ಸಿನಿರಂಗದ ಮೇಲೆ ಮತ್ತೆ ಕೊರೊನಾ ಛಾಯೆ..ಇತಿಹಾಸದ ಪುಟ ಸೇರುತ್ವಾ ಮತ್ತಷ್ಟು ಚಿತ್ರಮಂದಿರಗಳು

ಸಿನಿರಂಗದ ಮೇಲೆ ಮತ್ತೆ ಕೊರೊನಾ ಛಾಯೆ..ಇತಿಹಾಸದ ಪುಟ ಸೇರುತ್ವಾ ಮತ್ತಷ್ಟು ಚಿತ್ರಮಂದಿರಗಳು

ಕನ್ನಡ ಚಿತ್ರರಂಗದ ಮೇಲೆ ಕೊರೊನ ಮೂರನೇ ಅಲೆಯ ಕರಿಛಾಯೆಯ ಭಯ ಆವರಿಸಿದೆ.. ಮತ್ತೆ ಲಾಕ್​ ಡೌನ್​ ಆದ್ರೆ ನಮ್ಮ ಕತೆ ಏನಪ್ಪ ಅಂತ ಚಿಂತೆಯಲ್ಲಿದ್ದಾರೆ ಸ್ಟಾರ್​ ಚಿತ್ರಗಳಿಗೆ ಬಂಡವಾಳ ಹೂಡಿರೋ ನಿರ್ಮಾಪಕರು.. ಯಾಕಂದ್ರೆ ಕಳೆದ 2 ವರ್ಷಗಳ ಹಿಂದೆ ರೆಡಿಯಾಗಿರೋ ಚಿತ್ರಗಳಿಗೆ ಇನ್ನು ಬಿಡುಗಡೆಯ ಭಾಗ್ಯ ಸಿಕ್ಕಲ್ಲ.. ಜೊತೆಗೆ ಪರಿಸ್ಥಿತಿ ಹೀಗೆ ಮುಂದುವರೆದರೆ ಹೈ ಬಜೆಟ್​ನ ಚಿತ್ರಗಳು ಸ್ಯಾಂಡಲ್​ವುಡ್​ನಲ್ಲಿ ಸೆಟ್ಟೇರ್ತಾವ ಅನ್ನೋ ಚಿoತೆ ಶುರುವಾಗಿದೆ ಕನ್ನಡ ಚಿತ್ರರಂಗದಲ್ಲಿ..

blank

ಕೊರೊನ ಕಾಟ ಇಲ್ಲದಿದ್ದಿದ್ರೆ ಇಷ್ಟೊತ್ತಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್​ ಅಭಿನಯದ ಭಜರಂಗಿ 2, ಕೆಜಿಎಫ್ 2, ಕೋಟಿಗೊಬ್ಬ3, ವಿಕ್ರಾಂತ್ ರೋಣ, ಕಬ್ಜ, ಬುದ್ದಿವಂತ2, ಸಲಗ ಚಿತ್ರಗಳು ಚಿತ್ರ ಪ್ರೇಮಿಗಳಿಗೆ ದರ್ಶನ ಕೊಡಬೇಕಿತ್ತು.. ಅದ್ರೆ ಕೊರೊನ ಕಂಟಕದಿಂದ ಸ್ಟಾರ್​ ಚಿತ್ರಗಳ ನಿರ್ಮಾಪಕರು ಸಂಕಟಕ್ಕೆ ಸಿಲುಕಿದ್ದಾರೆ..

ಅಂತೂ ಇಂತು ಎರಡನೇ ಅಲೇ ಮುಗಿತು, ರಿಲೀಸ್​​ಗೆ ರೆಡಿ ಇರುವ ಸಿನಿಮಾಗಳ ಬಿಡುಗಡೆ ಮಾಡಲು ನಿರ್ಮಾಪಕರು ತಯಾರಿ ಮಾಡಿಕೊಳ್ತಿದ್ದರು.. ಅದ್ರೆ ಈಗ ಈಗ ಎರಡನೇ ಅಲೆಯ ಹೊಡತದಿಂದ ಚೇತರಿಸಿ ಕೊಳ್ಳುವ ಮೊದಲೇ ಮೂರನೇ ಅಲೆ ಸಿನಿಮಾ ಮಂದಿಯಲ್ಲಿ ಭಯ ಹುಟ್ಟಿಸಿದೆ.. ಒಂದು ವೇಳೆ 3ನೇ ಅಲೆ ಅಪ್ಪಳಿಸಿದ್ದೆ ಆದರೆ ಸದ್ಯ ನಾವು ರಿಲೀಸ್​ಗೆ ರೆಡಿ ಇದ್ದೀವಿ ಅನ್ನೋ ಚಿತ್ರತಂಡಗಳು ಮತ್ತೆ ಸಿನಿಮಾಗಳ ಬಿಡುಗಡೆಯನ್ನು ಮುಂದೆತಳ್ಳುವ ಸಾಧ್ಯತೆ ಹೆಚ್ಚಿದೆ..

blank

ಇದು ಬಿಡುಗಡೆಗೆ ಸಿದ್ದವಿರುವ ಹೈ ಬಜೆಟ್ ಚಿತ್ರಗಳ ನಿರ್ಮಾಪಕರ ಆತಂಕವಾದರೆ.. ಕೊರೊನ ಬಿಕ್ಕಟ್ಟು ಮುಂದುವರೆದರೆ ಕೋಟಿ ಕೋಟಿ ವೆಚ್ಚದಲ್ಲಿ ಬಹುಭಾಷೆಗಳಲ್ಲಿ ಸೆಟ್ಟೇರ ಬೇಕಿದ್ದ ಚಿತ್ರಗಳ ಕತೆ ಏನು ಎಂಬ ಅತಂಕದಲ್ಲಿ ಕನ್ನಡ ಚಿತ್ರರಂಗ ಇದೆ.. ಯಾಕಂದ್ರೆ ಕಳೆದ ಕಳೆದ ವರ್ಷವೇ ಸೆಟ್ಟೇರ ಬೇಕಿದ್ದ್ ಸ್ಟಾರ್​ ಚಿತ್ರಗಳು, ಹಾಗೂ ಹೈ ಬಜೆಟ್​ ಚಿತ್ರಗಳು ನಿಂತಲೇ ನಿಂತಿವೆ.. ರಾಕ್​ ಲೈನ್​ ವೆಂಕಟೇಶ್ ನಿರ್ಮಾಣದಲ್ಲಿ ಸೆಟ್ಟೇರಿದ್ದ ರಾಜ ವೀರ ಮದಕರಿ ಚಿತ್ರ ಬರೋದು ಡೌಟ್​ ಎಂಬ ಮಾತು ಗಾಂಧಿನಗರದಲ್ಲಿದೆ.. ಅಲ್ಲದೆ ರಾಕ್​ ಲೈನ್​ ವೆಂಕಟೇಶ್ ನಿರ್ಮಿಸ ಬೇಕಿದ್ದ ಗೋಲ್ಡ್​ ರಿಂಗ್​ ಚಿತ್ರ ಕೂಡು ಈವರ್ಷ ಸೆಟ್ಟೆರೊದಿಲ್ಲ ಎಂಬ ಮಾತು ಕೂಡ ಕೇಳಿ ಬರ್ತಿದೆ..

blank

ಇದಿಷ್ಟೇ ಅಲ್ಲ ಕೆಜಿಎಫ್​ ನಂತರ ಯಶ್ ನಟಿಸ್ತಾರೆ ಅಂತ ಹೇಳಲಾಗಿದ್ದ, ನರ್ತನ್​ ನಿರ್ದೆಶನದ ಚಿತ್ರ ಇಷ್ಟೋತ್ತಿಗೆ ಸೆಟ್ಟೇರ ಬೇಕಿತ್ತು.. ಅದ್ರೆ ಕೊರೊನ ಬಿಕ್ಕಟ್ಟಿಂದ ಈ ಚಿತ್ರವೂ ಈ ವರ್ಷ ಸೆಟ್ಟೇರೋ ಸಾಧ್ಯತೆ ಇಲ್ಲ ಅಂತಿವೆ ಮೂಲಗಳು.. ಜೊತೆಗೆ ಕಿಚ್ಚ ಅಭಿನಯದ 100 ಕೋಟಿ ವೆಚ್ಚದ ಬಿಲ್ಲ ರಂಗ ಬಾಷ ಚಿತ್ರ ಕೂಡ ಕೊರೊನ ಭಯದಲ್ಲೇ ಇದ್ದು ಸದ್ಯಕ್ಕೆ ಬಿಲ್ಲ ರಂಗ ಬಾಷ ಮುನ್ನೆಲೆಗೆ ಬರೋ ಸಾಧ್ಯತೆ ತೀರ ಕಡಿಮೆ ಅಂತಿದೆ ಕಿಚ್ಚ ಸುದೀಪ್ ಆಪ್ತ ಬಳಗ..ಇದರ ಜೊತೆಗೆ ಶಿವಣ್ಣ ಅಭಿನಯ 125ನೇ ಚಿತ್ರ ವೇದ ಕೂಡ ಆಗಸ್ಟ್​ನಲ್ಲಿ ಸೆಟ್ಟೇರ ಬೇಕಿತ್ತು.. ಅದ್ರೆ ಲಾಕ್​ ಡೌನ್​ನಿಂದ ವೇದ ಚಿತ್ರದ ಸೆಟ್​ ವರ್ಕ್​ ಕೆಲಸ ಶುರುವಾಲೇ ಇಲ್ಲ..

blank

ಒಟ್ಟಿನಲ್ಲಿ ಮಹಾಮಾರಿ ಕೊರೊನ ವೈರಸ್​ ಚಿತ್ರರಂಗದ ಮೇಲೆ ತನ್ನ ಅರ್ಭಟವನ್ನು ಮುಂದುವರೆಸಿದ್ದು, ಇದೇ ಪರಿಸ್ಥಿತಿ ಇನ್ನು ಮುಂದುವರೆದರೆ ಸ್ಟಾರ್​​ ಚಿತ್ರಗಳು ಬೆಳ್ಳಿ ತೆರೆ ಮೇಲೆ ರಾರಾಜಿಸೋದು ಇನ್ನು ಲೇಟು.. ಅಲ್ಲದೆ ಸ್ಯಾಂಡಲ್​ ವುಡ್​ನಲ್ಲಿ ದೊಡ್ಡ ಬಜೆಟ್​ನ ಹೊಸ ಚಿತ್ರಗಳು ಸೆಟ್ಟೇರೊದು ಡೌಟು.. ಜೊತೆಗೆ ಮತ್ತಷ್ಟು ಚಿತ್ರಮಂದಿರಗಳು ಇತಿಹಾಸದ ಪುಟ ಸೇರೋದು ಪಕ್ಕಾ ಅಂತಿದ್ದಾರೆ ಗಾಂಧಿನಗರ ಸಿನಿ ಪಂಡಿತರು..

ವಿಶೇಷ ವರದಿ: ಸತೀಶ್ ಕನಕಪುರ, ಫಿಲ್ಮ್ ಬ್ಯೂರೋ

Source: newsfirstlive.com Source link