ನಿತ್ಯವೂ ಹೊಸ ಟ್ವಿಸ್ಟ್ ಕೊಡ್ತಿರೋ ​‘ಮನಸಾರೆ’ ತಂಡದಿಂದ ಪ್ರೇಕ್ಷಕರಿಗೆ ಸಿಹಿ ಸುದ್ದಿ

ನಿತ್ಯವೂ ಹೊಸ ಟ್ವಿಸ್ಟ್ ಕೊಡ್ತಿರೋ ​‘ಮನಸಾರೆ’ ತಂಡದಿಂದ ಪ್ರೇಕ್ಷಕರಿಗೆ ಸಿಹಿ ಸುದ್ದಿ

ಉದಯ ಟಿವಿಯಲ್ಲಿ ಪ್ರಸಾರವಾಗುವ ಮನಸಾರೆ ಧಾರಾವಾಹಿ ದಿನೇ ದಿನೇ ಪ್ರೇಕ್ಷಕರಿಗೆ ಇಷ್ಟವಾಗ್ತಾನೆಯಿದೆ.  ಹೊಸ ಟ್ವಿಸ್ಟ್​ ಹಾಗೂ ಟರ್ನ್​ಗಳ ಮೂಲಕ ಜನರನ್ನು ವಿಭಿನ್ನ ರೀತಿಯಲ್ಲಿ ರಂಜಿಸ್ತಾಯಿದೆ.

ಕೆಲವು ತಿಂಗಳ ಹಿಂದೆ ಪ್ರಾರ್ಥನಾ ಹಾಗೂ ದ್ರುವ ಮದುವೆ ಸಂಭ್ರಮ ಜರುಗಿದ್ದು.. ಮನೆ ಮಂದಿಯಲ್ಲ ಖುಷಿಯಾಗಿದ್ರು.. ಜೊತೆಗೆ ವೀಕ್ಷಕರು ಕೂಡಾ ಕಲರ್​ಫಯಲ್​ ಎಪಿಸೋಡ್​ನ ನೋಡಿ ಸಂತಸ ಪಟ್ಟಿದ್ರು.  ಇದೀಗ ಮನಸಾರೆ ಧಾರಾವಾಹಿಯ ಬಗ್ಗೆ ಹೇಳಲು ಮತ್ತೊಂದು ಸಿಹಿ ಸುದ್ದಿಯಿದೆ. ಆ ವಿಷಯ ಎನಪ್ಪಾ ಅಂದ್ರೆ ಮನಸಾರೆ ಧಾರವಾಹಿ 100 ಅಲ್ಲಾ 200 ಅಲ್ಲಾ ಬರೊಬ್ಬರಿ 350 ಎಪಿಸೋಡ್​ಗಳನ್ನ ಕಪ್ಲೀಟ್​ ಮಾಡಿ ಯಶಸ್ವಿಯಾಗಿ ಸಾಗ್ತಾಯಿದೆ. ಇದೆ ಖುಷಿಯನ್ನ ಇಡೀ ಟೀಮ್​ ಸಂಭ್ರಮಿಸುತ್ತಿದೆ.

ಇದನ್ನೂ ಓದಿ: ‘ಕನ್ಯಾಕುಮಾರಿ’ ಹಾಗೂ ‘ಲಕ್ಷಣ’ ಲಾಂಚ್​ಗೆ ಡೇಟ್​ ಫಿಕ್ಸ್

ತಂದೆಯ ಪ್ರೀತಿಗಳಿಸಲು ಪ್ರಾರ್ಥನಾ ಹರಸಾಹಸ
ಇನ್ನು ಮನಸಾರೆ ಧಾರವಾಹಿ ಪ್ರಾರ್ಥನಾ ಎಂಬ ಹುಡುಗಿಯ ಸುತ್ತ ಹೆಣೆಯುವ ಕತೆಯಾಗಿದ್ದು, ತಂದೆಗೆ ಇವಳನ್ನು ಕಂಡ್ರೆ ಆಗಲ್ಲ.. ಆದ್ರೆ ಪ್ರಾರ್ಥನಾಗೆ ತಂದೆ ಅಂದ್ರೆ ಜಗತ್ತು.. ತಂದೆಯ ಪ್ರೀತಿಗಳಿಸಲು ಪ್ರಾರ್ಥನಾ ಹರಸಾಹಸ ಪಡ್ತಿದ್ದಾಳೆ.

blank

ಇದನ್ನೂ ಓದಿ: ಅಶ್ವಿನಿ ನಕ್ಷತ್ರ ಜೋಡಿ ಮತ್ತೆ ಮೋಡಿ; ಮಯೂರಿ ಮಗುವನ್ನ ಎತ್ತಿ ಮುದ್ದಾಡಿದ ಜೆಕೆ

ಇನ್ನೊಂದೆಡೆ ಗಂಡ ತುಂಬಾ ಕಷ್ಟ ಪಟ್ಟು ಕೆಲಸ ಮಾಡಿ ಪಾರ್ಥನಾಳನ್ನು ನೋಡಿಕೊಳ್ತಿ ಇದ್ದಾನೆ. ಅವನು ಪಡುವ ಕಷ್ಟ ಹೆಂಡತಿಗೆ ಗೊತ್ತಾಗಬಾರ್ದು ಅಂತಾ ಅವಳ ಮುಂದೆ ನಗ್ತಾಯಿರ್ತಾನೆ. ಆದರೆ ಪ್ರಾರ್ಥನಾಳ ತಾಯಿಗೆ ಮಗಳೆಂದರೆ ಪ್ರಾಣ ಈ ಕಡೆ ಗಂಡನನ್ನು ಬಿಡಲಾರದೆ ಮಗಳನ್ನು ಬಿಡಲಾರದೆ ಜೀವನ ನಡೆಸುತ್ತಿದ್ದಾಳೆ.

ಇದು ಈ ಧಾರವಾಹಿಯ ಮುಖ್ಯ ಎಳೆಯಾಗಿದೆ.  ಹೀಗೇ ಪ್ರತಿ ದಿನ ಹೊಸದೊಂದು ಟ್ವಿಸ್ಟ್​ ಮೂಲಕ ಈ ಧಾರವಾಹಿ ಪ್ರೇಕ್ಷಕರನ್ನ ರಂಜಿಸೋದ್ರಲ್ಲಿ ಯಶಸ್ವಿಯಾಗಿದೆ. ಸಾಕಷ್ಟು ಅಪ್ಸ್ ಹಾಗೂ ಡೌನ್​ಗಳನ್ನು ಎದುರಿಸುತ್ತ.. ಜನರಿಗೆ ಧಾರಾವಾಹಿ ಎಲ್ಲಿಯೂ ಬೋರ್​ ಹೊಡೆಸದಂತೆ ಪ್ರಸಾರವಾಗ್ತಾಯಿರೊದು ಖುಷಿಯ ಸಂಗತಿ. ಮನಸಾರೆ ಅಂಡ್​ ಟೀಮ್​ಗೆ ನಮ್ಮ ಕಡೆಯಿಂದಲು ಕಂಗ್ರಾಟ್ಸ್.

ಇದನ್ನೂ ಓದಿ: ಮತ್ತೆ ಒಂದಾಯ್ತು ರಾಜು ತಾಳಿಕೋಟೆ ಕುಟುಂಬ

Source: newsfirstlive.com Source link