ನರಾಚಿ ಲೋಕದ ಸೃಷ್ಟಿಕರ್ತ ಈಗ ಫುಲ್​ ಬ್ಯುಸಿ.. ಹೈದರಾಬಾದ್​ಗೆ ಹೋಗಿ ನೀಲ್​ ಏನ್​ ಮಾಡಿದ್ರು?

ನರಾಚಿ ಲೋಕದ ಸೃಷ್ಟಿಕರ್ತ ಈಗ ಫುಲ್​ ಬ್ಯುಸಿ.. ಹೈದರಾಬಾದ್​ಗೆ ಹೋಗಿ ನೀಲ್​ ಏನ್​ ಮಾಡಿದ್ರು?

ನರಾಚಿ ಲೋಕದ ಸೃಷ್ಠಿಕರ್ತ ನಿರ್ದೆಶಕ ಪ್ರಶಾಂತ್ ನೀಲ್ ಕೊರೊನ ಸಮಯದಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಕಳೆದ ವಾರ ಕೆಜಿಎಫ್ 2 ಚಿತ್ರದ ಡಬ್ಬಿಂಗ್​ನಲ್ಲಿ ನೀಲ್​ ಮಗ್ನ ರಾಗಿದ್ರು.. ಅದ್ರೆ ಈಗ ಸಡನ್ ಆಗಿ ನೀಲ್​ ಬೆಂಗಳೂರಿನಿಂದ ಹೈದರಾಬಾದ್​​ಗೆ ಹಾರಿದ್ದಾರೆ..

ಒಂದು ಸಿನಿಮಾ ಮುಗಿಯೋಕು ಮುಂಚೆ ನಿರ್ದೆಶಕ ಪ್ರಶಾಂತ್ ನೀಲ್ ಮತ್ತೊಂದು ಪ್ರಾಜೆಕ್ಟ್​ನ ಕೈಗೆತ್ತಿ ಕೊಂಡಿದ್ದಾರೆ.. ಉಗ್ರಂ ನಂತ್ರ ಎರಡು ವರ್ವಗಳ ಕಾಲ ಕೆಜಿಎಫ್ 1 ಚಿತ್ರ ಮುಗಿಸಿ, ಚಾಪ್ಟರ್​ 2 ಗೆ ನೀಲ್ ಕೈ ಹಾಕಿದ್ರು…ಅದ್ರೆ ಈಗ ನೀಲ್​ ಕೆಜಿಎಫ್ 2 ಮುಗಿಯೋಕು ಮುಂಚೆ ಟಾಲಿವುಡ್​ ಡಾರ್ಲಿಂಗ್​ ಪ್ರಭಾಸ್​ ಜೊತೆ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ 2 ಚಿತ್ರದ ಬಹುತೇಕ ಶೂಟಿಂಗ್​ ಮುಗಿಸಿ ಪ್ರಶಾಂತ್ ನೀಲ್ ಪೋಸ್ಟ್​ ಪ್ರೊಡಕ್ಷನ್​ ಮತ್ತು ಸಲಾರ್​ ಚಿತ್ರದ ಶೂಟಿಂಗ್​ ಕೆಲಸವನ್ನು ಒಟ್ಟೋಟ್ಟಿಗೆ ಶುರು ಮಾಡಿದ್ರು.. ಅದ್ರೆ ಕೊರೊನದಿಂದ ಸಲಾರ್​ ಚಿತ್ರದ ಶೂಟಿಂಗ್​ಗೆ ಬ್ರೇಕ್​ ಹಾಕಿದ್ದ ಕೆಜಿಎಫ್ ಸಾರಥಿ ಬೆಂಗಳೂರಿನಲ್ಲಿ ಕೆಜಿಎಫ್ 2 ತೆಲುಗು ವರ್ಶನ್ ಡಬ್ಬಿಂಗ್ ಕೆಲಸದಲ್ಲಿ ಕಳೆದ ಒಂದು ವಾರದಿಂದ ಬ್ಯುಸಿಯಾಗಿದ್ರು.. ಅಧೀರನ ಪಾತ್ರಕ್ಕೆ ಜೀವ ತುಂಬಿಸಿ ನಿಟ್ಟಿಸುರು ಬಿಟ್ಟಿದ್ದ್ ನೀಲ್​ ಈಗ ಸಡನ್​ ಆಗಿ ಕೆಜಿಎಫ್ ಕೆಲಸಕ್ಕೆ ಬ್ರೇಕ್ ಹಾಕಿ ಧಿಡೀರನೇ ಹೈದರಬಾದ್​ಗೆ ಹಾರಿದ್ದಾರೆ.

ಕೆಜಿಎಫ್​​​ 2 ತೆಲುಗು ವರ್ಷನ್​​​ ಡಬ್ಬಿಂಗ್​ ಮುಗಿಯುತ್ತಿದಂತೆ ನೀಲ್​ ಮಲೆಯಾಳಂ ಡಬ್ಬಿಂಗ್​ ಕೆಲಸವನ್ನು ತನ್ನ ತಂಡದ ಹೆಗಲಿಗೆ ವಹಿಸಿ ಸಲಾರ್​ ಅಂಗಳದಲ್ಲಿ ಪ್ರಶಾಂತ್​ ನೀಲ್​ ಪ್ರತ್ಯಕ್ಷರಾಗಿದ್ದಾರೆ.ಕೊರೊನದಿಂದ ಸಲಾರ್​ ಚಿತ್ರದ ಶೂಟಿಂಗ್​ಗೆ ಬ್ರೇಕ್​ ಹಾಕಿದ್ದ ನೀಲ್ , ಕಳೆದ ಸೋಮವಾರದಿಂದ ಹೈದರಾಬಾದ್​ನಲ್ಲಿ ಸಲಾರ್​ ಚಿತ್ರದ ಶೂಟಿಂಗ್​ ಮತ್ತೆ ಶುರುಮಾಡಿದ್ದಾರೆ.

Source: newsfirstlive.com Source link