ತಪ್ಪಿದ ಸಚಿವ ಸ್ಥಾನ.. ಶಾಸಕ ರಾಜೂ ಗೌಡ ಬೆಂಬಲಿಗರಿಂದ ಬೆಂಗಳೂರಲ್ಲಿ ಪ್ರತಿಭಟನೆ

ತಪ್ಪಿದ ಸಚಿವ ಸ್ಥಾನ.. ಶಾಸಕ ರಾಜೂ ಗೌಡ ಬೆಂಬಲಿಗರಿಂದ ಬೆಂಗಳೂರಲ್ಲಿ ಪ್ರತಿಭಟನೆ

ಬೆಂಗಳೂರು: ಶಾಸಕ ರಾಜೂಗೌಡ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಅಸಮಾಧನಗೊಂಡ ಬೆಂಬಲಿಗರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

blank

ಬೆಂಗಳೂರಿಗೆ ಆಗಮಿಸಿದ ಸುರಪುರ ಶಾಸಕ ರಾಜೂಗೌಡ ಬೆಂಬಲಿಗರು ತಮ್ಮ ಶಾಸಕನಿಗೆ ಸಂಪುಟದಿಂದ ಕೈ ಬಿಟ್ಟರುವ ವಿಚಾರ ತಿಳಿಯುತ್ತಿದ್ದಂತೆ ಮೋತಿ ಮಹಲ್ ಎದುರು ಪ್ರತಿಭಟನೆಗೆ ನಿಂತಿದ್ದಾರೆ. 200ಕ್ಕೂ ಅಧಿಕ ಬೆಂಬಲಿಗರು ಪ್ರತಿಭಟನೆಯಲ್ಲಿ ತೊಡಗಿದ್ದು ನಮ್ಮ ಶಾಸಕನಿಗೆ ಸಚಿವ ಸ್ಥಾನ ಸಿಗುವವರೆಗೂ ಪ್ರತಿಭಟನೆ ಮಾಡೋದಾಗಿ ಹೇಳಿದ್ದಾರೆ ಎನ್ನಲಾಗಿದೆ.

blank

ಇದನ್ನೂ ಓದಿ:  ಸಚಿವ ಸ್ಥಾನ ರೇಸ್​ನಲ್ಲಿ ಹೆಸರಿರುತ್ತೆ, ಆದ್ರೆ ರಾಜಭವನಕ್ಕೆ ಹೋದ್ರೆ ಕಾಣೆಯಾಗುತ್ತೆ -ರಾಜೂ ಗೌಡ ಬೇಸರ

ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ರಾಜೂ ಗೌಡ ಬೆಂಬಲಿಗರನ್ನು ಸಮಾಧಾನ ಪಡಿಸಿ ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸುತ್ತಿರುವುದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link