ಮಿಡ್​​ನೈಟ್ ‘ಬಿಗ್’​ ಶಾಕ್; ಸ್ಪರ್ಧಿಗಳ ಎದೆಯಲ್ಲಿ ಢವಢವ

ಮಿಡ್​​ನೈಟ್ ‘ಬಿಗ್’​ ಶಾಕ್; ಸ್ಪರ್ಧಿಗಳ ಎದೆಯಲ್ಲಿ ಢವಢವ

ಈ ವಾರ ಬಿಗ್​​ಬಾಸ್​ ಮನೆ ಸಖತ್​ ಕಲರ್ ಫುಲ್​ ಆಗಿ ಕಾಣುತಿತ್ತು. ಬಿಗ್​​ಮನೆಯ ಸದಸ್ಯರಿಗೆ ಸರ್​ಪ್ರೈಸ್​ ಮೇಲೆ ಸರ್​ಪ್ರೈಸ್​ ಸಿಕ್ಕಿದ್ದು, ಎಲ್ಲರ ಮೊಗದಲ್ಲಿ ಖುಷಿ ತರಿಸಿದೆ. ಇತ್ತ ಬಿಗ್​ ಬಾಸ್​ ಬಳಿ ಅವರು ಕೇಳಿರುವ ಒಂದೊಂದೇ ವಿಶ್​ ಕೂಡ ಈಡೇರುತ್ತಿದೆ.

ನಿನ್ನೆಯ ಎಪಿಸೋಡ್​ನಲ್ಲಿ ದಿವ್ಯಾ ಉರುಡುಗ ವಿಶ್​ನಂತೆ ಸ್ವತಃ ಕಿಚ್ಚಾ ಸುದೀಪ್​ ಅಡುಗೆ ಮಾಡಿ ಮನೆಯವರಿಗೆಲ್ಲ ಊಟ ಕಳಿಸಿದ್ರು. ಇದಕ್ಕಿಂತ ಅದ್ಭುತವಾದ ಕ್ಷಣ ಇನ್ನೊಂದಿಲ್ಲ ಎನ್ನುವಂತೆ ಮನೆಯವರೆಲ್ಲ ಸಂಭ್ರಮಿಸಿದ್ರು. ಪ್ರತಿ ದಿನ ಒಬ್ಬಬ್ಬರ ಬಿಗ್​ ಬಾಸ್​ ಜರ್ನಿ ವಾಲ್​ ಕ್ರಿಯೇಟ್​ ಮಾಡಲಾಗ್ತಿದ್ದು, ಈಗಾಗಲೇ ಅರವಿಂದ್​, ವೈಷ್ಣವಿ ಜರ್ನಿ ಫ್ರೇಮ್​ ನೀವೆಲ್ಲ ನೋಡಿದ್ದಿರ.. ಇನ್ನು ಫಿನಾಲೆಗಿಂತ ಮೊದಲೇ ದುಡ್ಡು ಗೆಲ್ಲುವ ಅವಕಾಶವನ್ನ ಸ್ಪರ್ಧಿಗಳಿಗೆ ನೀಡಿದ್ದು, ಅದಕ್ಕೆ ಹೆಚ್ಚು ಅಂಕಗಳಿಕೆಗೆ ಬಿಗ್​ ಬಾಸ್​ ಟಾಸ್ಕ್​ ನೀಡಿದ್ದಾರೆ. ಇದೆಲ್ಲವೂ ಈ ವಾರದ ಹೈಲೆಟ್ಸ್​.

blank

ಇದನ್ನೂ ಓದಿ: ಅರವಿಂದ್ ಬಗ್ಗೆ ‘ಪ್ರೀತಿಯ ಮಾತು’; ದಿವ್ಯಾಳ ಮನದಾಳಕ್ಕೆ ಆ್ಯಪಲ್​ನಂತಾಗಿತ್ತು ಅರವಿಂದ್ ಕೆನ್ನೆ

ಬಿಗ್​ ಮನೆಯಲ್ಲಿ ಉಳಿದುರುವುದು ಕೇವಲ ಆರು ಜನ ಕಂಟೆಸ್ಟಂಟ್ಸ್​. ನೇರವಾಗಿ ಎಲ್ಲರೂ ನಾಮಿನೇಟ್​ ಆಗಿದ್ದಾರೆ. ಅದಲ್ಲದೇ ಮಿಡ್​ ವೀಕ್​ ಎಲಿಮಿನೇಷನ್​ ಟೆನ್ಷನ್​ ಶುರವಾಗಿದೆ. ಯಾರು ಮೊದಲು ಸೇವ್​ ಆಗ್ತಾರೆ ಅಂತಾ ಹೇಳೋದು ಕೊಂಚ ಕಷ್ಟ, ಕಾಂಪಿಟೇಶನ್​ ಅಷ್ಟು ಟಫ್​ ಆಗಿದೆ. ಎಲ್ಲರಿಗೂ ಅವರದೇ ಆದ ಫ್ಯಾನ್​ ಬೆಸ್​ ಇದೆ. ಟಾಪ್​ 5ನಲ್ಲಿ ಯಾರಿರಲಿದ್ದಾರೆ ಎಂಬುವುದ್ರ ಬಗ್ಗೆ ಒಂದಿಷ್ಟು ಚರ್ಚೆಗಳು ನಡೆದಿದ್ದು ಅದ್ರಲ್ಲಿ ಕೇಳಿ ಬರುತ್ತಿರುವ ಹೆಸರುಗಳು ಅರವಿಂದ್​ ಕೆ.ಪಿ, ಮಂಜು ಪಾವಗಡ.

ಹೌದು.. ಇವರಿಬ್ಬರು ಪೈನಲ್​ಲ್ಲಿ ಇದ್ದೆ ಇರ್ತಾರೆ ಅನ್ನೋದು ಸೋಶಿಯಲ್​ ಮಿಡಿಯಾದ ಒಂದು ವರ್ಗದ ಅನಿಸಿಕೆ. ಹಾಗೆ ಈಗಾಗಲೇ ಮನೆಯಿಂದ ಹೊರ ಬಂದಿರುವ ಕಂಟೆಸ್ಟಂಟ್ಸ್​ ಹೇಳುತ್ತಿರುವುದು ಇದನ್ನೇ. ಇನ್ನೂ ದಿವ್ಯಾ ಉರುಡುಗ, ವೈಷ್ಣವಿ ಬಗ್ಗೆ ನೋಡೋದಾದ್ರೆ ಮೊದಲಿನಿಂದಲು ಒಳ್ಳೆಯ ಅಭಿಪ್ರಾಯ ಮೆಂಟೇನ್ ಮಾಡಿಕೊಂಡು ಬಂದಿರುವ ಇಬ್ಬರು ಸ್ಟ್ರಾಂಗ್​ ಸ್ಪರ್ಧಿಗಳು. ದಿವ್ಯಾ ಸುರೇಶ್​ ಒನ್​ ಆಫ್​ ದಿ ಸ್ಟ್ರಾಂಗೆಸ್ಟ್ ​ ಕಂಟೆಸ್ಟಂಟ್​.. ಆದರೆ ಇವರಿಗೆ ಮೊದಲ ಇನ್ನಿಂಗ್ಸ್​ನ ಪರ್ಫಾರ್ಮೆನ್ಸ್ ಡ್ರಾಬ್ಯಾಕ್​ ಆಗಲಿದೆ ಅನ್ಸುತ್ತೆ. ಯಾಕಂದ್ರೆ ಸೆಕೆಂಡ್​ ಇನ್ನಿಂಗ್ಸಿನ್​ನಲ್ಲಿ ದಿವ್ಯಾ ಎಸ್​ ನೀಡಿದ ಕಾಂಪಿಟೆಷನ್​ ಮೊದಲ ಇನ್ನಿಂಗ್ಸ್​ನಲ್ಲಿ ಅಷ್ಟಾಗಿ ಕಾಣಲಿಲ್ಲ ಅನ್ನೋದು ವೀಕ್ಷಕರ ಅಭಿಪ್ರಾಯ.

ಇದನ್ನೂ ಓದಿ:ಬಿಗ್​ಬಾಸ್​ ಸೀಸನ್​​ -8ರ ಕಿಚ್ಚನ ಕೊನೆಯ ಚಪ್ಪಾಳೆ ಯಾರಿಗೆ ಗೊತ್ತಾ..?

blank

ಪ್ರಶಾಂತ್​ ಸಂಬರಗಿ ಈ ಇನ್ನಿಂಗ್ಸ್​ನಲ್ಲಿ ತಮ್ಮ ನೇರ ಮಾತುಗಾರಿಕೆಯಿಂದಲೇ ಫೇಮಸ್​​ ಆದ್ರು. ಸಾಕಷ್ಟು ಬಾರಿ ಕಿಚ್ಚನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಷ್ಟೆ ಅಲ್ಲದೆ ಈ ಇನ್ನಿಂಗ್ಸ್​ನಲ್ಲಿ ಫ್ಯಾನ್​ ಬೆಸ್​ ಜಾಸ್ತಿ ಆದಂತೆ ಕಾಣ್ತಿದೆ ಪ್ರಶಾಂತ್​ಗೆ. ಒಟ್ನಲ್ಲಿ ಇನ್ನು ಕೇವಲ 4 ದಿನಗಳಲ್ಲಿ ಬಿಗ್​ ಬಾಸ್​ ಟ್ರೋಫಿ ಒಬ್ಬರ ಕೈ ಸೇರಲಿದ್ದು, ಉಳಿದಿರುವ ಆರು ಜನ ಸ್ಪರ್ಧಿಗಳಲ್ಲಿ ಮಿಡ್​ ವೀಕ್​ ಎಲಿಮಿನೇಟ್​ ಆಗೋರು ಯಾರು? ಟಾಪ್​ 5ನಲ್ಲಿ ಯಾರಿರಲಿದ್ದಾರೆ ಅಂತಾ ಕೂತುಹಲ ಮೂಡಿಸಿದೆ. ಮಿಡ್​ ವೀಕ್​ನಲ್ಲಿ ಎಲಿಮಿನೇಟ್​ ಯಾರು ಆಗ್ಬಹುದು ಎಂಬುದ್ರ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಮೆಂಟ್​ ಮಾಡಿ.

blank

ಇದನ್ನೂ ಓದಿ: ಎಂಗೇಜ್‌ ಆದ್ರು ಅಂಕಿತಾ ಸುಹಾಸ್‌.. ಹೇಗಿತ್ತು ನಿಂಗಿ ನಿಶ್ಚಿತಾರ್ಥದ ಸಂಭ್ರಮ?

Source: newsfirstlive.com Source link