ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್- ಅಶ್ವಿನ್​, ಇಶಾಂತ್ ಔಟ್- ಶಾರ್ದುಲ್, ಸಿರಾಜ್​ಗೆ ಸ್ಥಾನ​

ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್- ಅಶ್ವಿನ್​, ಇಶಾಂತ್ ಔಟ್- ಶಾರ್ದುಲ್, ಸಿರಾಜ್​ಗೆ ಸ್ಥಾನ​

ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ನಾಟಿಂಗ್​ಹ್ಯಾಮ್​​​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಅನುಭವಿ ಸ್ಪಿನ್ನರ್​ ಅಶ್ವಿನ್, ಅನುಭವಿ ವೇಗಿ ಇಶಾಂತ್ ಶರ್ಮಾರನ್ನ ತಂಡದಿಂದ ಕೈಬಿಡಲಾಗಿದೆ. ಯುವ ವೇಗಿಗಳಾದ ಶಾರ್ದೂಲ್ ಠಾಕೂರ್, ಮಹಮ್ಮದ್ ಸಿರಾಜ್ ಆಡುವ ಹನ್ನೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ರವೀಂದ್ರ ಜಡೇಜಾ ಏಕೈಕ ಸ್ಪಿನ್ನರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಕೆ.ಎಲ್.ರಾಹುಲ್, ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

Source: newsfirstlive.com Source link