ರಾಕಿ ದಾರಿಗೆ ಅಡ್ಡವಾದ ಅಲ್ಲು- ಅಮೀರ್.. KGFಗುರಿಯಿಟ್ಟ ದಿನಕ್ಕೆ ಪುಷ್ಪ ಮತ್ತು ಸಿಂಗ್ ಸ್ಕೇಚ್​..?

ರಾಕಿ ದಾರಿಗೆ ಅಡ್ಡವಾದ ಅಲ್ಲು- ಅಮೀರ್.. KGFಗುರಿಯಿಟ್ಟ ದಿನಕ್ಕೆ ಪುಷ್ಪ ಮತ್ತು ಸಿಂಗ್ ಸ್ಕೇಚ್​..?

ದುಶ್ಮನ್ ಕಹಾಹೇ ಅಂದ್ರೆ ಊರ್ ತುಂಬಾ ಹೈ.. ಅನ್ನೋ ಯಶ್ ಅವರ ಸಿನಿಮಾ ಡೈಲಾಗ್ ಯಶ್ ಅವರ ಕೆಜಿಎಫ್​​​​ ಸಿನಿಮಾಕ್ಕೇ ಅಪ್ಲೇ ಆಗೋ ಸೂಚನೆ ಸಿಕ್ತಿದೆ.. ಕೆಜಿಎಫ್​​​ನ ರಾಕಿ ಭಾಯ್ ಜಯದ ಹೆಜ್ಜೆಗೆ ಅಲ್ಲು ಮತ್ತು ಆಮೀರ್​​ ಕಲ್ಲುಮುಳ್ಳಾಗೋ ಸಾಧ್ಯತೆ ಕಾಣುತ್ತಿದೆ.. ಕೆಜಿಎಫ್ ಎರಡನೇ ಅಧ್ಯಾಯದ ಮೇಲೆ ಇಡೀ ಭಾರತೀಯ ಚಿತ್ರರಂಗದ ಕಣ್ಣು ಬಿದಿದ್ದೆ.. ರಾಕಿ ಭಾಯ್ ಗುರಿ ಇಟ್ಟಿದ್ದ ಆ ದಿನದ ಮೇಲೆ ಟಾಲಿವುಡ್​​ನ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್, ಬಾಲಿವುಡ್​​ನ ಮಿಸ್ಟರ್ ಫರ್ಫೆಕ್ಟ್ ಅಮೀರ್ ಖಾನ್ ಕಣ್ಣಿಟ್ಟಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಈಗ ಅನ್ಯ ಭಾಷೆಗಳ ಸಿನಿ ಇಂಡಸ್ಟ್ರಿಗಳಿಗೆ ತೂಫಾನ್ ಇದ್ದಂಗೆ.. ಕೆಜಿಎಫ್ ಎಬ್ಬಿಸಿರೋ ಕ್ರೇಜ್​​​​​ಗೆ ಅದರ್ ಲಾಂಗ್ವೇಜ್ ಸಿನಿಮಾಸ್ ಥಂಡ ಥಂಡ ಕೂಲ್ ಕೂಲ್ ಆಗಿವೆ.ಕೆಜಿಎಫ್​ ಸಿನಿಮಾಕ್ಕೆ ದೊಡ್ಡ ಸವಾಲು ಥ್ರಿಬಲ್ ಆರ್ ಎನ್ನಲಾಗಿತ್ತು.. ಆದ್ರೆ ಥ್ರಿಬಲ್ ಆರ್ ಸಿನಿಮಾ ತನ್ನ ಪಥವನ್ನ ಬದಲಾಯಿಸಿಕೊಂಡಿದೆ, ಅಕ್ಟೋಬರ್ 13ರಂದು ವಿಶ್ವವ್ಯಾಪಿ ಪ್ರೇಕ್ಷಕರ ಮುಂದೆ ಬಂದು ನಿಲ್ಲಲಿದೆ.

ಡಿಸೆಂಬರ್ ಕಡೆಯವಾರ.. ಅನೇಕ ನಟ ನಟಿಯರಿಗೆ ಡಿಸೆಂಬರ್​ನ ಕೊನೆಯ ವಾರ ಲಕ್ಕಿ ವೀಕ್​​.. ರಾಕಿಂಗ್ ಸ್ಟಾರ್ ಯಶ್ ಅವರ ಪಾಲಿನ ಹಿಟ್ ಸಿನಿಮಾ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಹಾಗೂ ಕೆಜಿಎಫ್ ಚಾಪ್ಟರ್ 1 ಸಿನಿಮಾಗಳು ಡಿಸೆಂಬರ್​​​ನಲ್ಲೇ ರಿಲೀಸ್ ಆಗಿ ದಾಖಲೆ ಮಾಡಿದ್ದು. ಎರಡೆರಡು ಬಾರಿ ರಿಲೀಸ್ ಡೇಟ್ ಫಿಕ್ ಮಾಡಿಕೊಂಡರು ಕೆಜಿಎಫ್​ ಚಾಪ್ಟರ್ 2 ತೆರೆಕಾಣಿಸಲು ಸಾಧ್ಯವೇ ಆಗ್ಲಿಲ್ಲ. ಆಗಿದೆಲ್ಲ ಒಳ್ಳೆದಕ್ಕೆ ಅನ್ನೋ ಮನೋಭಾವದಲ್ಲಿ ತನ್ನ ಲಕ್ಕಿ ಡೇಟ್​​ ಸಿನಿಮಾವನ್ನ ತೆರೆಗೆ ಇಳಿಸಿಬಿಟ್ರೇ ಹೆಂಗೆ ಅನ್ನೋ ಆಲೋಚನೆಯಲ್ಲಿ ಯಶ್ ಬಳಗ ನಿಂತಿದೆ. ಆದ್ರೆ ರಾಕಿ ಭಾಯ್ ದಾರಿಗೆ ಕಲ್ಲು ಮುಳ್ಳಾಗಲು ಅಲ್ಲು ಮತ್ತು ಆಮೀರ್ ಡಿಸೈಡ್ ಮಾಡಿದಂತೆ ಕಾಣುತ್ತಿದೆ.

ಕಳೆದ ಮಂಗಳವಾರ ಟಾಲಿವುಡ್ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಮೂವಿ ಪುಷ್ಪ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಯ್ತು.. ಎರಡೇರಡು ಭಾಗಗಳಲ್ಲಿ ಪುಷ್ಪ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಇತ್ತ ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ ಡೇಟ್​ ಅನ್ನ ಇನ್ನೂ ಕೂಡ ಫೈನಲ್ ಮಾಡದೇ ಇದ್ದರು ಪ್ರಶಾಂತ್ ನೀಲ್ ಬಳಗದ ರಿಲೀಸ್ ಗುರಿ ಡಿಸೆಂಬರ್ 25ರ ಮೇಲೆ ಇದೆ ಎನ್ನಲಾಗುತ್ತಿದೆ.. ಒಂದು ಚೇಸಿಂಗ್ ಶೂಟಿಂಗ್ ಮತ್ತು ಡಬ್ಬಿಂಗ್ ಹಾಗೂ ಡಿ ಐ ಕಾರ್ಯವನ್ನ ಬಾಕಿ ಉಳಿಸಿಕೊಂಡಿರೋ ಕೆಜಿಎಫ್ ಬಳಗ ಡಿಸೆಂಬರ್ ಕಡೆಯ ವಾರದಲ್ಲೇ ಪ್ರೇಕ್ಷಕರ ಮುಂದೆ ಬರೋ ಪ್ಲಾನ್​​​​​​​​​​ನಲ್ಲಿದೆ.

Source: newsfirstlive.com Source link