ನಾನು ತಾಯಿಯಾಗಿದ್ದು ನನ್ನ ಬದುಕಿನ ಅತೀ ಸಂಭ್ರಮದ ಕ್ಷಣ: ಮಯೂರಿ

ಆನೇಕಲ್: ಎದೆಹಾಲು ನೀಡುವುದರ ಅವಶ್ಯಕತೆಯ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾರತ್ ಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಯು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸ್ಯಾಂಡಲ್‍ವುಡ್ ನಟಿ ಮಯೂರಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಯಾಮರಾ ಮುಂದೆ ಹಲವು ಪಾತ್ರ ನಿಭಾಯಿಸಿದ್ದ ನನಗೆ, ನಿಜ ಜೀವನದಲ್ಲಿ ತಾಯಿಯಾದಾಗ ಆ ಪಾತ್ರ ಅದೆಷ್ಟು ಜವಾಬ್ದಾರಿಯುತ ಎಂಬುದು ಅರ್ಥವಾಯಿತು. ಆ ಬದಲಾವಣೆಯನ್ನ ಅತೀವ ಸಂಭ್ರಮದಿಂದ ಸ್ವೀಕರಿಸಿದ್ದೇನೆ. ಮಗುವನ್ನ ನೋಡಿಕೊಳ್ಳುವುದು ನಿಜಕ್ಕೂ ಬಹು ದೊಡ್ಡ ಹೊಣೆ ಎಂಬುದು ನನಗೆ ಮನವರಿಕೆಯಾಗಿದೆ. ನಾನು ಈ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಎಂದರೆ ಇದರಲ್ಲಿ ನನ್ನ ಪತಿ ಮತ್ತು ಕುಟುಂಬದವರ ಬೆಂಬಲದಿಂದಲೇ ಎಂದು ಹೇಳಿದರು. ಇದನ್ನೂ ಓದಿ: ಬೆಡ್‍ನಲ್ಲೇ ಮಲ, ಮೂತ್ರ ವಿಸರ್ಜನೆ – ಆರೋಗ್ಯದ ಬಗ್ಗೆ ನಟಿ ಯಶಿಕಾ ಆನಂದ್ ಅಪ್ಡೇಟ್

ಶಿಶುವಿನ ಆರೋಗ್ಯಕರ ಬೆಳವಣಿಗೆಗೆ ತಾಯಿ ಎದೆಹಾಲು ಅತ್ಯಗತ್ಯ. ನಾನು ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಎದೆಹಾಲಿನ ಮಹತ್ವದ ಕುರಿತು ರೈನ್ ಬೋ ಕೈಗೊಂಡಿರುವ ಈ ಜಾಗೃತಿ ಕಾರ್ಯಕ್ರಮ ತುಂಬಾ ಸಮಯೋಚಿತವಾಗಿದೆ. ಆಸ್ಪತ್ರೆಯ ಈ ಕಾಳಜಿಯ ಅಭಿಯಾನದಲ್ಲಿ ನಾನು ಜೊತೆಯಾಗಿರುವುದು ಸಂತಸ ತಂದಿದೆ ಎಂದರು.

blank

Source: publictv.in Source link