ಲೇಟ್​ ಆಗಿ ಬಂದಿದ್ದಕ್ಕೆ ಝೀರೋ ಟ್ರಾಫಿಕ್​​ನಲ್ಲಿ ಬಂದು ಶಶಿಕಲಾ ಜೊಲ್ಲೆ ಪ್ರಮಾಣ ವಚನ..!

ಲೇಟ್​ ಆಗಿ ಬಂದಿದ್ದಕ್ಕೆ ಝೀರೋ ಟ್ರಾಫಿಕ್​​ನಲ್ಲಿ ಬಂದು ಶಶಿಕಲಾ ಜೊಲ್ಲೆ ಪ್ರಮಾಣ ವಚನ..!

ದೇವನಹಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ ಸಚಿವ ಸಂಪುಟ ವಿಸ್ತರಣೆ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ. ಬೊಮ್ಮಾಯಿ ಕ್ಯಾಬಿನೆಟ್​​ನಲ್ಲಿ 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಈ 29 ನೂತನ ಸಚಿವರಲ್ಲಿ ಕಳಂಕಿತ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಕೂಡ ಸೇರಿದ್ದಾರೆ. ಕೆಲವು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿದ್ದ ಶಶಿಕಲಾ ಜೊಲ್ಲೆ ಅವರು, ಬೆಂಗಳೂರು ವಿಮಾನ ನಿಲ್ದಾಣದಿಂದ ಝೀರೋ ಟ್ರಾಫಿಕ್​​ನಲ್ಲಿ ಬಂದು ಪ್ರಮಾಣವಚನ ಸ್ವೀಕಾರ ಮಾಡಿ ಸುದ್ದಿಯಾಗಿದ್ದಾರೆ.

blank

ದೆಹಲಿಯಿಂದ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಂದಿಳಿದಿದ್ದಾರೆ. ಅಲ್ಲಿಂದ ತರಾತುರಿಯಲ್ಲಿ ರಾಜಭನದತ್ತ ಹೊರಟಿದ್ದಾರೆ. ಈ ವೇಳೆ ಟ್ರಾಫಿಕ್ ಕಂಟ್ರೋಲರ್​ ಝೀರೋ ಟ್ರಾಫಿಕ್ ನೀಡುವಂತೆ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಅದರಂತೆ ಶಶಿಕಲಾ ಜೊಲ್ಲೆ ಅವರು ಝೀರೋ ಟ್ರಾಫಿಕ್ ಸಹಾಯದಿಂದ ರಾಜಭವನಕ್ಕೆ ಆಗಮಿಸಿ, ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

blank

ಮೂಲಗಳ ಪ್ರಕಾರ ಜೊಲ್ಲೆ ಅವರು ತಮಗೆ ಸಚಿವ ಸ್ಥಾನ ಸಿಗಲ್ಲ ಎಂದು ಭಾವಿಸಿದ್ದರು. ಹೀಗಾಗಿ ಅವರು ದೆಹಲಿಯಲ್ಲೇ ಬೀಡು ಬಿಟ್ಟಿದ್ದರು ಎನ್ನಲಾಗಿದೆ. ಆದರೆ ಕೊನೆ ಕ್ಷಣದಲ್ಲಿ ಅವರಿಗೆ ಹೈಕಮಾಂಡ್ ಮಣೆ ಹಾಕಿದ್ದರಿಂದ ತರಾತುರಿಯಲ್ಲಿ ಆಗಮಿಸಿ ಬೊಮ್ಮಾಯಿ ಕ್ಯಾಬಿನೆಟ್​ನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

Source: newsfirstlive.com Source link