ಹುತಾತ್ಮ ಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ -ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ

ಹುತಾತ್ಮ ಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ -ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ

ಕಲಬುರಗಿ: ಗಡಿಯಲ್ಲಿ ಉಗ್ರರ ವಿರುದ್ಧ ಹೋರಾಡುತ್ತ ಹುತಾತ್ಮರಾಗಿದ್ದ ಜಿಲ್ಲೆಯ ಆಳಂದ ತಾಲ್ಲೂಕಿನ ಚಿಂಚನಸೂರಿ ಗ್ರಾಮದ ಯೋಧ ರಾಜಕುಮಾರ್ ಮಾವೀನಕರ್ ಅವರ ಪಾರ್ಥಿವ ಶರೀರ ಯೋಧನ ಹುಟ್ಟೂರು ಚಿಂಚನಸೂರಿಗೆ ತಲುಪಿದೆ. ಗ್ರಾಮದ ಅಂಬೇಡ್ಕರ್ ಪುತ್ತಳಿ ಆವರಣದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇಂದು ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ಹೈದ್ರಾಬಾದ್ ಮೂಲಕ ಚಿಂಚನಸೂರಕ್ಕೆ ಯೋಧನ ಪಾರ್ಥಿವ ಶರೀರ ತರಲಾಗಿದೆ. ಸಾರ್ವಜನಿಕ ದರ್ಶನದ ಬಳಿಕ ಮಧ್ಯಾಹ್ನ 12:30ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ. ಬೌಧ ಧರ್ಮದ ಪ್ರಕಾರ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ನಡೆಸಲಾಗಿದೆ.

blank

ಡಿಗ್ರಿ ಓದುವಾಗ್ಲೇ ಅವರು ದೇಶಸೇವೆ ಮಾಡಲು ಯೋಧ ರಾಜಕುಮಾರ್ ಮಾವೀನಕರ್ ಸೇನೆ ಸೇರಿದ್ದರು. ಗಡಿಯಲ್ಲಿ ಶತ್ರುಗಳನ್ನ ಹೊಡೆದುರುಳಿಸುತ್ತಾ ದೇಶಕ್ಕಾಗಿ ಹೋರಾಡುತ್ತಿದ್ದರು. ಇನ್ನೇನು ಮೂರು ತಿಂಗಳಲ್ಲಿ ನಿವೃತ್ತಿ ಆಗಬೇಕಿತ್ತು. ಆದರೆ ವಿಧಿಯಾಟವೇ ಬೇರೆ ಇತ್ತು ಅನ್ಸುತ್ತೆ. ತ್ರಿಪುರ ರಾಜ್ಯದ ಭಾರತ-ಬಾಂಗ್ಲಾ ಗಡಿ ಧಲಾಯಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜ್​​ಕುಮಾರ್ ಅವರು, ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಏಕಾಏಕಿ ಉಗ್ರರು ನಡೆಸಿರುವ ಗುಂಡಿನ ದಾಳಿಯಲ್ಲಿ ಯೋಧ ಹುತಾತ್ಮರಾಗಿದ್ದರು.

blank

ಅದೆಷ್ಟೋ ಜನರು ದೇಶಸೇವೆ ಮಾಡಬೇಕು. ದೇಶಕ್ಕಾಗಿ ದುಡಿಯಬೇಕು ಎಂದು ಸೇನೆಗೆ ಸೇರುತ್ತಾರೆ. ತಾವು ಸಾವಿನ ಎದುರೇ ಕೆಲಸ ಮಾಡುತ್ತಿದ್ದೇವೆ ಅಂತಾ ಗೊತ್ತಿದ್ದರೂ ಎದಗುಂದದೆ ದೇಶಕ್ಕಾಗಿ ಹೋರಾಡಿ ಪ್ರಾಣತೆತ್ತುತ್ತಾರೆ. ಹಾಗೆ ಆಗಿದೆ ಕಲಬುರಗಿಯ ಆಳಂದ ತಾಲ್ಲೂಕಿನ ಚಿಂಚನಸೂರ ಗ್ರಾಮದ ಬಿಎಸ್​ಎಫ್ ಯೋಧನ ಕಥೆ. ಪದವಿ ಮಾಡುವಾಗಲೇ ರಾಜಕುಮಾರ ಮಾಪಣ್ಣಾ ಮಾವೀನಕರ್​ಗೆ ಸೇನೆಯಲ್ಲಿ ಕೆಲಸ ಮಾಡುವ ಭಾಗ್ಯ ದೊರೆಯುತ್ತದೆ. ಅದರಂತೆ ಅವರು ಸೇನೆಗೆ ಸೇರಿ ದೇಶಸೇವೆ ಮಾಡುತ್ತಾರೆ. ಆದರೆ ಭಾರತ-ಬಾಂಗ್ಲಾ ಗಡಿಯಲ್ಲಿರುವ ಧಲಾಯಿ ಪ್ರದೇಶದಲ್ಲಿ ದೇಶದ ಗಡಿ ಕಾಯುತ್ತ ಗಸ್ತು ತೀರುಗುತ್ತಿದ್ದ ಯೋಧ ಉಗ್ರರ ದಾಳಿಗೆ ತುತ್ತಾಗಿ ಹುತಾತ್ಮರಾಗಿದ್ದಾರೆ.

2002 ರಲ್ಲಿ ಬಿಎಸ್​ಏಫ್ ಸೇನೆ ಸೇರಿದ್ದ ರಾಜಕುಮಾರ ಕೋಲ್ಕತ್ತಾ, ಜಮ್ಮು & ಕಾಶ್ಮೀರ, ಅಸ್ಸಾಂ ನಲ್ಲಿ ಗಡಿಯಲ್ಲಿ ದೇಶ ರಕ್ಷಣೆ ಮಾಡುತ್ತ, ಕಳೆದ ಒಂದು ವರ್ಷದಿಂದ ತ್ರೀಪುರಾ ರಾಜ್ಯದ ಭಾರತ-ಬಾಂಗ್ಲಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಇದೀಗ ಗಡಿಯಲ್ಲಿ ಉಗ್ರರ ದಾಳಿಗೆ ತುತ್ತಾಗಿ ಹುತಾತ್ಮರಾಗಿದ್ದರು. ಇನ್ನು ಹುತಾತ್ಮ ಯೋಧನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ನಾಲ್ಕು ವರ್ಷದ ಗಂಡು ಮಗುವಿದೆ. ಹೀಗಾಗಿ ಯೋಧನ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಅಲ್ಲದೆ ಚಿಂಚನಸೂರ ಗ್ರಾಮದಲ್ಲೂ ನೀರವ ಮೌನ ಮನೆಮಾಡಿದೆ.

Source: newsfirstlive.com Source link