ಲಡಾಖ್​​ನಲ್ಲಿ ‘ವಿಶ್ವದ ಅತೀ ಎತ್ತರದ ರಸ್ತೆ’ ನಿರ್ಮಾಣ; ಹೊಸ ದಾಖಲೆ ಬರೆದ ಭಾರತ

ಲಡಾಖ್​​ನಲ್ಲಿ ‘ವಿಶ್ವದ ಅತೀ ಎತ್ತರದ ರಸ್ತೆ’ ನಿರ್ಮಾಣ; ಹೊಸ ದಾಖಲೆ ಬರೆದ ಭಾರತ

ನವದೆಹಲಿ: ಹೆಮ್ಮೆಯ ಬಾರ್ಡರ್ ರೋಡ್​ ಆರ್ಗನೈಜೇಷನ್ ಹೊಸ ದಾಖಲೆಯನ್ನ ನಿರ್ಮಾಣ ಮಾಡಿದ್ದು, ಪಶ್ಚಿಮ ಲಡಾಖ್​​ನಲ್ಲಿ 19,300 ಫೀಟ್​ ಎತ್ತರದ ಉಮ್ಲಿಂಗ್ಲ ಟಾಪ್ ರಸ್ತೆಯನ್ನ ನಿರ್ಮಾಣ ಮಾಡಲಾಗಿದೆ ಅಂತಾ ಕೇಂದ್ರ ಸರ್ಕಾರ ಇಂದು ತಿಳಿಸಿದೆ.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್​: ಫೈನಲ್​​​ಗೆ ಲಗ್ಗೆ ಇಟ್ಟ ಕುಸ್ತಿ ಪಟು ರವಿ ದಹಿಯಾ.. ಚಿನ್ನಕ್ಕಾಗಿ ಹೋರಾಟ

blank

ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗಳಿಗಿಂತ ಎತ್ತರದಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗಿದೆ. ನೇಪಾಳದ ದಕ್ಷಿಣ ಬೇಸ್ ಕ್ಯಾಂಪ್ 17,598 ಅಡಿ ಎತ್ತರದಲ್ಲಿದೆ, ಟಿಬೆಟ್‌ನ ಉತ್ತರ ಬೇಸ್ ಕ್ಯಾಂಪ್ 16,900 ಫೀಟ್ ಎತ್ತರದಲ್ಲಿ ಈ ರಸ್ತೆ ಇದೆ. ಇನ್ನೊಂದು ರೀತಿಯಲ್ಲಿ ಅದನ್ನ ಹೇಳೋದಾದ್ರೆ, ದೊಡ್ಡ ದೊಡ್ಡ ಕಮರ್ಷಿಯಲ್ ವಿಮಾನಗಳು 30 ಸಾವಿರ ಫೀಟ್ ಎತ್ತರದಲ್ಲಿ ಹಾರಾಟ ನಡೆಸುತ್ತವೆ. ಈ ರಸ್ತೆ ಅದರ ಅರ್ಧಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಎತ್ತರದಲ್ಲಿದೆ.

‘ಉಮ್ಲಿಂಗ್ಲ ಟಾಪ್ ಮೇಲೆ ಹಾದುಹೋಗುವ ಈ ರಸ್ತೆ 19,300 ಅಡಿ ಎತ್ತರವನ್ನು ಹೊಂದಿದೆ. ದಕ್ಷಿಣ ಅಮೆರಿಕದ ಬೊಲಿವಿಯಾದಲ್ಲಿ 18953 ಫೀಟ್​ ಎತ್ತರದಲ್ಲಿ ನಿರ್ಮಿಸಿ ದಾಖಲೆ ನಿರ್ಮಾಣ ಮಾಡಲಾಗಿತ್ತು. ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಮತ್ತು ಲಡಾಖ್‌ನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ರಸ್ತೆ ನಿರ್ಮಾಣ ಮಾಡಲಾಗಿದೆ ಅಂತಾ ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ: ಪಾಕಿಸ್ತಾನದಿಂದ ಭಾರತಕ್ಕೆ ಚೀಟಿ​​​ ತಂದ ಪಾರಿವಾಳ; ಏನಿದರ ‘ನಂಬರ್’ ರಹಸ್ಯ?

blank

ಹನ್ಲೆಗೆ ಸಮೀಪವಿರುವ 86 ಕಿಲೋ ಮೀಟರ್ ಉದ್ದದ ರಸ್ತೆ ಚಿಸುಮ್ಲೆ ಮತ್ತು ಡೆಮ್ಚೊಕ್ ಗ್ರಾಮಕ್ಕೆ ಸಂಪರ್ಕಿಸುತ್ತಿದ್ದು ಲೇಹ್ ನಿಂದ 230 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ರಸ್ತೆ ನಿರ್ಮಾಣದ ಗುರಿ ನಿಜಕ್ಕೂ ದೊಡ್ಡ ಚಾಲೆಂಜ್ ಆಗಿತ್ತು. ಯಾಕಂದ್ರೆ ಚಳಿಗಾಲದ ಸಂದರ್ಭದಲ್ಲಿ ಇಲ್ಲಿ -40 ಡಿಗ್ರಿ ಸೆಲ್ಸಿಯಸ್​​ಗಿಂತಲೂ ಕಡಿಮೆ ಟೆಂಪ್ರೆಚರ್ ಇರುತ್ತದೆ. ಜೊತೆಗೆ ಆಕ್ಸಿಜನ್ ಲೇವಲ್ ಶೇಕಡಾ 50 ಕ್ಕಿಂತ ಕಡಿಮೆ ಇರುತ್ತದೆ. ಹೀಗಾಗಿ ರಸ್ತೆ ನಿರ್ಮಾಣದ ಕಾಮಗಾರಿ ವೇಳೆ 10 ನಿಮಿಷಗಳಿಗೊಮ್ಮೆ ಆಮ್ಲಜನಕಕ್ಕಾಗಿ ಯಂತ್ರ ನಿರ್ವಾಹಕರು ಕೆಳಗಿಳಿದು ಬರಬೇಕಾಗುತ್ತಿತ್ತು.

Source: newsfirstlive.com Source link