500 ಎಪಿಸೋಡ್​ ಕಂಪ್ಲೀಟ್ ಮಾಡಿದ ಸಂಭ್ರದಲ್ಲಿ ಇಂತಿ ‘ನಿಮ್ಮ ಆಶಾ’

500 ಎಪಿಸೋಡ್​ ಕಂಪ್ಲೀಟ್ ಮಾಡಿದ ಸಂಭ್ರದಲ್ಲಿ ಇಂತಿ ‘ನಿಮ್ಮ ಆಶಾ’

ಸಂಗೀತಾ ಅನಿಲ್​, ಧರ್ಮ ಮುಖ್ಯ ಭೂಮಿಕೆಯ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಇಂತಿ ನಿಮ್ಮ ಆಶಾ ಧಾರಾವಾಹಿ ಈಗ 500 ಎಪಿಸೋಡ್​ ಕಂಪ್ಲೀಟ್ ಮಾಡಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

ಒಂದು ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಗಳು, ಕುಟುಂಬಕ್ಕಾಗಿ ಇಡೀ ಜೀವನವನ್ನ ಮುಡಿಪಾಗಿಟ್ಟ ಹೆಣ್ಣುಮಗಳ ಕತಾ ಹಂದರವನ್ನು ಹೊಂದಿರುವ ಆಶಾ ತಂಡದಲ್ಲಿ ಸಂಭ್ರಮ ಮನೆ ಮಾಡಿದೆ.
ಹೌದು, ಬೆಂಗಾಲಿ ಭಾಷೆಯ ಸೀರಿಯಲ್​ನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ರಿಮೇಕ್​ ಮಾಡಲಾಗಿದ್ದು, ಕನ್ನಡಿಗರ ಮನ ಗೆಲ್ಲುವಲ್ಲಿ ಇಂತಿ ನಿಮ್ಮ ಆಶಾ ತಂಡ ಯಶಸ್ವಿಯಾಗಿದೆ.

ಇನ್ನೂ ಮೊನ್ನೆ ಅಷ್ಟೆ ಶಾಲಿನಿ ಸತ್ಯನಾರಾಯಣ ಅವರು ಗೆಸ್ಟ್​ ರೋಲ್​ ಪ್ಲೇ ಮಾಡಿದ್ರು. ಆಶಾಗೆ ಎದುರಾಗುವ ತೊಂದರೆಗಳನ್ನ ಹೇಗೆ ನಿಭಾಯಿಸಬೇಕು ಎಂಬುವುದ್ರ ಬಗ್ಗೆ ಶಾಲಿನಿ ಪಾಠ ಮಾಡಿದ್ರು. ಮಹಿಳೆಯರ ಮೆಚ್ಚಿನ ಸೀರಿಯಲ್​ ಆಗಿರುವ ಇಂತಿ ನಿಮ್ಮ ಆಶಾ ಹೀಗೆ ಸಾವಿರ ಎಪಿಸೋಡ್​ಗಳನ್ನ ಕಂಪ್ಲೀಟ್​ ಮಾಡ್ಲಿ ಅನ್ನೋದು ಅಭಿಮಾನಗಳ ಆಶಯ.

Source: newsfirstlive.com Source link