ಸೆಮೀಸ್​​​ನಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ ಸೋಲು- ಕಂಚಿಕ ಪದಕ್ಕಾಗಿ ಬ್ರಿಟನ್ ವಿರುದ್ಧ ಫೈಟ್

ಸೆಮೀಸ್​​​ನಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ ಸೋಲು- ಕಂಚಿಕ ಪದಕ್ಕಾಗಿ ಬ್ರಿಟನ್ ವಿರುದ್ಧ ಫೈಟ್

ಮಹಿಳಾ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ, ಭಾರತ ಸೋಲು ಅನುಭವಿಸಿದೆ. ಅರ್ಜೆಂಟೀನಾ ವಿರುದ್ಧದ ಸೆಮಿಫೈನಲ್​​-2 ಪಂದ್ಯದಲ್ಲಿ ಭಾರತ, 2-1 ಗೋಲುಗಳ ಅಂತರದಿಂದ ಪರಾಭವಗೊಂಡಿತು. ಅಂತಿಮ ಹಂತದವರೆಗೂ ಭಾರತ, ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿತು. ಕೊನೆಗೆ 2-1 ಗೋಲುಗಳ ಅಂತರದಲ್ಲಿ ಸೋತ ಭಾರತ, ಆಗಸ್ಟ್​ 6ರಂದು ಕಂಚಿನ ಪದಕ್ಕಾಗಿ ಗ್ರೇಟ್​ ಬ್ರಿಟನ್​ ವಿರುದ್ಧ ಹೋರಾಟ ನಡೆಸಲಿದೆ. ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸೆಮಿಫೈನಲ್​ ಪ್ರವೇಶಿಸಿದ್ದ ಭಾರತದ ಮಹಿಳಾ ಹಾಕಿ ತಂಡ, ನಿರಾಸೆ ಮೂಡಿಸಿದೆ. ಕ್ವಾರ್ಟರ್​ ಫೈನಲ್​​​ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನೇ ಮಣಿಸಿ, ಸೆಮೀಸ್​​ನಲ್ಲೂ ಗೆಲ್ಲೂವ ವಿಶ್ವಾಸ ಮೂಡಿಸಿತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ.

Source: newsfirstlive.com Source link