ಶತ್ರು ರಾಷ್ಟ್ರಕ್ಕೆ ಸೆಡ್ಡು ಹೊಡೆಯಲು ಮುಂದಾದ ಭಾರತ; ದಕ್ಷಿಣ ಚೀನಾ ಸಮುದ್ರಕ್ಕೆ 4 ಯುದ್ಧನೌಕೆ

ಶತ್ರು ರಾಷ್ಟ್ರಕ್ಕೆ ಸೆಡ್ಡು ಹೊಡೆಯಲು ಮುಂದಾದ ಭಾರತ; ದಕ್ಷಿಣ ಚೀನಾ ಸಮುದ್ರಕ್ಕೆ 4 ಯುದ್ಧನೌಕೆ

ನವದೆಹಲಿ: ಚೀನಾಗೆ ಭಾರತ ಸೆಡ್ಡು ಹೊಡೆಯಲು ಮುಂದಾಗಿದೆ. ಹೀಗಾಗಿಯೇ ದಕ್ಷಿಣ ಚೀನಾ ಸಮುದ್ರಕ್ಕೆ ಈ ತಿಂಗಳಾಂತ್ಯದ ವೇಳೆ ಯುದ್ಧನೌಕೆಗಳನ್ನು ಭಾರತ ಕಳುಹಿಸುತ್ತಿದೆ. ಈ ಮೂಲಕ ಜಗತ್ತಿನ ಎಲ್ಲಾ ದೇಶಗಳೊಂದಿಗೆ ಭದ್ರತಾ ಸಂಬಂಧಗಳನ್ನು ವಿಸ್ತರಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚೇನಾಗೆ ಭಾರತದ ಶಕ್ತಿ ಪ್ರದರ್ಶಿಸಲು ಮುಂದಾಗಿದೆ.

ಸದಾ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಟಾರ್ಗೆಟ್ ಮಾಡುವ ಚೀನಾಗೆ ತಕ್ಕ ಪಾಠ ಕಲಿಸಲು ಭಾರತ ಈ ನಿರ್ಧಾರಕ್ಕೆ ಬಂದಿದೆ. ನಮ್ಮ ಮತ್ತು ಚೀನಾ ನಡುವಿನ ಹದಗೆಟ್ಟಿದೆ. ಚೀನಾ ನಮ್ಮ ದೇಶವನ್ನು ಟಾರ್ಗೆಟ್​ ಮಾಡುತ್ತಲೇ ಇದೆ. ಆದ್ದರಿಂದ ಎರಡು ತಿಂಗಳ ಅವಧಿಗೆ ದಕ್ಷಿಣ ಚೀನಾ ಸಮುದ್ರಕ್ಕೆ ಗೈಡೆಡ್ ಮಿಸೈಲ್‌ ಡೆಸ್ಟ್ರಾಯರ್‌, ಕ್ಷಿಪಣಿ ಯುದ್ಧ ನೌಕೆ ಸೇರಿದಂತೆ ಸುಮಾರು ನಾಲ್ಕು ಹಡಗುಗಳನ್ನು ನಿಯೋಜಿಸಲಾಗುವುದು. ಇದರ ನಮ್ಮ ದೇಶವನ್ನು ಬಲಪಡಿಸಲಾಗುವುದು ಎಂದು ನೌಕಾಪಡೆ ತಿಳಿಸಿದೆ.

ಇದನ್ನೂ ಓದಿ: ಕೋವಿಡ್ ಲಸಿಕೆ ಉತ್ಪಾದನೆ; ಭಾರತಕ್ಕೆ ನೆರವು ನೀಡುತ್ತೇವೆ ಅಂತ ಈಗ ಹೇಳಿದ್ರು ಜೋ ಬೈಡನ್

ಇದು ಭಾರತೀಯ ನೌಕಾಪಡೆ ಮತ್ತು ಆಪ್ತ ದೇಶಗಳ ನಡುವಿನ ಸಮನ್ವಯತೆಯನ್ನು ಹೆಚ್ಚಿಸುತ್ತದೆ. ಸಾಗರ ಕ್ಷೇತ್ರದಲ್ಲಿ ಕಾರ್ಯಾಚರಣೆಯ ವ್ಯಾಪ್ತಿಯೂ ಭಾರತ ತನ್ನ ಆಪ್ತ ದೇಶಗಳೊಂದಿಗೆ ಹೊಂದಿರುವ ಒಗ್ಗಟ್ಟನ್ನು ಚೀನಾಗೆ ಸಾರಲಿದೆ ಎನ್ನಲಾಗಿದೆ.

Source: newsfirstlive.com Source link