ಭ್ರಷ್ಟಾಚಾರ ಕೇಸ್​​; ಸುದ್ದಿ ಪ್ರಸಾರ ಮಾಡದಂತೆ ನ್ಯೂಸ್​​ಫಸ್ಟ್​​ಗೆ ಕೋರ್ಟ್​​ನಿಂದ ತಡೆ ತಂದ ಜೊಲ್ಲೆ

ಭ್ರಷ್ಟಾಚಾರ ಕೇಸ್​​; ಸುದ್ದಿ ಪ್ರಸಾರ ಮಾಡದಂತೆ ನ್ಯೂಸ್​​ಫಸ್ಟ್​​ಗೆ ಕೋರ್ಟ್​​ನಿಂದ ತಡೆ ತಂದ ಜೊಲ್ಲೆ

ಬೆಂಗಳೂರು: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವರದಿ ಪ್ರಸಾರ ಮಾಡದಂತೆ ನ್ಯೂಸ್​​ಫಸ್ಟ್​​ಗೆ ಸಚಿವೆ ಶಶಿಕಲಾ ಜೊಲ್ಲೆ ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದಾರೆ.

ಶಶಿಕಲಾ ಜೊಲ್ಲೆ ಅವರು ಪ್ರಕರಣದ ವರದಿ ಪ್ರಸಾರ ತಡೆಗೆ ಕೋರಿ ಸಿಟಿ ಸಿವಿಲ್ ಕೋರ್ಟ್​ ಮೊರೆ ಹೋಗಿದ್ದಾರೆ. ಅದರ ವಿಚಾರಣೆ ನಡೆಸಿದ ಕೋರ್ಟ್​, ಮುಂದಿನ ವಿಚಾರಣೆವರೆಗೂ ಸಚಿವರಿಗೆ ಸಂಬಂಧಿಸಿದ ವಿಡಿಯೋವನ್ನ ಪ್ರಸಾರ ಮಾಡಬಾರದು ಅಂತಾ ನ್ಯಾಯಾಧೀಶ ಸತೀಶ್ ಅವರು ಸೂಚಿಸಿದ್ದಾರೆ.

ಸದ್ಯ ಮಧ್ಯಂತರ ತಡೆ ತಂದಿರುವ ಜೊಲ್ಲೆ ಪ್ರಕರಣದ ಅಂತಿಮ ತೀರ್ಪು ಆಗಸ್ಟ್​ 25 ರಂದು ಹೊರ ಬೀಳಲಿದೆ. ಅದರಂತೆ ಆಗಸ್ಟ್​ 25 ರಂದು ನ್ಯೂಸ್​ಫಸ್ಟ್​ ಮುಂದೆ ಜೊಲ್ಲೆಗೆ ಸಂಬಂಧಿಸಿದ ವರದಿಯನ್ನ ಪ್ರಸಾರ ಮಾಡಬೇಕೋ ಬೇಡವೋ ಎಂದು ತೀರ್ಪು ನೀಡಲಿದೆ. ಇನ್ನು ಶಶಿಕಲಾ ಜೊಲ್ಲೆ ಸಲ್ಲಿಸಿರುವ ಅರ್ಜಿಯನ್ನ ವಿರೋಧಿಸಿ ನ್ಯೂಸ್​ಫಸ್ಟ್ ತಂಡ ಕೋರ್ಟ್​ ಆಕ್ಷೇಪಣೆ ಸಲ್ಲಿಕೆ ಮಾಡಿದೆ. ಸಚಿವರಿಗೆ ಸಂಬಂಧಿಸಿದ ವಿಡಿಯೋ ಸಮೇತ ಆಕ್ಷೇಪಣೆಯನ್ನ ಸಲ್ಲಿಕೆ ಮಾಡಲಾಗಿದೆ.

Source: newsfirstlive.com Source link