ಕಲಾಪಕ್ಕೆ ಅಡ್ಡಿ: ಆರು ಮಂದಿ ಟಿಎಂಸಿ ಸಂಸದರು ರಾಜ್ಯಸಭೆಯಿಂದ ಹೊರಕ್ಕೆ

ಕಲಾಪಕ್ಕೆ ಅಡ್ಡಿ: ಆರು ಮಂದಿ ಟಿಎಂಸಿ ಸಂಸದರು ರಾಜ್ಯಸಭೆಯಿಂದ ಹೊರಕ್ಕೆ

ನವದೆಹಲಿ: ರಾಜ್ಯಸಭೆ ಕಲಾಪದಲ್ಲಿ ಪಗಸಸ್​​ ಬೇಹುಗಾರಿಕೆ ಕುರಿತು ಗದ್ದಲ ಎಬಿಸಿದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಪಕ್ಷದ ನಾಲ್ವರು ಸಂಸದರನ್ನು ರಾಜ್ಯಸಭೆಯಿಂದ ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. ಟಿಎಂಸಿ ರಾಜ್ಯಸಭಾ ಸಂಸದರಾದ ದೋಲಾ ಸೇನ್​​, ನದೀಮುಲ್ಲಾ ಹಾಕ್ವ್​​, ಅಬೀರ್​​ ರಂಜನ್​​ ಬಿಸ್ವಾಸ್​​, ಶಾಂತ ಚೆತ್ರೀ, ಅರ್ಪಿತಾ ಘೋಷ್​​, ಮೌಸಮ್​​ ನೂರ್ ಎಂಬುವರನ್ನು ಸದನದಿಂದ ಹೊರಗೆ ಕಳಿಸಲಾಗಿದೆ.

ಸದನದ ಬಾವಿಗಿಳಿದು ಪಗಸಸ್​​ ಬೇಹುಗಾರಿಕೆ ಬಗ್ಗೆ ಗದ್ದಲ ಎಬ್ಬಿಸಿದ್ದಲ್ಲದೇ ಕಲಾಪದ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂದು ಸಂಸತ್​​ನ ಸೆಕ್ರಟರಿ ಜನರ್​​ ದೇಶ್​ ದೀಪಕ್ ವರ್ಮಾ ಆರು ಮಂದಿ ಸಂಸದರಿಗೂ ನೋಟಿಸ್​ ನೀಡಿದ್ದಾರೆ. ಈ ನೋಟಿಸ್​​ನಲ್ಲಿ ಒಂದು ದಿನದ ಮಟ್ಟಿಗೆ ಸಂಸದರನ್ನು ಸದನದಿಂದ ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ.

blank

ಇನ್ನು, ಒಂದು ವಾರದಿಂದ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರು ಪೆಗಸಸ್​​ ಬೇಹುಕಾರಿಕೆ ವಿಚಾರವನ್ನೇ ಹಿಡಿದು ಪ್ರತಿಭಟಿಸುತ್ತಿದ್ದಾರೆ. ಜತೆಗೆ ಸದನದ ಬಾವಿಗಿಳಿದು ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆಡಳಿತ ಪಕ್ಷದ ನಾಯಕರು ದೂರಿದ್ದರು.​

Source: newsfirstlive.com Source link