ಮೈಸೂರು ಮಸಾಲೆ ದೋಸೆಗೆ ಬ್ರಿಟಿಷ್​ ರಾಯಭಾರಿ ಫಿದಾ -‘ಸಖತ್​ ಆಗಿದೆ’ ಅಂತ ಕನ್ನಡದಲ್ಲೇ ಟ್ವೀಟ್​​

ಮೈಸೂರು ಮಸಾಲೆ ದೋಸೆಗೆ ಬ್ರಿಟಿಷ್​ ರಾಯಭಾರಿ ಫಿದಾ -‘ಸಖತ್​ ಆಗಿದೆ’ ಅಂತ ಕನ್ನಡದಲ್ಲೇ ಟ್ವೀಟ್​​

ದೋಸೆ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ..? ಅದ್ರಲ್ಲೂ ದಕ್ಷಿಣ ಭಾರತೀಯರು ದೋಸೆ ಪ್ರಿಯರು. ಅದ್ರಲ್ಲೂ ಈಗ 99 ವೆರೈಟಿ ದೋಸೆಗಳು ಬೇರೆ ಬಂದ್​ಬಿಟ್ಟಿದೆ. ಎಷ್ಟ್​ ದೋಸೆಗಳು ಬಂದ್ರೆ ಏನ್​ ಹೇಳಿ? ಮೈಸೂರ್​ ಮಸಾಲೆ ದೋಸೆ ಮುಂದೆ ಏನೂ ಇಲ್ಲ. ಅಷ್ಟು ಸಖತ್ತಾಗಿರುತ್ತೆ. ಇದನ್ನ, ಬರೀ ಭಾರತೀಯರಷ್ಟೇ ಅಲ್ಲ, ಬೇರೆ ಬೇರೆ ದೇಶದಿಂದ ಬಂದವ್ರು ಹೇಳ್ತಿದ್ದಾರೆ. ಸದ್ಯ ಮೈಸೂರು ಮಸಾಲೆ ದೋಸೆಯನ್ನ ಭಾರತದ ಬ್ರಿಟಿಷ್ ರಾಯಭಾರಿ ತುಂಬಾ ಇಷ್ಟ ಪಟ್ಟು ತಿಂದಿದ್ದಾರೆ.

ಹೌದೂ, ಭಾರತದ ಬ್ರಿಟಿಷ್​ ರಾಯಭಾರಿ ಅಲೆಕ್ಸ್​​ ಎಲ್ಲಿಸ್​ ಮೈಸೂರಿಗೆ ಬಂದಿದ್ದರು. ಈ ವೇಳೆ, ಅಲ್ಲಿ ಮೈಸೂರು ಮಸಾಲೆ ದೋಸೆಯನ್ನ, ಫೋರ್ಕ್​ನಿಂದ ತಿಂದು ಎಷ್ಟ್​ ರುಚಿಕರವಾಗಿದೆ, ಸಖತ್ತಾಗಿದೆ ಅಂತ ಕನ್ನಡದಲ್ಲಿ ಬರೆದುಕೊಂಡಿದ್ದಾರೆ. ಇದನ್ನ ನೋಡಿದ ಕನ್ನಡಿಗರು ದಿಲ್​ ಖುಷ್​ ಆಗಿದ್ದಾರೆ. ಅಲ್ಲದೇ ಕೆಲವರು ಈ ಬಾರಿ ಮಸಾಲೆ ದೋಸೆ ತಿನ್ನೋದಾದರೇ ಫೋರ್ಕ್​​ ಬಳಸಬೇಡಿ.. ಕೈಯಲ್ಲಿ ತಿಂದು ದೋಸೆಯ ರುಚಿ ನೋಡಿ ಎಂದು ಸಲಹೆಯನ್ನು ನೀಡಿದ್ದಾರೆ.

 

 

Source: newsfirstlive.com Source link