ಅರ್ಧ ವರ್ಷ ಆಯ್ತು ನಾನು ನಿಮಗೆ ಸಿಕ್ಕು

ಬಿಗ್ ಬಾಸ್ ಮನೆಯ ಪ್ರಣಯ ಪಕ್ಷಿಗಳು ತಮ್ಮ ಮೊದಲ ಭೇಟಿಯನ್ನು ನೆನೆದಿದ್ದು, ಇಬ್ಬರೂ ಒಬ್ಬರಿಗೊಬ್ಬರು ಮಾತನಾಡಿಕೊಂಡಿದ್ದಾರೆ. ದೊಡ್ಮನೆಯಲ್ಲಿಯೇ ಈ ಜೋಡಿ ಮೊದಲ ಬಾರಿಗೆ ಭೇಟಿಯಾಗಿದ್ದು, ಇದೀಗ ಒಬ್ಬರಿಗೊಬ್ಬರು ಬಿಟ್ಟಿರದಷ್ಟು ಸ್ನೇಹ ಬೆಳೆದಿದೆ.

ಗಾರ್ಡನ್ ಏರಿಯಾದಲ್ಲಿ ಕೂತಾಗ ಇಬ್ಬರೂ ಇದೇ ವಿಚಾರವಾಗಿ ಮಾತನಾಡಿಕೊಂಡಿದ್ದು, ದಿವ್ಯಾ ಉರುಡುಗ ಮಾತು ಆರಂಭಿಸಿ, ನಾವು ಸೇರಿ 6 ತಿಂಗಳಾಯಿತು. ಅಂದರೆ ನೀವು ನನಗೆ ಸಿಕ್ಕು ಅರ್ಧ ವರ್ಷ ಆಯಿತು ಎಂದು ಹೇಳಿದ್ದಾರೆ. ಬಳಿಕ ಅರವಿಂದ್ ತಿಂಗಳುಗಳನ್ನು ಲೆಕ್ಕ ಹಾಕಿದ್ದಾರೆ. ಇದು ಜುಲೈ ಅಲ್ವಾ, ನಾನಿನ್ನು ಜುಲೈನಲ್ಲೇ ಇದ್ದೇನೆ ಎಂದು ಅರವಿಂದ್ ಹೇಳಿದ್ದಾರೆ. ಆಗ ದಿವ್ಯಾ ಉರುಡುಗ ನಕ್ಕಿದ್ದಾರೆ.

ಆಗಸ್ಟ್ ನಲ್ಲಿದ್ದೇವೆ ಆಯ್ತಾ, ಆದರೆ ನಾವು ಸಿಕ್ಕು 6 ತಿಂಗಳಾಯಿತು ಎಂದು ಅನ್ನಿಸುವುದೇ ಇಲ್ಲ ಅಲ್ವಾ? ಮೊನ್ನೆ ಸಿಕ್ಕಂಗಿದೆ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಬಳಿಕ ತುಂಬಾ ಯೋಚನೆನಾ ಎಂದು ಅರವಿಂದ್ ಪ್ರಶ್ನಿಸಿದ್ದು, ದಿವ್ಯಾ ಭಾವುಕರಾಗಿದ್ದಾರೆ. ಆಗ ಅರವಿಂದ್ ಯಾಕೆ ದುಃಖ ಬರ್ತಿದೆ ಎಂದು ಕೇಳಿದ್ದಾರೆ, ಆಗ ಒಂದು ನಿಮಿಷ ಎಂದು, ಬಳಿಕ ದಿವ್ಯಾ ಉರುಡುಗ ಹೇಳಿದ್ದಾರೆ. ಬಳಿಕ ಅರವಿಂದ್ ದಿವ್ಯಾರ ಮಂಡಿ ಸವರಿದ್ದಾರೆ.

ನಂತರ ಅರವಿಂದ್‍ಗೆ ದಿವ್ಯಾ ಉರುಡುಗ ಪ್ರಶ್ನೆಗಳನ್ನು ಕೇಳಿದ್ದು, ಈ ಮನೆಯಲ್ಲಿ ಆಲ್‍ಔಟ್ ಯಾರು ಎಂದಿದ್ದಾರೆ, ಸನ್ನೆ ಮೂಲಕ ಅರವಿಂದ್ ನೀನು ಎಂದಿದ್ದಾರೆ, ಸ್ಮಾರ್ಟ್ ಯಾರು ಎಂದು ಕೇಳಿದ್ದಾರೆ. ಅದಕ್ಕೂ ನೀನೇ ಎಂದು ಸನ್ನೆ ಮಾಡಿದ್ದಾರೆ. ಇಂಟಲಿಜೆಂಟ್, ಬ್ಯೂಟಿಫುಲ್, ಕ್ಯೂಟೆಸ್ಟ್ ಯಾರು ಎಂದು ಕೇಳಿದ್ದಾರೆ. ಇದಕ್ಕೂ ದಿವ್ಯಾ ಉರುಡುಗ ಅವರನ್ನು ತೋರಿಸಿದ್ದಾರೆ. ಬಳಿಕ ಈ ಮನೆಯಲ್ಲಿ ಬೈಕ್ ಓಡಿಸುವವರು ಯಾರೆಂದು ಕೇಳಿದಾಗ ನಾನೇ ಎಂದು ಅರವಿಂದ್ ಸನ್ನೆ ಮಾಡಿದ್ದಾರೆ. ಹೀಗೆ ಇಬ್ಬರ ನಡುವೆ ಪ್ರಶ್ನೋತ್ತರಗಳು ನಡೆದಿವೆ. ಫಿನಾಲೆಗೆ ದಿನಗಣನೆ ಆರಂಭವಾಗಿರುವಾಗಲೇ ಜೋಡಿ ಫುಲ್ ಮಾತುಕತೆಯಲ್ಲಿ ತೊಡಗಿದೆ.

Source: publictv.in Source link