17 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಾರಕಿಹೊಳಿ ಕುಟುಂಬಕ್ಕೆ ಬಿಗ್ ಶಾಕ್..!

17 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಾರಕಿಹೊಳಿ ಕುಟುಂಬಕ್ಕೆ ಬಿಗ್ ಶಾಕ್..!

ಬೆಂಗಳೂರು: ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಸಚಿವ ಸಂಪುಟವನ್ನ ಇಂದು ವಿಸ್ತರಣೆ ಮಾಡಿದ್ದು, ಬರೋಬ್ಬರಿ 17 ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಜಾರಕಿಹೊಳಿ ಸಹೋದರರಿಗೆ ಬಿಗ್ ಶಾಕ್ ಆಗಿದೆ.

ಇದೇ ಮೊದಲ ಬಾರಿಗೆ ಜಾರಕಿಹೊಳಿ ಕುಟುಂಬಕ್ಕೆ ಮಂತ್ರಿಗಿರಿ ಸ್ಥಾನ ಕೈತಪ್ಪಿದೆ. 2004 ರಿಂದ ನಿರಂತರವಾಗಿ ಪ್ರತೀ ಸರ್ಕಾರದಲ್ಲೂ ಜಾರಕಿಹೊಳಿ ಕುಟುಂಬ ಮಂತ್ರಿಸ್ಥಾನವನ್ನ ಪಡೆದುಕೊಂಡು ಬಂದಿತ್ತು. ಅದರಂತೆ ಸರ್ಕಾರ ಯಾವುದೇ ಇರಲಿ, ಪಕ್ಷದಿಂದ ಒಬ್ಬರೆಲ್ಲಾ ಒಬ್ಬರು ಮಂತ್ರಿಯಾಗಿರುತ್ತಿದ್ದರು. ಈ ಮೂಲಕ ಜಾರಕಿಹೊಳಿ ಕುಟುಂಬ ಕರ್ನಾಟಕ ರಾಜಕಾರಣದಲ್ಲಿ ಒಂದು ದೊಡ್ಡ ಹಿಡಿತವನ್ನ ಸಾಧಿಸುತ್ತಿತ್ತು. ಆದರೆ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಭಾರೀ ಹಿನ್ನಡೆ ಅನುಭವಿಸಿದಂತಾಗಿದೆ.

ಇದನ್ನೂ ಓದಿ: ಭ್ರಷ್ಟಾಚಾರ ಕೇಸ್​​; ಸುದ್ದಿ ಪ್ರಸಾರ ಮಾಡದಂತೆ ನ್ಯೂಸ್​​ಫಸ್ಟ್​​ಗೆ ಕೋರ್ಟ್​​ನಿಂದ ತಡೆ ತಂದ ಜೊಲ್ಲೆ

ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಸಚಿವರಾಗುತ್ತಾರೆ ಅಂತಾ ಭಾವಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ಕೈತಪ್ಪಿದೆ. ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಹಿಡಿತವನ್ನ ಸಾಧಿಸಿರುವ ಜಾರಕಿಹೊಳಿ ಕುಟುಂಬಕ್ಕೆ ಇದೀಗ ಮಂತ್ರಿಸ್ಥಾನ ಸಿಗದಿರೋದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಅಶೋಕ್, ವಿಜಯಪುರಕ್ಕೆ ಜೊಲ್ಲೆ: ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ

Source: newsfirstlive.com Source link