BB ಮನೆಯಿಂದ ರಾತ್ರೋರಾತ್ರಿ ಹೊರಗೆ ಬಂದ DS

ಬಿಗ್‍ಬಾಸ್ ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಮನೆಯಲ್ಲಿರುವ ಸ್ಪರ್ಧಿಗಳ ಸಂಖ್ಯೆಯು ಎಲಿಮಿನೇಷನ್ ಮೂಲಕವಾಗಿ ಅಷ್ಟೇ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಸ್ಪರ್ಧೆ ಇನ್ನಷ್ಟು ರೋಚಕತೆಯನ್ನು ಪಡೆದುಕೊಳ್ಳುತ್ತಿದೆ.

ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಫಿನಾಲೆಗೂ ಮುನ್ನ ಕಟ್ಟಕಡೆಯ ಎಲಿಮಿನೇಷನ್‍ನ ನಡೆದಿದ್ದು ಒಬ್ಬರು ಎಲಿಮಿನೇಟ್ ಆಗಿದ್ದಾರೆ.

ಮೊದಲು ಅರವಿಂದ್ ಸೇವ್ ಆದರೆ, ನಂತರ ವೈಷ್ಣವಿ, ಮಂಜು, ದಿವ್ಯಾ ಉರುಡುಗ ಸೇವ್ ಆಗಿದ್ದಾರೆ. ಮನೆಯ ಮುಖ್ಯದ್ವಾರದ ಸಮೀಪ ಎರಡು ರೂಮ್ ಮಾಡಲಾಗಿತ್ತು. ಇದರೊಳಗೆ ಕೊನೆಯದಾಗಿ ಉಳಿದುಕೊಂಡಿದ್ದು ಪ್ರಶಾಂತ್ ಹಾಗೂ ದಿವ್ಯಾ ಸುರೇಶ್ ಒಳ ನಡೆದರು. ಪ್ರಶಾಂತ್ ಇದರಿಂದ ಹೊರ ಬಂದರೆ, ದಿವ್ಯಾ ಹಾಗೆಯೇ ಮನೆಯಿಂದ ಹೊರ ನಡೆದರು.

blank

ಉಳಿದ ಸ್ಪರ್ಧಿಗಳಿಗೆ ಕೊನೆಯದಾಗಿ ಒಂದು ಬಾಯ್ ಹೇಳೋಕೂ ಅವರ ಬಳಿ ಸಾಧ್ಯವಾಗಿಲ್ಲ. ಈ ಮೂಲಕ ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್ ಸಂಬರಗಿ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಫಿನಾಲೆ ತಲುಪಿದ್ದಾರೆ.

ದಿವ್ಯಾ ಸುರೇಶ್‍ಗೆ ಮಂಜು ಹೆಚ್ಚು ಆಪ್ತರಾಗಿದ್ದರು. ಆದರೆ, ಸೆಕೆಂಡ್ ಸೀಸನ್‍ನಲ್ಲಿ ಮಂಜು ಜತೆ ಅಷ್ಟು ಆಪ್ತತೆ ಇರಲಿಲ್ಲ. ಇತ್ತೀಚೆಗೆ ಟಾಸ್ಕ್ ಸಂದರ್ಭದಲ್ಲಿ ಸಾಕಷ್ಟು ಡಲ್ ಆಗಿದ್ದರೂ ಪ್ರಿಯಾಂಕಾ ತಿಮ್ಮೇಶ್ ಹಾಗೂ ಶಮಂತ್ ಬ್ರೋ ಗೌಡ ಜತೆ ದಿವ್ಯಾ ಆಪ್ತವಾಗಿದ್ದರು.

ಕಳೆದ ವಾರದ ಆರಂಭದಲ್ಲಿ ಬಿಗ್‍ಬಾಸ್ ಮನೆಯಲ್ಲಿ 9 ಸದಸ್ಯರು ಇದ್ದರು. ಈ ಪೈಕಿ ಚಕ್ರವರ್ತಿ ಚಂದ್ರಚೂಡ್ ವಾರದ ಮಧ್ಯದಲ್ಲಿ ಎಲಿಮಿನೇಟ್ ಆದರು. ಕಳೆದ ವಾರಾಂತ್ಯದಲ್ಲಿ ಶುಭಾ ಪೂಂಜಾ ಹಾಗೂ ಶಮಂತ್ ಬ್ರೋ ಗೌಡ ಎಲಿಮಿನೇಟ್ ಆಗಿದ್ದಾರೆ. ಇಂದು ದಿವ್ಯಾ ಸುರೇಶ್ ಹೊರಗೆ ಹೋಗಿದ್ದಾರೆ. ಉಳಿದಿರುವ 5 ಮಂದಿ ಸ್ಪರ್ಧಿಗಳು ಉತ್ತಮ ಆಟಗಾರರೇ ಆಗಿರುವುದರಿಂದ ಯಾರು ಬಿಗ್‍ಬಾಸ್ ಟ್ರೋಫಿಯನ್ನು ಎತ್ತಿ ಹಿಡಿಯಲಿದ್ದಾರೆ ಎನ್ನುವುದು ಆಗಸ್ಟ್ 8 ರಂದು ತಿಳಿಯಲಿದೆ.

Source: publictv.in Source link