ಶಕ್ತಿ & ಮುಕ್ತಿ ಕಮಾಲ್; ಮಾಲ್ಡೀವ್ಸ್​ನಲ್ಲಿ ಚಿಂದಿ ಉಡಾಯಿಸಿದ ಸಹೋದರಿಯರು!

ಶಕ್ತಿ & ಮುಕ್ತಿ ಕಮಾಲ್; ಮಾಲ್ಡೀವ್ಸ್​ನಲ್ಲಿ ಚಿಂದಿ ಉಡಾಯಿಸಿದ ಸಹೋದರಿಯರು!

ಮೋಹನ್​ ಸಿಸ್ಟರ್ಸ್​ ಅಂತಲೇ ಫೇಮಸ್ ಆಗಿರೋ ಶಕ್ತಿ ಮೋಹನ್​ ಹಾಗೂ ಮುಕ್ತಿ ಮೋಹನ್​ ಇದೀಗ ಮಾಲ್ಡೀವ್ಸ್​ನಲ್ಲಿ ಇದ್ದು, ಅಲ್ಲಿನ ಬೀಚ್​​​ವೊಂದರಲ್ಲಿ ಡ್ಯಾನ್ಸ್​ ಮಾಡಿರುವ ಸಹೋದರಿಯರು ಸಿಕ್ಕಾಪಟ್ಟೆ ವೈರಲ್​ ಆಗ್ತಾಯಿದ್ದಾರೆ.

ಯಾವಾಗ್ಲೂ, ಡ್ಯಾನ್ಸ್​ ಮಾಡ್ತಾ ತಮ್ಮ ಅಭಿಮಾನಿಗಳನ್ನ ರಂಜಿಸ್ತಾಯಿರೋ ಮೋಹನ್​ ಸಿಸ್ಟರ್ಸ್​.. ಹಾಲಿಡೇ ಅಂತ ಮಾಲ್ಡೀವ್ಸ್​ಗೆ ಹೋಗಿದ್ದಾರೆ. ಅಲ್ಲಿ, ಇಬ್ಬರೂ ಪಿಂಕ್​ ಕಲರ್ ಮ್ಯಾಕ್ಸಿ ಡ್ರೆಸ್​ ಹಾಕಿಕೊಂಡು ‘ಹೈಲಾ ಹೈಲಾ’ ಅನ್ನೋ ಹಾಡಿಗೆ ಸಖತ್​ ಸ್ಟೆಪ್ ಹಾಕ್ಕಿದ್ದಾರೆ.

ಲಾಕ್​ಡೌನ್ ನಂತರದ ನಮ್ಮ ಮೊದಲ ಅಂತಾರಾಷ್ಟ್ರೀಯ ಪ್ರವಾಸ ಇದಾಗಿದೆ. ಉತ್ಸಾಹದಿಂದ ಹೊರಗಿದ್ದೇವೆ ಎಂದು ವಿಡಿಯೋವನ್ನು ಶಕ್ತಿ ಮೋಹನ್ ತಮ್ಮ ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಾಡಿಗೆ ಇಬ್ಬರೂ ಸಿಸ್ಟರ್ಸ್​ ಡ್ಯಾನ್ಸ್​ ಮಾಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಬೀಚ್​ ಸೈಡ್​ನಲ್ಲಿ ಡ್ಯಾನ್ಸ್ ಮಾಡಿರೋ ವಿಡಿಯೋಗೆ ಸಿಕ್ಕಾಪಟ್ಟೆ ಲೈಕ್ಸ್​, ಅಷ್ಟೇ ಕಮೆಂಟ್ಸ್​ ಬಂದಿದೆ.

ಅಂದಹಾಗೇ, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ 2ನೇ ಸೀಸನ್ ಗೆಲ್ಲುವ ಮೂಲಕ ಶಕ್ತಿ ಮೋಹನ್ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದರು. ಅಲ್ಲದೇ ರೆಮೋ ಡಿಸೋಜಾ ಹಾಗೂ ಪ್ರಭುದೇವ ಜೊತೆ  ‘ತೀಸ್ ಮಾರ್ ಖಾನ್’, ‘ಆ ರೆ ಪ್ರೀತಮ್ ಪ್ಯಾರೆ’ ಮತ್ತು ಅಮ್ಮ ದೇಖ್ ಮುಂತಾದ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ.

 

View this post on Instagram

 

A post shared by Shakti Mohan (@mohanshakti)

 

View this post on Instagram

 

A post shared by Mukti Mohan (@muktimohan)

Source: newsfirstlive.com Source link