ಮಾರುಕಟ್ಟೆಗೆ ಲಗ್ಗೆ ಇಟ್ಟ ಪ್ರಜಾಕೀಯ ಅಗರಬತ್ತಿಗಳು..!

ಮಾರುಕಟ್ಟೆಗೆ ಲಗ್ಗೆ ಇಟ್ಟ ಪ್ರಜಾಕೀಯ ಅಗರಬತ್ತಿಗಳು..!

ಹಾವೇರಿ: ರಾಜಕೀಯ ರಂಗದಲ್ಲಿ ಅಭಿಮಾನ ಅಂದ್ರೆನೆ ಹಂಗೆ..ತಮ್ಮ ನೆಚ್ಚಿನ ವ್ಯಕ್ತಿಗಳ ಬಗೆಗಿನ ಅಭಿಮಾನ ಮತ್ತು ಪ್ರೀತಿ, ಅಭಿಮಾನಿಗಳ ಕಡೆಯಿಂದ ಹೊರ ಹೊಮ್ಮುವ ರೀತಿಯೇ ಬೇರೆ. ಇದು ರಾಜಕೀಯವಾದರು ಸೈ ಚಿತ್ರರಂಗವಾದರು ಸೈ. ಅದೇ ರೀತಿ ಇಲ್ಲೊಬ್ಬ ತನ್ನ ನೆಚ್ಚಿನ ರಾಜಕೀಯ ಪಕ್ಷದ ಹೆಸರನ್ನೇ ತನ್ನ ಅಗರಬತ್ತಿ ಕಂಪನಿಗೆ ಇಟ್ಟು ಅಭಿಮಾನ ಮೆರೆದಿದ್ದಾನೆ.

ಹೌದು ಸ್ಯಾಂಡಲ್​ವುಡ್​ನ ಸೂಪರ್​ಸ್ಟಾರ್​ ನಟ ಉಪೇಂದ್ರ ಇತ್ತೀಚೆಗೆ ತಮ್ಮ ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದು ಪ್ರಜಾಕೀಯದ ತತ್ವ, ಆದರ್ಶಗಳಿಂದ ಪ್ರೇರಿತರಾದ ಜಿಲ್ಲೆಯ ಸವಣೂರು ತಾಲೂಕಿನ ಕಳಲಕೊಂಡದ ಚನ್ನು ಎಂಬುವವರು ತಾವು ಹೊಸದಾಗಿ ಆರಂಭಿಸಿದ ಅಗರಬತ್ತಿ ಕಂಪನಿಗೆ ಪ್ರಜಾಕೀಯ ಅಗರಬತ್ತಿಗಳು ಎಂದು ನಾಮಕರಣ ಮಾಡಿದ್ದಾನೆ.

ಈ ಮೂಲಕ ಪ್ರಜಾಕೀಯದ ವಿಚಾರಗಳನ್ನು ಜನರಿಗೆ ತಲುಪಿಸುತ್ತಿದ್ದಾನೆ ಎನ್ನಲಾಗಿದೆ. ಈ ಕುರಿತು ಟ್ವೀಟ್​ ಮಾಡಿದ ನಟ ಉಪೇಂದ್ರ ಪ್ರಜಾಕೀಯದ ವಿಚಾರಗಳನ್ನು ಜನರಿಗೆ ತಲುಪಸುತ್ತಿರುವ ಚನ್ನು ಅವರಿಗೆ ಶುಭವಾಗಲಿ ಎಂದು ಟ್ವೀಟ್​ ಮಾಡಿದ್ದಾರೆ.

Source: newsfirstlive.com Source link