BigNews: ಸಮುದ್ರಕ್ಕಿಳಿದ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್

BigNews: ಸಮುದ್ರಕ್ಕಿಳಿದ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್

ಭಾರತದ ಮೊದಲ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್  ಪರೀಕ್ಷಾರ್ಥ ಕಡಲಿಗೆ ಇಳಿದಿದೆ. ಮುಂದಿನ ವರ್ಷ 2022 ಜುಲೈ ತಿಂಗಳಿನಿಂದ ಕಾರ್ಯಾಚರಣೆಗೆ ಲಭ್ಯವಾಗಲಿದೆ ಎಂದು ನೌಕಾಪಡೆ ತಿಳಿಸಿದೆ. ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲೇ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ಕೊಚ್ಚಿ ಹಡಗು ಕಟ್ಟೆಯಲ್ಲಿ ಸಮುದ್ರಕ್ಕಿಳಿಸಲಾಯಿತು. ಈ ವೇಳೆ ವಿಕ್ರಾಂತ್​​ನ ಅಂತಿಮ ಸುತ್ತಿನ ಎಲ್ಲಾ ರೀತಿಯ ಪರೀಕ್ಷೆಗಳನ್ನು ಪರಿಶೀಲಿಸಿದ ನೌಕಾಪಡೆ, ಇದು ಮುಂದಿನ ವರ್ಷ ಕಾರ್ಯಾಚರಣೆಗೆ ಲಭ್ಯವಾಗಲಿದೆ ಎಂದು ತಿಳಿಸಿತು.

ಇನ್ನು, ನೌಕೆ ವಿಕ್ರಾಂತ್​​​ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಸರಣಿ ಪರೀಕ್ಷೆ ಹಾಗೂ ಸ್ಥಿರ ಮತ್ತು ಕ್ರಿಯಾಶೀಲತೆಯ ಪ್ರಾಯೋಗಿಕ ಪ್ರಕ್ರಿಯೆಗಳಿಗೆ ಒಳಪಡಿಸಲಾಗಿತ್ತು. ಈಗ ಎಲ್ಲ ಪರೀಕ್ಷೆಗಳಲ್ಲೂ ಪಾಸ್​ ಆಗಿರುವ ವಿಕ್ರಾಂತ್​​​ ಸದ್ಯದಲ್ಲೇ ನೌಕಾಪಡೆಗೆ ಸೇರಲಿದೆ. ಬಳಿಕ ಇದು ಭಾರತ ಹೊಸ ಹೆಗ್ಗಳಿಕೆಗೆ ಪಾತ್ರವಾಗಲಿದೆ. ವಿಮಾನವಾಹನ ನೌಕೆಯನ್ನು ದೇಶೀಯವಾಗಿ ನಿರ್ಮಿಸುವ ಕೆಲವೇ ಕೆಲವು ದೇಶಗಳಾದ ಅಮೆರಿಕ, ರಷ್ಯಾ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳ ಸಾಲಿನಲ್ಲಿ ಭಾರತ ಸಹ ವಿರಾಜಮಾನವಾಗಲಿದೆ.

ಇನ್ನು, ಕೊಚ್ಚಿನ್ ಬಂದರಿನ ಎರ್ನಾಕುಲಂನ ಹಡಗು ನಿರ್ಮಾಣ ಸ್ಥಳದಲ್ಲಿ ಐಎನ್ಎಸ್ ವಿಕ್ರಾಂತ್ ನಿರ್ಮಾಣ ಪ್ರಗತಿಯನ್ನು ರಾಜನಾಥ್​ ಸಿಂಗ್ ವೀಕ್ಷಿಸಿ ಮಾತಾಡಿದರು. ಈ ನೌಕೆಯ ಯುದ್ಧ ಸಾಮರ್ಥ್ಯ, ತಲುಪವ ಶಕ್ತಿ ಹಾಗೂ ವೈವಿಧ್ಯವು ಭಾರತದ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಕ್ರಾಂತ್​​​ ಅನ್ನು ಕೊಚ್ಚಿ ಹಡಗು ಕಟ್ಟೆಯಲ್ಲಿ ಸಮುದ್ರಕ್ಕಿಳಿಸಿದ ವಿಡಿಯೋ ಕ್ಯಾಮಾರದಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ಈ ವಿಡಿಯೋ ಭಾರೀ ವೈರಲ್​ ಆಗಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link