೆ. ಇಂತಹ ಪ್ರದೇಶಕ್ಕೆ ರಾಣಾ ಹೈ -ಟೆಕ್ ಚಾಪರ್ ನಲ್ಲಿ ರಾಜನಂತೆ ಬಂದಿಳಿಯುತ್ತಾರೆ.

blank

ನೋಡಲು ಆರುವರೆ ಅಡಿ ಎತ್ತರದ ರಾಣಾ, ಯೋಧರ ಸಮವಸ್ತ್ರ ಧರಿಸಿದರೆ ಥೇಟ್ ಯೋಧನಂತೆ ಕಾಣಿಸಿ ಬಿಡ್ತಾರೆ, ಆದರೆ ಯೋಧರ ಸಾಮರ್ಥ್ಯಕ್ಕೆ ಇವರ ದೇಹ ಸ್ಪಂದಿಸುತ್ತಾ ? ಊಹಿಸಲಾಗಲ್ಲ. ಆದ್ರೆ ರಾಣಾರವರ ಸಾಹಸ ಪರೀಕ್ಷೆಯನ್ನು ಸ್ವತಃ ಬಿ ಎಸ್ ಎಫ್ ಯೋಧರೇ ಪರೀಕ್ಷಿಸುತ್ತಿದ್ದಾರೆ. ಸಾವ್ದಾನ್ , ವಿಶ್ರಾಮ್ ಎನ್ನುವ ಎರಡು ಕಮ್ಯಾಂಡ್ ಜೊತೆ, ಆ ಭಾರವಾದ ಶಸ್ತ್ರಾಸ್ತ್ರವನ್ನು ಹೇಗೆ ಕೈಯಲ್ಲಿ ಹಿಡಿಯುವುದು ಎನ್ನುವದನ್ನು ರಾಣಾ ಮೊದಲೆ ಅಭ್ಯಾಸ ಮಾಡಿದ್ದರು ಅನ್ಸುತ್ತೆ. ಶಿಸ್ತಿನ ಸಿಪಾಯಿಯಂತೆ, ಎಲ್ಲ ಯೋಧರ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಂತೆ ಇನ್ ತ್ರೀಸ್ ನಲ್ಲಿ ನಿಂತು ಬಿಟ್ಟಿದ್ದಾರೆ. ಕಮ್ಯಾಂಡರ್ ರಾಣಾ ಎಂದು ಕೂಗಿದರೆ ಎಸ್ ಸಾರ್ ಎಂದು ತನ್ನ ಇರುವಿಕೆಯನ್ನು ಸಮರ್ಥಿಸಿಕೊಳ್ತಾ ಇದ್ದಾರೆ. ಫಾಲ್ ಔಟ್ ಕಮ್ಯಾಂಡ್ ಅಂದ್ರೆ ಗುಂಪಿನಿಂದ ಹೊರ ಬರಲು ಕಮ್ಯಾಂಡರ್ ಹೇಳಿದರೆ, ತಪ್ಪು ಹೆಜ್ಜೆ ಇಟ್ಟು ಅದನ್ನು ಮುಗ್ಧನಂತೆ ಮತ್ತೆ ಕಲಿತು, ಆ ಯೋಧರ ಶಿಸ್ತನ್ನು ಅಭ್ಯಾಸ ಮಾಡಿಕೊಳ್ತಾ ಇದ್ದಾರೆ ಮಾಹಿಷ್ಮತಿಯ ಬಲ್ಲಾಳ ದೇವ.

ಮೊದಲ ಹಂತದ ಟ್ರೈನಿಂಗ್ ಮಾಡಲು ರಾಣಾ ತೊಟ್ಟ ಪಣ
ಬಾರ್ಡರ್ ನಲ್ಲಿ ಬಲ್ಲಾಳದೇವನ ಬಲವಂತ ಬಲ ಪ್ರದರ್ಶನ

ಬಿಎಸ್ಎಫ್ ಟ್ರೈನಿಂಗ್ ಅಂದ್ರೆ ಸುಲಭದ ಮಾತಲ್ಲ. ಅದು ಬೆವರಿನ ಜಾಗದಲ್ಲಿ ರಕ್ತ ಹರಿಸುವ ಪ್ರಾಕ್ಟೀಸ್. ಅಭ್ಯಾಸವಿಲ್ಲದ್ದರೇ ಅಲ್ಲಿ ಸಾಧಿಸುವುದು ಅಷ್ಟು ಸುಲಭವಲ್ಲ. ಆದರೆ ರಾಣಾ ದಗ್ಗುಬಾಟಿ ಅದೇನೇ ಆಗಲಿ ಮಾಡಿ ಬೀಡೂಣ ಅಂತ ಪಣ ತೊಟ್ಟು ನಿಂತಿದ್ದಾರೆ. ಮೊದಲ ಹಂತದ ಟ್ರೈನಿಂಗ್​ನಲ್ಲಿ ಎಲ್ಲ ಯೋಧರ ಜೊತೆ ಕೈಯಲ್ಲಿ ವೆಪನ್ ಹಿಡಿದು, ಕಾಲುಗಳಲ್ಲಿ ಡಿಗ್ ಮಾರ್ಚ್ ಲೆದರ್ ಶೂಸ್ ಹಾಕಿ, ಆ ಭಯಾನಕ ಬಿಸಿಲಿನಲ್ಲಿ 3.5 ಕಿಲೋ ಮೀಟರ್ ಗಳ ನಿಲ್ಲದ ಓಟ. ಅಷ್ಟೆನಾ ಅನ್ನುವ ಹಾಗೆ ಇಲ್ಲ. ಇದಾದ ಬಳಿಕ ಒಬ್ಬ ಯೋಧ ಮತ್ತು ಅವನ ವೆಪನ್ ಜೊತೆ ಹೆಗಲ ಮೇಲೆ ಹೊತ್ತು ಸೇಫ್ ಜಾಗ ತಲುಪಬೇಕು. ನಂತರ 9 ಅಡಿ ಗುಂಡಿಯನ್ನು ಹಾರಿ ನಿಂತು ಪ್ರಾಕ್ಟೀಸ್ ಮುಗಿಸಬೇಕು, ಇಷ್ಟು ಕೆಲಸಕ್ಕೆ ರಾಣಾ ಬಳಿ ಇರೋದು ಕೇವಲ 14 ನಿಮಿಷ ಮಾತ್ರ.
ಮೂರುವರೆ ಕಿಲೋ ಮೀಟರ್, ಆ ಬಿಸಿಲಿನಲ್ಲಿ ಓಡೋದು ಅಂದ್ರೆ ಹುಡುಗಾಟನ., ಓಟ ಶುರು ಮಾಡಿದಾಗ ಇದ್ದ ಉತ್ಸಾಹ ರಾಣಾಗೆ ಓಟದ ಗುರಿ ತಲುಪುವ ಹೊತ್ತಿಗಾಗಲೇ ಕಡಿಮೆ ಆಗಿ ಬಿಟ್ಟಿತ್ತು. ಏದುಸಿರು ಬಿಡುತ್ತಾ, ಕಣ್ಕಣ್ಣು ಮಿಟುಕಿಸಿ ಮುಗಿತಾ ಇನ್ನು ಇದ್ಯಾ ಅನ್ನುವಂತಾಗಿ ಬಿಟ್ಟಿದ್ದರು ರಾಣಾ. ಕೊನೆಗೂ ಓಟದ ಗುರಿ ತಲುಪಿ ಸುಧಾರಿಸಿಕೊಂಡರು. ತನ್ನ ಕಾಲುಗಳನ್ನು ಒತ್ತಿ ನೋವು ನಿವಾರಿಸಿಕೊಂಡರು. ಇನ್ನು ಎರಡು ಟಾಸ್ಕ್ ಇದ್ದಂತೆಯೇ ನೆರಳಿಲ್ಲಿ ವಿಶ್ರಮಿಸಲು ಶುರು ಮಾಡಿದ್ದರು. ಆಗ ಅಲ್ಲಿಗೆ ಬಂದ ಕಮ್ಯಾಂಡರ್ ಅವರನ್ನು ಮತ್ತೆ ಉತ್ತೇಜಿಸಿದರು‘. ದೇಶ ಸೇವೆ ಅಂದ್ರೇನೆ ಹೀಗೆ.. ಮೈ ಕಟ್ಟುವ ಹಾಗೆ ಇಲ್ಲ, ಎಂದು ಜೋಶ್ ತುಂಬಿ ಮುಂದಿನ ಟಾಸ್ಕ್ ಗೆ ರಾಣಾರನ್ನು ಕರೆದೊಯ್ದರು.

blank

ಜಿಮ್ ನಲ್ಲಿ weights ಎತ್ತಿ ಅಭ್ಯಾಸವಿದ್ದ ರಾಣಾಗೆ ಈ ಟಾಸ್ಕ್ ಅಷ್ಟು ಕಷ್ಟ ಅನ್ನಿಸಲಿಲ್ಲ. ಒಬ್ಬ ಫೈಯರ್ಡ್ ಮ್ಯಾನ್, ಅನ್ನು ಹೆಗಲ ಮೇಲೆ ಹೊತ್ತು, ಸೇಫ್ ಜೋನ್ ಗೆ ಹೊತ್ತು ತಂದರು, ಮುಂದೆ 9 ಅಡಿಯ ಲಾಂಗ್​ ಜಂಪ್​ ಸಹ ಅದೇ ಜೋಶ್ ನಲ್ಲಿ ಕಂಪ್ಲೀಟ್ ಮಾಡಿ ಎಲ್ಲ ಯೋಧರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು ರಾಣಾ.
ಸಿನಿಮಾಗಳಲ್ಲಿ ಬಗೆ ಬಗೆಯ ವೆಪನ್ ಹಿಡಿದು ಇನ್ನೊಬ್ಬರಿಗೆ ಫೈಯರ್ ಮಾಡಿದ್ದ ರಾಣಾಗೆ ಇದು ನಿಜವಾದ ಫೈಯರಿಂಗ್ ಅನುಭವ. ಅವರ ಕೈಯಲ್ಲಿ ಇದ್ದದ್ದು 5.56 ಎಮ್ ಎಮ್ ಇನ್ ಸಾಸ್ ರೈಫಲ್. ಮುಂದಿರುವ ಗುರಿಯನ್ನು ಹೇಗೆ ನಿಖರವಾಗಿ ಪೈಯರ್ ಮಾಡಬೇಕು ಅನ್ನೋದನ್ನು ರಾಣಾಗೆ ಸಂಪೂರ್ಣ ಟ್ರೈನಿಂಗ್ ನೀಡಲಾಯಿತು. ಅದರಂತೆ ರಾಣಾ, ಯೋಧನಂತೆ ರೈಫಲ್ ಜೊತೆ ಮಲಗಿ ಬುಲೆಟ್ಸ್ ಗಳನ್ನು ರೋಲ್ ಮಾಡಿ ಒಂದೇ ಸಮನೇ ಪೈಯರಿಂಗ್ ಪ್ರಾಕ್ಟೀಸ್ ಸಹ ಮಾಡಿದ್ದರು. ಇವರ ನಿಖರತೆಯನ್ನು ಇನ್ನು ಬಲ ಗೊಳಿಸಲು ಕಮ್ಯಾಂಡರ್ ಕುದ್ದು ರಾಣಾ ಪಕ್ಕದಲ್ಲಿ ಹಲವು ಸೂಚನೆಗಳನ್ನು ನೀಡುತ್ತಲೇ ಇದ್ದರು.

ಚಪ್ಪಾಳೆ ಗಟ್ಟಿಸಿದ ರಾಣಾ
ಮುಂದಿನ ಹಂತದ ಟ್ರೈನಿಂಗ್ ಅಂದ್ರೆ ಬಾರ್ಡರ್ ಪ್ಯಾಟ್ರೋಲಿಂಗ್. ಇದು ರಾಣಾಗೆ ಬಲು ಕುಶಿ ಕೊಟ್ಟ ಅಭ್ಯಾಸ ಅನ್ಸತ್ತೆ. ಗಡಿ ರಕ್ಷಣೆಯಲ್ಲಿ ತೊಡಗುವ ಸೈನಿಕರು ಭಾರತ- ಪಾಕ್ ಬಾರ್ಡರ್ ನಲ್ಲಿ ಯಾವಾಗಲೂ ಒಂಟೆ ಮೇಲೆ ಸವಾರಿ ಮಾಡುತ್ತಾ, ದೇಶದೊಳಕ್ಕೆ ಕಾಲಿಡುವ ಕಳ್ಳರ ಮೇಲೆ ಕಾವಲಿಡುತ್ತಾರೆ. ಈ ಕಾಯಕ ಹಗಲು ರಾತ್ರಿಯನ್ನದೆ ಸುಧೀರ್ಘವಾಗಿ ನಡೆಯುತ್ತಲೇ ಇರುತ್ತೆ. ಇಷ್ಟು ವಿಶಾಲವಾದ ಮರಳುಗಾಡಿನಲ್ಲಿ ಯಾವಾಗ ಬೇಕಾದರೂ ಪಾಕ್ ಉಗ್ರರು ಕಾಲಿಡಬಹುದು. ಈ ಕಾವಲು ಕೆಲಸದಲ್ಲಿ ರಾಣಾರವರು ಸಹ ಭಾಗಿ ಆಗಿದ್ರೂ. ಒಂಟೆ ಮೇಲೆ ಕುಳಿತು, ಆ ಮರಳುಗಾಡಿನಲ್ಲಿ ಉಗ್ರರ ಸುಳಿವನ್ನು ಹುಡುಕ ಹತ್ತಿದ್ದರು.

blank

ಆ ಮರಳು ಪ್ರದೇಶದಲ್ಲಿ ಎಲ್ಲಿಯಾದರು ಹೆಜ್ಜೆ ಗುರುತುಗಳು ಕಂಡರೆ ಅಲ್ಲಿ ಪ್ಯಾಟ್ರೋಲಿಂಗ್ ನಿಲ್ಲಿಸಿ, ಉಗ್ರರ ಸುಳಿವನ್ನು ಹುಡಕಬೇಕಾಗುತ್ತದೆ. ಹೀಗೆ ಎಷ್ಟೋ ಹೊತ್ತು ಸುತ್ತಿದ್ದರು ಅಲ್ಲಿ ಯಾರ ಸುಳಿವು ಕಾಣಿಸಲಿಲ್ಲ. ಆದರೆ ಆ ಒಂದು ಹೋರಾಟದ ಅನುಭವ ಹೇಗಿರುತ್ತೆ ಅನ್ನೋದನ್ನು ರಾಣಾ ಅವರು ನೋಡಲೇ ಬೇಕಿತ್ತು. ಅದಕ್ಕೆಂದೆ ಬಿ ಎಸ್ ಎಫ್ ಕಡೆಯಿಂದ ಉಗ್ರಗಾಮಿಗಳ ಹಾಗೆ ಕೆಲವರು ವೇಷ ಧರಿಸಿ ಆ ಒಂದು ಅನುಭವವನ್ನು ರಾಣಾರಿಗೆ ತೋರಿಸಿಕೊಟ್ಟರು ಯೋಧರು. ಅಲ್ಲಿಗೆ ರಾಣಾರವರ ಯೋಧರ ಜೊತೆಗಿನ ಒಂದು ದಿನ ಕಂಪ್ಲೀಟ್ ಆಯಿತು. ಆದರೆ ಬಿ ಎಸ್ ಎಫ್ ಕಡೆಯಿಂದ ರಾಣಾಗೆ ಕೊನೆಯದಾಗಿ ಒಂದು ಸರ್ಪ್ರೈಸ್ ಕಾದಿತ್ತು. ಅದೇನು .. ಗೊತ್ತಾ ?

ಯೋಧರ ಕಷ್ಟ ಅರಿತ ಖಳನಾಯಕ
ದಿನ ಮುಗಿದಿತ್ತು, ರಾಣಾ ಯೋಧರ ಕಷ್ಟಗಳನ್ನು ಕಣ್ಣಾರೆ ನೋಡಿ, ಸ್ವತಃ ತಾನೆ ಅನುಭವಿಸಿ ಸುಸ್ತಾಗಿ ಹೋಗಿದ್ದರು. ಅವರ ಉತ್ಸಾಹ ಮತ್ತೆ ತುಂಬಿ ಅವರನ್ನು ಬೀಳ್ಕೊಡುವುದು ಕಮ್ಯಾಂಡರ್ ಗಳ ಪ್ಲಾನ್ ಆಗಿತ್ತು. ಇದಕ್ಕಾಗಿ ನೈಟ್ ಪಾರ್ಟಿ ಸಿದ್ದ ಪಡಿಸಿದ್ದರು ಸೈನಿಕರು. ಅಲ್ಲಿ ಹಾಡುಗಾರರಿದ್ದರು. ಮನರಂಜಿಸುವ ಹಾಡುಗಳನ್ನು ಹಾಡುತ್ತಿದ್ದರು. ರಾಣಾ ತನ್ನ ಇಡಿ ದಿನದ ಸುಸ್ತನ್ನು ಅಲ್ಲೆ ಮರೆತು, ತನ್ಮಯರಾಗಿ ಬಿಟ್ಟರು. ಅಲ್ಲಿದ್ದ ಎಲ್ಲ ಸೈನಿಕರೊಂದಿಗೆ ಮಾತುಕತೆ, ವುಮೆನ್ ವಿಂಗ್ ರವರ ಜೊತೆ ಸಂವಾದದಿಂದ ರಾಣಾ ಯೋಧರ ಶ್ರಮ, ಬಲಿದಾನ ಹಾಗೂ ತ್ಯಾಗವನ್ನು ಮತ್ತೆ ಮತ್ತೆ ನೆನೆದು, ಇನ್ನಷ್ಟು ಹೆಮ್ಮೆ ಪಟ್ಟರು. ಅಲ್ಲಿದ್ದ ಕಮ್ಯಾಂಡರ್ ನೀವು ಯೋಧರಾಗಲು ಫಿಟ್ ಇದ್ದಿರಾ, ಮತ್ತೆ ಮತ್ತೆ ಬನ್ನಿ.,. ಯೋಧರಾಗಿ ನಮ್ಮೊಂದಿಗೆ ಇರಿ ಎನ್ನುವ ಮಾತುಗಳ ಜೊತೆ.. ಅಲ್ಲಿದ್ದ ಎಲ್ಲ ಯೋಧರು ಹಾಡಿಗೆ ಕುಣಿದು ಕುಪ್ಪಳಿಸಿ ಸೈನಿಕರ ಸೇವೆಯನ್ನು ಮರೆಯಲಾರದಷ್ಟು ಅನುಭವ ಪಡೆದಿದ್ದರು ರಾಣಾ ದಗ್ಗುಬಾಟಿ.

blank

ಸಿನಿಮಾದಲ್ಲಿ ಶಕ್ತಿಯುತ ಹೀರೋ.. ಅಲ್ಲಿನ ಕಷ್ಟಗಳನ್ನು ಚಿಟಿಕಿ ಹೊಡೆಯುವ ಅಷ್ಟರಲ್ಲಿ ಕ್ಲಿಯರ್ ಮಾಡ್ಕೊಂಡ್ ಬಿಡ್ತಾರೆ. ಆದರೆ ನಿಜವಾದ ಹೀರೋಗಳೂ, ನಿಜವಾದ ಕಷ್ಟ ಏನು ಅನ್ನುವ ಅರಿವೂ ಈ ಒಂದು ದಿನದಲ್ಲಿ ಎಷ್ಟೋ ಅರ್ಥವಾಗುತ್ತೆ,. ಇದಿಷ್ಟು ಬಾರ್ಡರ್ ನಲ್ಲಿದ್ದ ಬಲ್ಲಾಳದೇವನ ಕಥೆ.

Source: newsfirstlive.com Source link