‘ನನ್ನದು ಮಿಲಿಟರಿ ಜಾತಿ‌.. ನಾನು ಜನಿವಾರ ಮತ್ತೊಂದರ ಬಗ್ಗೆ ಚಿಂತೆ ಮಾಡಲ್ಲ’ ಹೀಗ್ಯಾಕಂದ್ರು ರಾಮದಾಸ್​?

‘ನನ್ನದು ಮಿಲಿಟರಿ ಜಾತಿ‌.. ನಾನು ಜನಿವಾರ ಮತ್ತೊಂದರ ಬಗ್ಗೆ ಚಿಂತೆ ಮಾಡಲ್ಲ’ ಹೀಗ್ಯಾಕಂದ್ರು ರಾಮದಾಸ್​?

ಮೈಸೂರು: ಮನುಷ್ಯ ಜೀವನದಲ್ಲಿ ಆಸೆ ಆಕಾಂಕ್ಷೆಗಳು ಸಹಜ, ರಾಜ್ಯಕ್ಕೆ ಏನೋ ಕೆಲಸ ಮಾಡಬೇಕೆಂದು ಕನಸು ಇಟ್ಟುಕೊಂಡಿದ್ದೆ ಆದರೆ ನನಗೆ ಮಂತ್ರಿ ಸ್ಥಾನ ದೊರೆತಿಲ್ಲ, ಮಂತ್ರಿ ಸ್ಥಾನ ದೊರೆತಿಲ್ಲದ್ದರಿಂದ ಯಾವುದೇ ಬೇಜಾರಿಲ್ಲ ಆದರೆ ನೀರಿಕ್ಷೆ ಇಟ್ಟುಕೊಂಡಿದ್ದು ಮಾತ್ರ ನಿಜ ಎಂದು ಶಾಸಕ ರಾಮದಾಸ್​ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು ನಾನೊಬ್ಬ ಮಿಲಿಟರಿ ಅಧಿಕಾರಿಯ ಮಗ ನನಗೆ ಅರ್ಹತೆ ಮತ್ತು ಅನುಭವ ಎರಡು ಇದೆ, 1992 ರಿಂದ ಇಲ್ಲಿಯವರೆಗೆ ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತ ಪಕ್ಷವನ್ನು ನಿರಂತರವಾಗಿ ಸಂಘಟಿಸಿದ್ದೇನೆ. ಹೀಗಾಗಿ ನನಗೂ ಮಂತ್ರಿ ಸ್ಥಾನ ಸಿಗಬಹುದೆಂಬ ನೀರಿಕ್ಷೆಗಳು ಸಹಜವಾಗಿದ್ದವು ಎಂದರು.

ಇದನ್ನೂ ಓದಿ: ಸಚಿವ ಸ್ಥಾನ ಕನ್ಫರ್ಮ್ ಬೆನ್ನಲ್ಲೇ ರೋಲ್ಸ್‌ರಾಯ್ಸ್​ನಲ್ಲಿ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟ ಎಂಟಿಬಿ..

ಮಾಜಿ ಸಿಎಂ ಬಿಎಸ್​ವೈ ನಿನ್ನಂತವನೂ ಮಂತ್ರಿ ಆಗಬೇಕು ಅಂತ ಹೇಳಿ ಪಟ್ಟಿಯಲ್ಲಿ ನಿನ್ನ ಹೆಸರು ಸೇರಿಸಿದ್ದೇನೆ ಎಂದು ಹೇಳಿದ್ದರು. ಇದರಿಂದ ಕ್ಷೇತ್ರದ ತುಂಬೆಲ್ಲ ನಿನ್ನೆ ರಾತ್ರಿಯಿಂಲೇ ಶುಭಾಶಯಗಳು ಆರಂಭವಾಗಿದ್ದವು ಆದರೆ ಬೆಳಗಾಗುವ ವೇಳೆಯಲ್ಲಿ ಎಲ್ಲವೂ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನನಗೆ ಯಾಕೆ ಸಚಿವ ಸ್ಥಾನ ಕೈತಪ್ಪಿತು ಎಂದು ಗೊತ್ತಿಲ್ಲ, ಕೊನೆ ಕ್ಷಣದಲ್ಲಿ ನನ್ನ ಹೆಸರು ಡಿಲೀಟ್ ಆಗಿದೆ. ಇರಲಿ ಅದರ ಕುರಿತು ನನಗೆ ಚಿಂತೆ ಇಲ್ಲ ಏಕೆಂದರೆ ನನ್ನದ್ದು ಮಿಲಿಟರಿ ಜಾತಿ‌. ನಾನು ಜನಿವಾರ ಮತ್ತೊಂದರ ಬಗ್ಗೆ ಚಿಂತೆ ಮಾಡುವವನಲ್ಲ ಎಂದಿದ್ದಾರೆ.
ಕೆಆರ್ ಕ್ಷೇತ್ರದಲ್ಲಿ ಇವತ್ತು ದುಃಖದ ದಿನವಲ್ಲ ಇಂದಿನ ದಿನವನ್ನು ಸವಾಲಿನ ದಿನವನ್ನಾಗಿ ಸ್ವೀಕರಿಸಿದ್ದೇವೆ ಆ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ.

 

Source: newsfirstlive.com Source link