ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು

ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಮನೆಯಲ್ಲಿ ಈಡೇರದ ಒಂದೊಂದು ಕೋರಿಕೆಯನ್ನು ತಿಳಿಸುವಂತೆ ಬಿಗ್‍ಬಾಸ್ ಸೂಚಿಸಿದ್ದರು. ಹಾಗಾಗಿ ಮನೆಯ ಸ್ಪರ್ಧಿಗಳು ತಮ್ಮ ಚಿಕ್ಕ ಚಿಕ್ಕ ಬಯಕೆಗಳನ್ನು ಬಿಗ್‍ಬಾಸ್ ಬಳಿ ತೊಡಿಕೊಂಡಿದ್ದರು. ಸದ್ಯ ಮಂಜು ಪಾವಗಡಗೆ ಸ್ಪೆಷಲ್ ಆಗಿ ಫ್ರೆಂಡ್ ಶಿಪ್ ಡೇಗೆ ವಿಶ್ ಮಾಡಬೇಕೆಂದು ಕೇಳಿಕೊಂಡಿದ್ದ ದಿವ್ಯಾ ಸುರೇಶ್ ಆಸೆಯನ್ನು ಬಿಗ್‍ಬಾಸ್ ಈಡೇರಿಸಿದ್ದಾರೆ.

ಅದರಂತೆ ಗಾರ್ಡನ್ ಏರಿಯಾದಲ್ಲಿ ಒಂದು ಟೇಬಲ್ ಮೇಲೆ ಕೇಕ್, ಬಲೂನ್‍ಗಳ ರಾಶಿ, ಮಂಜು ಹಾಗೂ ದಿವ್ಯಾ ಸುರೇಶ್ ಫೋಟೋವೊಂದನ್ನು ಇರಿಸಿ ಸಿಂಗಾರಿಸಲಾಗಿತ್ತು. ಈ ಅರೆಂಜ್ ಮೆಂಟ್ಸ್ ನೋಡಿ ಮಂಜು ಶಾಕ್ ಆದರೆ, ಮನೆಮಂದಿಯೆಲ್ಲಾ ಫುಲ್ ಖುಷ್ ಆಗಿದ್ದಾರೆ.

ನಂತರ ದಿವ್ಯಾ ಸುರೇಶ್ ಹಾಗೂ ಮಂಜು ಏಕಾಂತದಲ್ಲಿ ಕುಳಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನಿನ್ನನ್ನು ನೋಡಿದಾಗ ನನಗೆ ಗೌರವ ನೀಡಬೇಕು ಅನಿಸುತ್ತದೆ. ನೀವು ಹೋಗಿ ಬನ್ನಿ ಎಂದು ಕರೆಯಬೇಕು ಎನಿಸುತ್ತದೆ. ಫಸ್ಟ್ ಇನ್ನಿಂಗ್ಸ್‌ನಲ್ಲಿ ನಾನು ನಿನಗೆ ಬಹಳ ಹರ್ಟ್ ಮಾಡಿದ್ದೇನೆ. ಬಹಳ ಡೊಮಿನೇಟ್ ಆಗಿಬಿಟ್ಟೆ, ಕೊನೆ ಕೊನೆಯಲ್ಲಿ ನನ್ನಿಂದ ನಿನ್ನ ಆಟಕ್ಕೆ ತೊಂದರೆ ಆಯ್ತು ಎಂಬುವುದು ಅರ್ಥವಾಯಿತು. ನಾನು ನಿನ್ನ ಬಗ್ಗೆ ಬಹಳ ಪೊಸೆಸಿವ್ ಆಗಿಬಿಟ್ಟೆ ಜೊತೆಗೆ ನಿನ್ನ ಫ್ರೀಡಂನ ಕಂಟ್ರೋಲ್ ಕೂಡ ಮಾಡಾತ್ತಿದೆ. ಮನೆಯಿಂದ ಹೊರಗೆ ಹೋದ ನಂತರ ನಾನು ನಿನಗೆ ಕ್ಷಮೆ ಕೇಳಲು ಆಗಲಿಲ್ಲ. ನನಗೆ ನೀನು ಅಂದರೆ ತುಂಬಾ ಇಷ್ಟ. ಥ್ಯಾಂಕ್ಯು ನೀನು ನನಗೆ ಫ್ರೆಂಡ್ ಆಗಿದ್ದಕ್ಕೆ. ಹೀಗೆ ನನ್ನ ಜೊತೆ ಯಾವಾಗಲೂ ಇರು, ನೀನು ನನ್ನ ಬೆಸ್ಟ್ ಫ್ರೆಂಡ್ ಎನ್ನುತ್ತಾರೆ.

blank

ಇದಕ್ಕೆ ಮಂಜು, ಗೊತ್ತೊ, ಗೊತ್ತಿಲ್ಲದೇ ಮಾಡುವ ತಪ್ಪನ್ನು ತಿದ್ದುಕೊಳ್ಳಬೇಕು ಎಂಬುವುದು ನಿನಗೆ ಅರ್ಥವಾಯಿತಲ್ಲಾ ನನಗೆ ಖುಷಿಯಾಯಿತು. ಇದು ದೊಡ್ಡ ವೇದಿಕೆ ಇಲ್ಲಿಂದ ಆಚೆ ಹೋದ ಬಳಿಕ ಎಲ್ಲರೂ ಒಳ್ಳೆದನ್ನು ಮಾತನಾಡಬೇಕು, ಒಳ್ಳೆ ಅವಕಾಶಗಳು ಸಿಗಬೇಕು. ಚೆನ್ನಾಗಿ ಹಾಗೂ ಖುಷಿಯಾಗಿರು ಎಂದು ವಿಶ್ ಮಾಡುತ್ತಾರೆ. ಅಲ್ಲದೇ ಇದನ್ನೆಲ್ಲಾ ನಾನು ಸಿನಿಮಾದಲ್ಲಿ ನೋಡಿದ್ದೆ. ಇದು ಯಾವುದು ನನಗೆ ಗೊತ್ತಿಲ್ಲ ಎಂದು ಹೇಳುತ್ತಾರೆ.

blank

ನಂತರ ಇಬ್ಬರೂ ಕೇಕ್ ಕತ್ತರಿಸಿ ಫ್ರೆಂಡ್ ಶಿಪ್ ಡೇ ಸೆಲೆಬ್ರೆಟ್ ಮಾಡುತ್ತಾರೆ. ನಂತರ ಕೇಕ್ ತಿನ್ನುವ ವೇಳೆ ಮಂಜು ನಮ್ಮ ಹುಡುಗ್ರು ಇದನ್ನೆಲ್ಲಾ ನೋಡಿದರೆ ಫುಲ್ ಶಾಕ್ ಆಗುತ್ತಾರೆ. ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇರುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳುತ್ತಾರೆ.  ಇದನ್ನೂ ಓದಿ:BB ಮನೆಯಿಂದ ರಾತ್ರೋರಾತ್ರಿ ಹೊರಗೆ ಬಂದ DS

Source: publictv.in Source link