ಸನ್ನಿ ಲಿಯೋನ್ ಹೊಸ ಮನೆಯಲ್ಲಿ ಜಿರಳೆ ಕಾಟವಂತೆ ಮಾರೆಽ..!

ಸನ್ನಿ ಲಿಯೋನ್ ಹೊಸ ಮನೆಯಲ್ಲಿ ಜಿರಳೆ ಕಾಟವಂತೆ ಮಾರೆಽ..!

ಸನ್ನಿ ಲಿಯೋನ್.. ಸಿನಿಮಾ ಮಾಡ್ಲಿ ಸಿನಿಮಾ ಮಾಡ್ದೇ ಇರ್ಲಿ.. ಸೋಶಿಯಲ್ ಜಗತ್ತು ಸನ್ನಿ ಮೇಲೆ ಒಂದು ಕಣ್ಣು ಇಟ್ಟೇ ಇರುತ್ತೆ.. ಏನಾದ್ರೊಂದು ಚಮಕ್ ಚಲ್ಲೋ ವಿಡಿಯೋ ಫೋಟೋಸ್​​ಗಳನ್ನ ಸೋಶಿಯಲ್ ಸಮುದ್ರಕ್ಕೆ ತೇಲಿ ಬಿಟ್ಟು ಬೇಜಾನ್ ಲೈಕ್ಸು ಕಲರ್ ಕಲರ್ ಕಾಮೆಂಟ್ಸು ಗಳನ್ನ ಗಿಟ್ಟಿಸಿಕೊಳ್ತಾ ಇರ್ತಾರೆ ಬಿಟೌನ್ ಡಾಲ್​​.

ಕೆಲ ದಿನಗಳ ಹಿಂದೆ ಕಾಟನ್ ಪೇಟೆ ಗೇಟ್ ಅನ್ನೋ ಸಿನಿಮಾಕ್ಕಾಗಿ ಸ್ಯಾಂಡಲ್​​ವುಡ್​​ಗೆ ಬರ್ತಾರೆ ಅಂತ ಸುದ್ದಿಯಾಗಿದ್ದು , ಮೊನ್ನೆ ಹೊಸ್ ಮನೆ ಗೃಹ ಪ್ರವೇಶ ಮಾಡಿ ಐ ಲವ್ ಇಂಡಿಯಾ ಎಂದಿದ್ರು.. ಈಗ ಒಂದು ಜೀವದ ಜೊತೆ ಹೋರಾಟ ಮಾಡಿ ಸೋಶಿಯಲ್ ಸಮುದ್ರದ ದಡದ ತುಂಬಾ ಮೇರವಣಿಗೆ ಮಾಡಿದ್ದಾರೆ ಸೇಸಮ್ಮ. ಅದು ಜಿರಳೆಯೋ ಸೋಳ್ಳೆಯೋ ಸರಿಯಾಗಿ ಗೊತ್ತಾಗೊಲ್ಲ.. ಆದ್ರೆ ಆ ಕೀಟವನ್ನ ಹೊಡೆಯಲು ಹೋಗಿ ಆ ಕೀಟ ಸನ್ನಿ ಲಿಯೋನ್ ಅವರ ಪತಿದೇವರು ಡೇನಿಯಲ್ ವೆಬರ್ ಅವರ ಬಟ್ಟೆಯಲ್ಲಿ ಸೇರಿ ಹೆಂಗೆ ರಂಪ ಮಾಡಿದೆ ಅಂತ.

ಈ ಸನ್ನಿ ಮತ್ತು ಜಿರಳೆಯ ಹೋರಾಟದಲ್ಲಿ ಆ ಜೀವಿಗೆನು ಆಗಿಲ್ಲ ಅನ್ನೋ ಸಂದೇಶವನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ ಪಡ್ಡೆಹುಡ್ಗರ ಪಾಲಿನ ಚಿನ್ನಿ ಸನ್ನಿ. ಒಟ್ಟಿನಲ್ಲಿ ಸನ್ನಿ ಲಿಯೋನ್​​​ ಏನೇ ಮಾಡಿದ್ರು ಸದ್ದು ಗದ್ದಲ ಆಗುತ್ತೆ , ವೈರಲ್ ಚಿಟ್ಟೆಯಾಗಿ ಎಲ್ಲೆಲ್ಲು ಸಂಚಾರದ ಸಮಾಚಾರ ಮಾಡುತ್ತೆ.

 

 

 

Source: newsfirstlive.com Source link