ಶಿವರಾಜ್​​​ಕುಮಾರ್ ಅಭಿಮಾನಿಗಳಿಗೆ ‘ಬೈರಾಗಿ’ ಬಳಗದಿಂದ ಗುಡ್ ​ನ್ಯೂಸ್​​

ಶಿವರಾಜ್​​​ಕುಮಾರ್ ಅಭಿಮಾನಿಗಳಿಗೆ ‘ಬೈರಾಗಿ’ ಬಳಗದಿಂದ ಗುಡ್ ​ನ್ಯೂಸ್​​

ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್ ಅವರನ್ನ ಹುಲಿ ವೇಷದ ಲುಕ್​​​ನಲ್ಲಿ ತೋರಿಸಿ ‘ಬೈರಾಗಿ’ ಫಿಲ್ಮ್ ಟೀಮ್ ಶಿವ ಸೈನ್ಯವನ್ನ ಇಂಪ್ರೆಸ್ ಮಾಡಿತ್ತು. ಈಗ ‘ಬೈರಾಗಿ’ ಬಳಗದಿಂದ ಮತ್ತೊಂದು ಸ್ವೀಟ್ ನ್ಯೂಸ್ ಸಿಕ್ಕಿದೆ.

ಸೆಂಚುರಿ ಸಿನಿಮಾಗಳ ಸರದಾರ, ನಿರ್ದೇಶಕರ ನೆಚ್ಚಿನ ಡಾರ್ಲಿಂಗ್ ಶಿವಣ್ಣ ಕಡೆಯಿಂದ ಕಳೆದ 35 ವರ್ಷದಿಂದ ಸೂಪರ್ ಸಿನಿಮಾ ಸಮಾಚಾರ್ ಸಿಕ್ತಾನೇ ಬಂದಿದೆ. ಈ ಕೊರೊನಾ ಕಾಲ್​ದಲ್ಲಿ ಕೊಂಚ ಶಿವಣ್ಣನ ಸಿನಿ ವೇಗಕ್ಕೆ ಕಡಿವಾಣ ಬಿದ್ದಿರ ಬಹುದು. ಆದ್ರೆ ಶಿವಣ್ಣ ಸಿನಿ ಕೆಲಸದ ವೇಗಕ್ಕೆ ಸ್ಪೀಡ್ ಬ್ರೇಕ್ ಬಿದ್ದಿಲ್ಲ. ಸಾಲು ಸಾಲುಗಳಲ್ಲಿ ಕರುನಾಡ ಚಕ್ರವರ್ತಿ ಬ್ಯೂಸಿಯಾಗಿದ್ದಾರೆ.

blank

ಭಜರಂಗಿ-2 ಸಿನಿಮಾದ ಮೂಲಕ ಈಗಾಗಲೇ ಪ್ರೇಕ್ಷಕರನ್ನ ರಂಜಿಸಲು ಸಜ್ಜಾಗಿದ್ದಾರೆ. ಸಿನಿಮಾಗಳನ್ನ ಥಿಯೇಟರ್​ಗಳಲ್ಲಿ ಜನ ನೋಡೋ ವಾತವಾರಣ ಸೃಷ್ಟಿಯಾಗಿತ್ತಿಂಗೆ ಭಜರಂಗಿ -2 ಬಂದೆ ಬರುತ್ತೆ. ಚಿತ್ರತಂಡ ಸೆಪ್ಟೆಂಬರ್ 10ನೇ ತಾರೀಖ್ ಭಜರಂಗಿ-2 ಸಿನಿಮಾವನ್ನ ತೋರಿಸ್ತಿವಿ ಅನ್ನೋ ಮಾತುಕೊಟ್ಟಿದ್ದಾರೆ. ಎರಡನೇ ಭಜರಂಗಿ ಸಿನಿಮಾದ ನಂತರ ಶಿವಸೈನ್ಯಯನ್ನ ಹೆಚ್ಚು ಆಕರ್ಷಿಸುತ್ತಿರೋ ಸಿನಿಮಾ ಬೈರಾಗಿ. ಕ್ಯಾಮೆರಾ ಮ್ಯಾನ್ ವಿಜಯ್ ಮಿಲ್ಟನ್ ಸೃಷ್ಟಿಸಿರೋ ಬೈರಾಗಿಯಲ್ಲಿ ಶಿವಣ್ಣನ ಹುಲಿವೇಷದ ಲುಕ್ಕು ಈಗಾಗಲೇ ಶಿವ ಸೈನ್ಯಕ್ಕೆ ಕಿಕ್ಕು ಕೊಡ್ತಿದೆ.

blank

ಶಿವಣ್ಣನ ಬರ್ತ್​ಡೇಗೆ ಟೀಸರ್ ಬಿಟ್ಟು ಇಂಪ್ರೆಸ್​ ಮಾಡಿದ್ದ ಬೈರಾಗಿ ಫಿಲ್ಮ್ ಟೀಮ್ ಈಗ ಮೊತ್ತೊಂದು ಶುಭ ಸುದ್ದಿ ಕೊಟ್ಟಿದೆ. 60ಕ್ಕೂ ಹೆಚ್ಚು ದಿನಗಳ ಕಾಲ ಶೂಟ್ ಮಾಡಿದ್ದ ಬೈರಾಗಿ ಚಿತ್ರದ ಮಾತಿನ ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದೆ. ಇನ್ನೇನಿದ್ದರೂ ಹಾಡುಗಳ ಚಿತ್ರೀಕರಣವಷ್ಟೆ ಬಾಕಿ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಸಾಕಷ್ಟು ನುರಿತ ಕಲಾವಿದರಿದ್ದಾರೆ. ಅಂಜಲಿ ಈ ಚಿತ್ರದ ನಾಯಕಿ. ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರೋದು ವಿಶೇಷ.

Source: newsfirstlive.com Source link