ಧರೆಗಿಳಿದ ಅಪ್ಸರೆನಾ? ಪಡ್ಡೆ ಹುಡುಗರ ನಿದ್ದೆಗೆಡಿಸಿದ ಈ ಕನ್ನಡತಿ ಯಾರು ಗೊತ್ತಾ?

ಧರೆಗಿಳಿದ ಅಪ್ಸರೆನಾ? ಪಡ್ಡೆ ಹುಡುಗರ ನಿದ್ದೆಗೆಡಿಸಿದ ಈ ಕನ್ನಡತಿ ಯಾರು ಗೊತ್ತಾ?

ಧರೆಗಿಳಿದ ಅಪ್ಸರೆನಾ? ನಕ್ಷತ್ರ ಲೋಕದ ಸೊಬಗ ಹೊತ್ತು ನಿಂತ ಸೌಂದರ್ಯದ ಖನಿಯಾ? ಅಂತ ಥಟ್ ಅಂತ ಅನಿಸೋ ಲೆವೆಲ್​​ನಲ್ಲಿ ಈ ಫೋಟೋದಲ್ಲಿ ಮಿಂಚುತ್ತಿರೋ ಈ ನಟಿ ಯಾರು ಗೊತ್ತಾ? ಅಂತಾ ಕೇಳಿದ್ರೆ ಅಯ್ಯೋ ಬಿಡ್ರಿ ನೀವು ಅದ್ಯಾವುದೋ ಬಾಲಿವುಡ್ಡೋ.. ಕಾಲಿವುಡ್ಡೋ.. ಹಾಲಿವುಡ್ಡು ಹೀರೋಯಿನ್.. ಇಲ್ಲವೇ ಮಾಡೆಲ್​ ಫೋಟೋ ಹಾಕಿ ಹೀಗೆ ಕೇಳಿದ್ರೆ ನಾವು ಏನು ಹೇಳೋಕೆ ಆಗುತ್ತೆ ಅಂತಾ.. ಪಟ್ ಅಂತ ಉತ್ತರ ಕೊಡಬೇಕು ಅಂತಾ ನೀವು ಯೋಚಿಸೋದಕ್ಕಿಂತ ಮುಂಚೆನೇ ಹೇಳ್ತೀವಿ ಕೇಳಿ.. ಇವರು ಕನ್ನಡದ ಮಣ್ಣಿನ ಮಗಳು.. ಯೆಸ್ ಈ ಸೌಂದರ್ಯವತಿ ಕನ್ನಡತಿ..!

blank

ಹೌದು.. ನೀವೆಲ್ಲ ಇವ್ರನ್ನ ನೋಡಿದ್ದೀರಾ.. ಮೆಚ್ಚಿಕೊಂಡಿದ್ದೀರಾ.. ಆದ್ರೆ ವಜ್ರಕಾಯ ಸಿನಿಮಾದಲ್ಲಿ ಶಿವಣ್ಣನ ಎದುರು ಅವರ ಮ್ಯಾಚ್ ಮಾಡುವಂಥ ಎನರ್ಜಿಯಲ್ಲಿ ನಟಿಸಲು ಯತ್ನಿಸಿದ್ದ ಪಟ್​ ಪಟಾಕಿನೇ ಇವ್ರು..! ಯೆಸ್ ನಿಮ್ಮ ಗೆಸ್ ನಿಜ.. ಇದು ಬೇರೆ ಯಾರೂ ಅಲ್ಲ ಚಿಕ್ಕಮಗಳೂರಿನ ಚಿಕ್ಕ ಮಲ್ಲಿಗೆ ನಭಾ ನಟೇಶ್..!

blank

ಕನ್ನಡದ ಟಾಪ್​​ ನಟಿ ನಭಾ ನಟೇಶ್​​ ಈಗ ತೆಲುಗಿನಲ್ಲಿ ಫುಲ್​​ ಬ್ಯುಸಿ. ಇತ್ತೀಚೆಗೆ ಬಾಲಿವುಡ್​​ ಹೀರೋ ಹೃತಿಕ್​​ ರೋಶನ್​​​​ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಸುದ್ದಿಯಲ್ಲಿದ್ದ ನಭಾ ನಟೇಶ್​​ ಫೋಟೋ ಶೂಟ್​​ ಮಾಡಿಸಿದ್ದಾರೆ. ವೈಟ್​ ಸೀರೆಯುಟ್ಟು ಫೋಟೋ ಶೂಟ್​ ಮಾಡಿಸಿರುವ ನಭಾ ನಟೇಶ್​​​ ಪಡ್ಡೆ ಹುಡುಗರಿಗೆ ಮತ್ತೇರಿಸುವಂತೆ ಕಾಣಿಸುತ್ತಾರೆ. ನಭಾ ನಟೇಶ್​ ಮೂಲತಃ ಚಿಕ್ಕಮಗಳೂರು. ನಟನೆ ಮತ್ತು ಮಾಡೆಲಿಂಗ್​​ನಲ್ಲಿ ಹೆಸರು ಮಾಡಿರುವ ನಭಾ ನಟೇಶ್​​ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಸ್ಯಾಂಡಲ್​​ವುಡ್​​, ಟಾಲಿವುಡ್ ಬೆನ್ನಲ್ಲೀಗ ಬಾಲಿವುಡ್​​ಗೆ ಹಾರುತ್ತಿದ್ದಾರೆ ಈ ಚೆಲುವೆ.

blank

ಕನ್ನಡದ ಪಠಾಕಾ ಹುಡುಗಿ ನಟಿಸಿದ ಮೊದಲ ಸಿನಿಮಾ ‘ವಜ್ರಕಾಯ’. ಬಳಿಕ ‘ಲೀ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು. ‘ಸಾಹೇಬ’ ಸಿನಿಮಾದ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದರು. 2019ರಲ್ಲಿ ಬಂದ ‘ಇಸ್ಮಾರ್ಟ್​ ಶಂಕರ್​’ ತೆಲುಗು ಚಿತ್ರದಲ್ಲಿ ನಭಾಗೆ ಭರ್ಜರಿ ಗೆಲುವು ಸಿಕ್ಕಿತು. ಸದ್ಯ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿರುವ ಈಕೆ ಮುಂದಿನ ಸಿನಿಮಾ ಹೃತಿಕ್​​​​ ಜೊತೆಗೆ ಎಂಬ ಖುಷಿ ಸುದ್ದಿ ಫ್ಯಾನ್ಸ್​ ಸಿಕ್ಕಿದೆ.

blank

Source: newsfirstlive.com Source link