ತಿರುಪತಿಯಲ್ಲಿ ಮದುವೆ ಆಗಲಿದ್ದಾರೆ ಶ್ರೀದೇವಿ ಪುತ್ರಿ ಜಾನ್ವಿ

ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ತಿರುಪತಿಯಲ್ಲಿ ಮದುವೆ ಆಗಲಿದ್ದೇನೆ ಎನ್ನುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಮದುವೆಗೂ ಮೊದಲು ಎಲ್ಲರೂ ಬ್ಯಾಚುಲರ್ ಪಾರ್ಟಿ ಮಾಡೋದು ಸಾಮಾನ್ಯ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಇಟಲಿಯ ಐಸ್‍ಲ್ಯಾಂಡ್‍ನಲ್ಲಿ ನಾನು ಬ್ಯಾಚುಲರ್ ಪಾರ್ಟಿ ಮಾಡುವ ಆಸೆ ಇದೆ. ನನಗೆ ತಿರುಪತಿಯಲ್ಲಿ ಮದುವೆ ಆಗುವ ಆಸೆ ಇದೆ ಎಂದಿದ್ದಾರೆ.

 

View this post on Instagram

 

A post shared by Janhvi Kapoor (@janhvikapoor)

2-3 ದಿನಗಳ ಕಾಲ ಮದುವೆ ಆಗುವ ಆಸೆ ಇದೆ. ಚೆನ್ನೈನಲ್ಲಿರುವ ಮೈಲಾಪುರದಲ್ಲಿ ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಬೇಕು. ಇದು ನನ್ನ ಕನಸು ಎಂದು ಜಾನ್ವಿ ಹೇಳಿದ್ದಾರೆ. ಮದುವೆ ವಿಚಠಾರವಾಗಿ ಸಾಕಷ್ಟ ಕನಸುಕಂಡಿರುವ ಜಾನ್ವಿ ಮೊದಲ ಬಾರಿ ಮದುವೆ ಕುರಿತಾದ ಕನಸನ್ನು ಹೇಳಿಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾನ್ವಿ ಕಪೂರ್‍ಗೆ ಯಾಕೋ ಪದೇಪದೇ ಅದೃಷ್ಟ ಕೈ ಕೊಡುತ್ತಿದೆ. ನಟಿಸಿದ ಯಾವ ಸಿನಿಮಾಗಳೂ ಕೈ ಹಿಡಿಯುತ್ತಿಲ್ಲ. ಮೊದಲ ಸಿನಿಮಾ ಧಡಕ್ ಬಳಿಕ ಅವರಿಗೆ ಮತ್ತೆ ದೊಡ್ಡ ಗೆಲುವು ಸಿಗಲೇ ಇಲ್ಲ. ಯಾವ ಸೋಲುಗಳನ್ನೂ ಮನಸ್ಸಿಗೆ ಹಚ್ಚಿಕೊಳ್ಳದ ಜಾನ್ವಿ, ಸದ್ಯಕ್ಕೆ ವಿದೇಶದಲ್ಲಿ ಮೋಜು ಮಾಡುತ್ತಿದ್ದಾರೆ.

Source: publictv.in Source link