ಸಚಿವರಿಗೆ ಪ್ರಮಾಣ ವಚನ ಸಂಭ್ರಮ; BSY ಬೆರಳಿಗೆ ಮಹಿಳೆ ಸೀರೆ ಪಿನ್ ಚುಚ್ಚಿ ನೋವು

ಸಚಿವರಿಗೆ ಪ್ರಮಾಣ ವಚನ ಸಂಭ್ರಮ; BSY ಬೆರಳಿಗೆ ಮಹಿಳೆ ಸೀರೆ ಪಿನ್ ಚುಚ್ಚಿ ನೋವು

ಬೆಂಗಳೂರು: ನೂತನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ 29 ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಅತ್ತ ನೂತನ ಸಚಿವರು ಪ್ರಮಾಣ ವಚನ ಸಂಭ್ರಮದಲ್ಲಿದ್ದರೆ, ಇತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬೆರಳಿಗೆ ಮಹಿಳೆಯೊಬ್ಬರ ಸೀರೆ ಪಿನ್​​ ಚುಚ್ಚಿ ನೋವು ಪಡುವಂತಾಯಿತು.

ಹೌದು.. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಆಗಮಿಸುತ್ತಿದಂತೆ ಹಲವರು ಬಿಎಸ್​ವೈ ಅವರ ಆರ್ಶೀವಾದ ಪಡೆಯಲು ಮುಂದಾದರು. ಈ ವೇಳೆ ಶಾಸಕ ಗೋಪಾಲಯ್ಯ ಅವರ ಕುಟುಂಬ ಸದಸ್ಯರು ಸಿಎಂ ಅವರ ಕಾಲಿಗೆ ನಮಸ್ಕಾರ ಮಾಡಿ ಆರ್ಶೀವಾದ ಪಡೆಯಲು ಮುಂದಾದರು. ಆಗ ಮಹಿಳೆಯ ಸೀರೆಯಲ್ಲಿದ್ದ ಪಿನ್ ಬಿಎಸ್​ವೈ ಕೈಗೆ ಚುಚ್ಚಿ ಕೊಂಡಿತ್ತು. ಕೂಡಲೇ ಕೈ ಹಿಂದಕ್ಕೆ ಎಳೆದುಕೊಂಡ ಬಿಎಸ್​​ವೈ ನಗುತ್ತಲೇ ಅವರೊಂದಿಗೆ ಮಾತುಕತೆ ಮುಂದುವರಿಸಿದರು.

Source: newsfirstlive.com Source link