ಚುನಾವಣೆ ವಿಚಾರದಲ್ಲಿ ಸಂವಿಧಾನದ ಆಶಯ ಪಾಲನೆಯಾಗ್ತಿಲ್ಲ -ಸರ್ಕಾರಕ್ಕೆ ಹೈಕೋರ್ಟ್​ ತರಾಟೆ

ಚುನಾವಣೆ ವಿಚಾರದಲ್ಲಿ ಸಂವಿಧಾನದ ಆಶಯ ಪಾಲನೆಯಾಗ್ತಿಲ್ಲ -ಸರ್ಕಾರಕ್ಕೆ ಹೈಕೋರ್ಟ್​ ತರಾಟೆ

ಬೆಂಗಳೂರು: ಬಾಕಿಯಿರುವ ಪಾಲಿಕೆ, ನಗರಸಭೆಗಳಿಗೆ ಚುನಾವಣೆ ಘೋಷಿಸಿ, ವೇಳಾಪಟ್ಟಿ ಪ್ರಕಟಿಸಿ ಅಂತಾ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಹೈಕೋರ್ಟ್​ನ ಈ ಆದೇಶ ಬೆನ್ನಲ್ಲೇ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ದೊಡ್ಡ ಸವಾಲು ಎದುರಾಗಿದೆ.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ತರೀಕೆರೆ ಸೇರಿದಂತೆ ಮುಂತಾದ ಕಡೆ ಅವಧಿಯೊಳಗೆ ಚುನಾವಣೆ ನಡೆದಿಲ್ಲ. ಚುನಾವಣೆಯನ್ನ ಮುಂದೂಡುವಂತೆ ಸರ್ಕಾರ ಹೈಕೋರ್ಟ್​ಗೆ ಮನವಿ ಮಾಡಿತ್ತು. ಕೋವಿಡ್ ಕಾರಣಕ್ಕೆ ಡಿಸೆಂಬರ್ ಅಂತ್ಯದವರೆಗೂ ಚುನಾವಣೆ ನಡೆಸದಂತೆ ಸರ್ಕಾರ ಮನವಿ ಮಾಡಿಕೊಂಡಿತ್ತು.

blank

ಈ ವಿಚಾರಣೆ ನಡೆಸಿದ ಹೈಕೋರ್ಟ್​, ಸರ್ಕಾರದ ಮನವಿಯನ್ನ ಆಯೋಗ ಪರಿಗಣಿಸಬೇಕಿಲ್ಲ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆದಿದೆ. ಕರ್ನಾಟಕದಲ್ಲಿ ಮಾತ್ರ ಚುನಾವಣೆ ಮುಂದೂಡಲಾಗುತ್ತಿದೆ. ಸಂವಿಧಾನದ ಆಶಯ ಪಾಲನೆಯಾಗುತ್ತಿಲ್ಲ. ಎಲ್ಲಾ ಧಾರ್ಮಿಕ ಕೇಂದ್ರಗಳನ್ನೂ ತೆರೆಯಲಾಗಿದೆ. ಜನ ಕ್ಯೂನಲ್ಲಿ ನಿಂತು ದೇವಾಲಯಕ್ಕೆ ಹೋಗಬಹುದು. ಹಾಗೆಯೇ ಚುನಾವಣೆ ಮಾಡಲು ಸಾಧ್ಯವಿಲ್ಲವೇ? ಎಂದು ರಾಜ್ಯ ಸರ್ಕಾರವನ್ನ ಹೈಕೋರ್ಟ್​ ತರಾಟೆಗೆ ತೆದುಕೊಂಡಿತು.

Source: newsfirstlive.com Source link