ಭೀಕರವಾಗಿ ಕಚ್ಚಿದರೂ ಪಟ್ಟು ಬಿಡದ ಭಾರತದ ಕುಸ್ತಿ ಪಟು; ಒಲಿಂಪಿಕ್​ ಫೈನಲ್​​ಗೆ ಲಗ್ಗೆ

ಭೀಕರವಾಗಿ ಕಚ್ಚಿದರೂ ಪಟ್ಟು ಬಿಡದ ಭಾರತದ ಕುಸ್ತಿ ಪಟು; ಒಲಿಂಪಿಕ್​ ಫೈನಲ್​​ಗೆ ಲಗ್ಗೆ

ಕುಸ್ತಿ ವಿಭಾಗದಲ್ಲಿ ಫೈನಲ್​ಗೆ ಲಗ್ಗೆ ಇಟ್ಟಿರುವ ಭಾರತೀಯ ಹೆಮ್ಮೆಯ ಕುಸ್ತಿಪಟು ರವಿಕುಮಾರ್ ದಹಿಯಾ ಅವರು, ಸೆಮಿ ಫೈನಲ್​​ನ ಕೊನೆ ಕ್ಷಣದಲ್ಲಿ ಎದುರಾಳಿ ಸ್ಪರ್ಧಿಯಿಂದ ತೀವ್ರ ನೋವು ಅನುಭವಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕುಸ್ತಿಪಟು ರವಿಕುಮಾರ್ ದಹಿಯಾ ಅವರು ಇಂದು ಭಾರತಕ್ಕೆ ಮತ್ತೊಂದು ಪದಕ ಪಕ್ಕಾ ಮಾಡಿದ್ದಾರೆ. ವಿಶ್ವದ ನಾಲ್ಕನೇ ಶ್ರೇಯಾಂಕಿತ ರವಿಕುಮಾರ್‌ ದಹಿಯಾ, 57 ಕೆ.ಜಿ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನುರಿಸ್ಲಾಂ ಸನಯೇವ್​ ವಿರುದ್ಧ ಜಯಭೇರಿ ಸಾಧಿಸಿದ್ದಾರೆ. ಈ ಮೂಲಕ ಕುಸ್ತಿ ವಿಭಾಗದಲ್ಲಿ ರವಿಕುಮಾರ್​​​​ ಫೈನಲ್​ ಪ್ರವೇಶಿಸಿದ್ದಾರೆ. ಈ ಗೆಲುವಿನೊಂದಿಗೆ ದಹಿಯಾ 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ನಂತರ ಒಲಿಂಪಿಕ್ಸ್ ಫೈನಲ್ ಪ್ರವೇಶಿಸಿದ ಎರಡನೇ ಭಾರತೀಯ ಕುಸ್ತಿಪಟು ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್​: ಫೈನಲ್​​​ಗೆ ಲಗ್ಗೆ ಇಟ್ಟ ಕುಸ್ತಿ ಪಟು ರವಿ ದಹಿಯಾ.. ಚಿನ್ನಕ್ಕಾಗಿ ಹೋರಾಟ

ಆದರೆ ಸೆಮಿ ಫೈನಲ್​​ನಲ್ಲಿ ನಡೆದ ಕುಸ್ತಿ ವೇಳೆ ದಹಿಯಾ ಅವರು ತೀವ್ರ ನೋವನ್ನ ಅನುಭವಿಸಿದ್ದಾರೆ. ಪಂದ್ಯದ ಕೊನೆಯ ಸೆಕೆಂಡ್​ಗಳಲ್ಲಿ ರವಿಕುಮಾರ್, ರವಿ ಸನಯೇವ್‌ರನ್ನು ನೆಲಕ್ಕೆ ಬೀಳಿಸಿ ಗೆಲುವಿನತ್ತ ಮುನ್ನುಗ್ಗುತ್ತಿದ್ದಾಗ ಕಜಕಿಸ್ತಾನದ ಕುಸ್ತಿಪಟು ಅವರ ಕೈಗೆ ಗಂಭೀರವಾಗಿ ಕಚ್ಚಿದ್ದಾರೆ. ಈ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಜಕಿಸ್ತಾನದ ಕುಸ್ತಿಪಟು ಈ ರೀತಿ ನಡೆದುಕೊಂಡಿರೋದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗಿದೆ. ನುರಿಸ್ಲಾಂ ಸನಯೇವ್ ಅವರನ್ನ ಅಥ್ಲೆಟಿಕ್ಸ್​ನಿಂದ ಬ್ಯಾನ್ ಮಾಡಬೇಕು ಅನ್ನೋ ಆಗ್ರಹಗಳು ಕೇಳಿಬಂದಿವೆ. ಇನ್ನು ನಾಳೆ ಫೈನಲ್ ಪಂದ್ಯ ನಡೆಯಲಿದ್ದು, ರವಿಕುಮಾರ್ ಅವರು ರಷ್ಯಾದ ಝೌರ್ ಉಗುವ್ ವಿರುದ್ಧ ಚಿನ್ನದ ಪದಕ್ಕಾಗಿ ಸೆಣಸಾಟ ನಡೆಸಲಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ 2ನೇ ಪದಕ; ಬ್ಯಾಡ್ಮಿಂಟನ್​​ನಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ ಪಿವಿ ಸಿಂಧು

 

Source: newsfirstlive.com Source link