ಟೋಕಿಯೋ ಒಲಿಂಪಿಕ್ಸ್​: ಫೈನಲ್​​​ಗೆ ಲಗ್ಗೆ ಇಟ್ಟ ಕುಸ್ತಿ ಪಟು ರವಿ ದಹಿಯಾ.. ಚಿನ್ನಕ್ಕಾಗಿ ಹೋರಾಟ

ಟೋಕಿಯೋ ಒಲಿಂಪಿಕ್ಸ್​: ಫೈನಲ್​​​ಗೆ ಲಗ್ಗೆ ಇಟ್ಟ ಕುಸ್ತಿ ಪಟು ರವಿ ದಹಿಯಾ.. ಚಿನ್ನಕ್ಕಾಗಿ ಹೋರಾಟ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಅಗ್ರ ಕುಸ್ತಿಪಟು ರವಿ ದಹಿಯಾ ಭಾರತಕ್ಕೆ ಮತ್ತೊಂದು ಪದಕ ಪಕ್ಕಾ ಮಾಡಿದ್ದಾರೆ. ವಿಶ್ವದ ನಾಲ್ಕನೇ ಶ್ರೇಯಾಂಕಿತ ರವಿಕುಮಾರ್‌ ದಹಿಯಾ, 57 ಕೆ.ಜಿ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನುರಿಸ್ಲಾಂ ಸನಯೇವ್​ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಕುಸ್ತಿ ವಿಭಾಗದಲ್ಲಿ ರವಿಕುಮಾರ್​​​​ ಫೈನಲ್​ ಪ್ರವೇಶಿಸಿದ್ದಾರೆ.

ಈ ಮುನ್ನ ರವಿಕುಮಾರ್‌ ದಹಿಯಾ ಪುರುಷರ ಕುಸ್ತಿ ಫ್ರೀ ಸ್ಟೈಲ್‌ 57 ವಿಭಾಗದಲ್ಲಿ ಸೆಮಿಫೈನಲ್ಸ್‌ಗೆ ಪ್ರವೇಶ ಮಾಡಿದ್ದರು. ಬಲ್ಗೇರಿಯಾದ ಜಾರ್ಜಿ ವ್ಯಾಲೆಂಟಿನೋವ್ ವಾಂಗೆಲೋವ್ ಅವರನ್ನು 14-4 ಅಂತರದಲ್ಲಿ ಮಣಿಸಿದ್ದರು. ಮೊದಲನೇ ಅವಧಿಯಲ್ಲಿ ಸತತ 6 ಪಾಯಿಂಟ್ಸ್​ ಕಲೆ ಹಾಕಿದ್ದ ಇವರಿಗೆ ಎದುರಾಳಿ ಪ್ರತಿಕ್ರಿಯಿಸುವಲ್ಲಿ ಪರದಾಡಿದರು.

ಈ ಹಿಂದೆ ರವಿಕುಮಾರ್‌ ಕೊಲಂಬಿಯಾದ ಆಸ್ಕರ್ ಎಡ್ವರ್ಡೊ ಟಿಗ್ರೆರೋಸ್ ಅರ್ಬಾನೊ ವಿರುದ್ಧ 13-2 ಭಾರಿ ಅಂತರದಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಮಾಡಿದ್ದರು.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಲವ್ಲಿನಾ ಬೊರ್ಗೊಹೈನ್

ಮೊದಲಿಗೆ ವೇಟ್‌ ಲಿಫ್ಟಿಂಗ್‌ನಲ್ಲಿ ಮೀರಾಬಾಯ್‌ ಚಾನೂ ಬೆಳ್ಳಿ ಪದಕ ಗೆದ್ದರು. ಬಳಿಕ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿ.ವಿ ಸಿಂಧು ಕಂಚಿನ ಪದಕ ಗೆದ್ದ ಬೆನ್ನಲ್ಲೇ ಭಾರತದ ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದಿದ್ದರು. ಈಗ ಕುಸ್ತಿ ವಿಭಾಗದಲ್ಲಿ ರವಕುಮಾರ್​​ ಫೈನಲ್ಸ್​ ಲಗ್ಗೆ ಇಟ್ಟಿದ್ದು, ಚಿನ್ನಕ್ಕಾಗಿ ಹೋರಾಟ ಮಾಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ 2ನೇ ಪದಕ; ಬ್ಯಾಡ್ಮಿಂಟನ್​​ನಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ ಪಿವಿ ಸಿಂಧು

Source: newsfirstlive.com Source link