ತಪ್ಪಿದ ಸಚಿವ ಸ್ಥಾನ -ಅರವಿಂದ್​ ಬೆಲ್ಲದ್ ಬೆಂಬಲಿಗರಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ತಪ್ಪಿದ ಸಚಿವ ಸ್ಥಾನ -ಅರವಿಂದ್​ ಬೆಲ್ಲದ್ ಬೆಂಬಲಿಗರಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಧಾರವಾಡ: ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್​ ಬೆಲ್ಲದ ಅಭಿಮಾನಿಗಳು ಪ್ರತಿಭಟನೆಗಿಳಿದಿದ್ದಾರೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಪ್ರತಿಭಟನೆಗೆ ಮುಂದಾದ ಅಪಾರ ಬೆಂಬಲಿಗರು ತಮ್ಮ ಶಾಸಕನಿಗೆ ಸಚಿವ ಸ್ಥಾನ ನೀಡದಕ್ಕೆ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನ ಕನ್ಫರ್ಮ್ ಬೆನ್ನಲ್ಲೇ ರೋಲ್ಸ್‌ರಾಯ್ಸ್​ನಲ್ಲಿ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟ ಎಂಟಿಬಿ..

ಈ ವೇಳೆ ಪ್ರತಿಭಟನೆ ಮಾಡದಂತೆ ಅಭಿಮಾನಿಗಳನ್ನು ಪೊಲೀಸರು ತಡೆದಿದ್ದು, ಅಲ್ಲಿಂದ ಚೆನ್ನಮ್ಮ ವೃತ್ತದ ಬಳಿ ಜಮಾಯಿಸಿದ ಅಭಿಮಾನಿಗಳು ಅಲ್ಲಿಯೂ ಪ್ರತಿಭಟನೆ ನಡೆಸಿದ್ದಾರೆ. 50ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಅರವಿಂದ್ ಬೆಲ್ಲದರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ಕೈ ತಪ್ಪಿದ ಸಚಿವ ಸ್ಥಾನ.. ಬಿಎಸ್​​ವೈ ಎದುರು ಗದ್ಗದಿತರಾಗಿ ಕಣ್ಣೀರಿಟ್ಟ ಶಾಸಕ ರೇಣುಕಾಚಾರ್ಯ!

Source: newsfirstlive.com Source link