ಓಲೇಕಾರ್​​ಗೆ ಕೈ ತಪ್ಪಿದ ಸಚಿವ ಸ್ಥಾನ; BJP ಬಾವುಟ ಹಿಡಿದು ಬೆಂಬಲಿಗರಿಂದ ಉರುಳು ಸೇವೆ ಮಾಡಿ ಪ್ರತಿಭಟನೆ

ಓಲೇಕಾರ್​​ಗೆ ಕೈ ತಪ್ಪಿದ ಸಚಿವ ಸ್ಥಾನ; BJP ಬಾವುಟ ಹಿಡಿದು ಬೆಂಬಲಿಗರಿಂದ ಉರುಳು ಸೇವೆ ಮಾಡಿ ಪ್ರತಿಭಟನೆ

ಹಾವೇರಿ: ರಾಜ್ಯ ನೂತನ ಸಿಎಂ ಬಸವರಾಜ್​​ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಬಹುತೇಕ ಫೈನಲ್​ ಆಗಿದೆ. ಹಿರಿಯ ಬಿಜೆಪಿ ಶಾಸಕರಾದ ಎಂ.ಪಿ ರೇಣುಕಾಚಾರ್ಯ, ಸುರೇಶ್​​ ಕುಮಾರ್​ ಸೇರಿದಂತೆ ಹಲವರಿಗೆ ಸಚಿವ ಸ್ಥಾನ ಕೈ ತಪ್ಪಿದೆ ಎನ್ನಲಾಗಿದೆ. ಎಷ್ಟೋ ಶಾಸಕರು ದೆಹಲಿಯಲ್ಲೇ ಬೀಡುಬಿಟ್ಟು ಮಂತ್ರಿಗಿರಿಗಾಗಿ ಭರ್ಜರಿ ಲಾಬಿ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಲಾಗುತ್ತಿದೆ. ಇದೀಗ ಹಾವೇರಿ ಶಾಸಕ ನೆಹರು ಓಲೆಕಾರ್ ಅವರಿಗೂ ಸಚಿವ ಸ್ಥಾನ ಕೈ ತಪ್ಪಿದ್ದು, ಬೆಂಬಲಿಗರು ಬೀದಿಗಳಿದು ಪ್ರತಿಭಟಿಸುತ್ತಿದ್ದಾರೆ.

ನಗರದ ಸಿದ್ದಪ್ಪ ಸರ್ಕಲ್​​ನಲ್ಲಿ ಶಾಸಕ ಒಲೇಕಾರ್​​ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಬಿಜೆಪಿ ಬಾವುಟ ಹಿಡಿದು ಊರುಳು ಸೇವೆ ಮಾಡುತ್ತಾ ಪ್ರತಿಭಟನೆ ಮಾಡಿದ ಬೆಂಬಲಿಗರು ಓಲೆಕಾರ್​​ಗೆ ಮಂತ್ರಿ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು. ಮಂತ್ರಿ ಸ್ಥಾನ ನೀಡೋವರೆಗೂ ಹೋರಾಟ ಮಾಡುತ್ತೇವೆ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ನಮ್​ ಸಚಿವರಿಗೆ ಸಚಿವಸ್ಥಾನ ಕೊಟ್ಟಿಲ್ಲ ಅಂದ್ರೆ..?! ವಾಟರ್​ ಟ್ಯಾಂಕ್ ಏರಿದ ಅಭಿಮಾನಿಗಳು

ಇನ್ನು, ಓಲೆಕಾರ್​​​ ಬೆಂಬಲಿಗರಿಂದ ರಸ್ತೆಯ ಮದ್ಯೆಯೆ ವಾಹನಗಳು ನಿಲ್ಲೆಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಸಿದ್ದಪ್ಪ ಸರ್ಕಲ್​​​​ನಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಿರುವ ಪೊಲೀಸರು ಯಾವ ವಾಹನಗಳನ್ನು ಬಿಡುತ್ತಿಲ್ಲ ಎಂದು ತಿಳಿದು ಬಂದಿದೆ.

Source: newsfirstlive.com Source link