ಬೂಮ್ರಾ, ಸಿರಾಜ್ ಬೊಂಬಾಟ್ ಬೌಲಿಂಗ್- ಮೊದಲ ಸೆಷನ್ ಅಂತ್ಯಕ್ಕೆ ಇಂಗ್ಲೆಂಡ್ 61/2

ಬೂಮ್ರಾ, ಸಿರಾಜ್ ಬೊಂಬಾಟ್ ಬೌಲಿಂಗ್- ಮೊದಲ ಸೆಷನ್ ಅಂತ್ಯಕ್ಕೆ ಇಂಗ್ಲೆಂಡ್ 61/2

ನಾಟಿಂಗ್​ಹ್ಯಾಮ್​ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್, ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಇನ್ನಿಂಗ್ಸ್ ಆಂಭಿಸಿದ ಇಂಗ್ಲೆಂಡ್ ತಂಡಕ್ಕೆ, ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ಆರಂಭಿಕ ಆಘಾತ ನೀಡಿದ್ರು. ಮೊದಲ ಓವರ್​ನ 5ನೇ ಎಸೆತದಲ್ಲಿ ಬೂಮ್ರಾ, ರೋರಿ ಬರ್ನ್ಸ್ ವಿಕೆಟ್ ಪಡೆದ್ರು. ನಂತರ 27 ರನ್​ಗಳಿಸಿ ಜ್ಯಾಕ್ ಕ್ರಾವ್ಲೆ, ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್​​ ರಿಶಭ್​ ಪಂತ್​ಗೆ, ಕ್ಯಾಚ್ ನೀಡಿ ನಿರ್ಗಮಿಸಿದ್ರು. ಮೊದಲ ಸೆಷನ್ ಅಂತ್ಯಕ್ಕೆ ಇಂಗ್ಲೆಂಡ್, 2 ವಿಕೆಟ್ ನಷ್ಟಕ್ಕೆ 61 ರನ್​ಗಳಿಸಿತು. ಬೂಮ್ರಾ, ಸಿರಾಜ್ ತಲಾ ವಿಕೆಟ್ ಪಡೆದ್ರು.

Source: newsfirstlive.com Source link