‘ಸನ್ನಿ’ ಮನೆಯಲ್ಲಿ ಕಾಟ ಕೊಟ್ಟವಱರು? -ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​ರೌಂಡಪ್​

‘ಸನ್ನಿ’ ಮನೆಯಲ್ಲಿ ಕಾಟ ಕೊಟ್ಟವಱರು? -ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​ರೌಂಡಪ್​

1. ‘ಬಾಕಿಯಿರುವ ಚುನಾವಣೆ ಕೂಡಲೇ ನಡೆಸಿ’

blank

ಬಾಕಿಯಿರುವ ಪಾಲಿಕೆ, ನಗರಸಭೆಗಳಿಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಬೇಕಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಬೆಳಗಾವಿ, ಹುಬ್ಬಳ್ಳಿ – ಧಾರವಾಡ, ಕಲಬುರ್ಗಿ, ತರೀಕೆರೆ ಮುಂತಾದೆಡೆ ಅವಧಿಯೊಳಗೆ ಚುನಾವಣೆ ನಡೆದಿಲ್ಲ. ಹೀಗಾಗಿ ಚುನಾವಣೆ ಮುಂದೂಡುವ ಸರ್ಕಾರದ ಮನವಿಯನ್ನು ಹೈಕೋರ್ಟ್ ಒಪ್ಪಿಲ್ಲ. ಕೋವಿಡ್ ಕಾರಣಕ್ಕೆ ಚುನಾವಣೆ ಮುಂದೂಡಲು ಸರ್ಕಾರ ಮನವಿ ಮಾಡಿತ್ತು. ಆದ್ರೆ ಸರ್ಕಾರದ ಮನವಿಯನ್ನು ಚುನಾವಣಾ ಆಯೋಗ ಪರಿಗಣಿಸಬೇಕಿಲ್ಲ ಅಂತಾ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

2. ಉತ್ತರಕನ್ನಡ ಜಿಲ್ಲಾಡಳಿತದಿಂದ ನೂತನ ಮಾರ್ಗಸೂಚಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ನೂತನ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ದೇವಸ್ಥಾನಗಳಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಇತರೆ ಧಾರ್ಮಿಕಸೇವೆಗಳಿಗೆ ನಿರ್ಬಂಧ ಹೇರಲಾಗಿದೆ. ಇನ್ನು ಮದುವೆ ಮುಂತಾದ ಸಮಾರಂಭಗಳಿಗೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಆಯಾ ತಹಶೀಲ್ದಾರರ ಅನುಮತಿ ಪಡೆಯುವುದನ್ನ ಕಡ್ಡಾಯಗೊಳಿಸಲಾಗಿದೆ.

3. ‘ನನ್ನನ್ನು ಪ್ರಮೋಶನ್​ಗೆ ಕರೆದು ಡಿಮೋಶನ್ ಮಾಡಿದ್ರು’

blank

ಉಡುಪಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಚಿವ ಸ್ಥಾನ ಕೈತಪ್ಪಿರುವ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ ಅಂತಾ ಹೇಳಿದ್ದಾರೆ. ಅಲ್ಲದೆ ನನ್ನದು ಏನಿದ್ದರೂ ಮೌನ ವೃತ. ನಾನು ಬರುವಾಗ ಏನನ್ನೂ ತಂದಿಲ್ಲ. ಹೋಗುವಾಗಲೂ ಬರಿಗೈಲಿ ಹೋಗುವವನು ಅಂತಾ ಶ್ರೀನಿವಾಸ ಶೆಟ್ಟಿ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಬಾರಿ ನನ್ನನ್ನು ಪ್ರಮೋಶನ್​ಗೆ ಕರೆದು ಡಿಮೋಶನ್ ಮಾಡಿದ್ರು ಅಂತಲೂ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

4. ವರ್ಲ್ಡ್ ಮಾಸ್ಟರ್ ಗೇಮ್ಸ್‌ಗೆ ಕರ್ನಾಟಕದ ಕಾನ್ಸ್‌ಸ್ಟೇಬಲ್ ಆಯ್ಕೆ

blank

ಜಪಾನ್​ನಲ್ಲಿ 2022ಕ್ಕೆ ನಡೆಯಲಿರುವ ವರ್ಲ್ಡ್ ಮಾಸ್ಟರ್ ಗೇಮ್ಸ್‌ನ ಓಟದ ಸ್ಪರ್ಧೆಗೆ ಗಡಿನಾಡು ಚಾಮರಾಜನಗರದ ಪೊಲೀಸ್​ ಹೆಡ್​ಕಾನ್ಸ್​ಟೇಬಲ್​ ಆಯ್ಕೆ ಆಗಿದ್ದಾರೆ. ಯಳಂದೂರು ತಾಲೂಕಿನ ಕೃಷ್ಣಪ್ಪ ಎಂಬುವವರಿಗೆ 47 ವರ್ಷ ವಯಸ್ಸಿನಲ್ಲೂ ಕ್ರೀಡಾಪ್ರೇಮವು ಚಾಮರಾಜನಗರದಿಂದ ಜಪಾನ್‌ವರೆಗೂ ಹೆಜ್ಜೆ ಇಡುವಂತೆ ಮಾಡಿದೆ. ಚಾಮರಾಜನಗರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಗೆದ್ದ ಪದಕದಿಂದ ಸ್ಪೂರ್ತಿಗೊಂಡ ಕೃಷ್ಣಪ್ಪ ಜಿಲ್ಲೆಗೆ ಹೆಮ್ಮೆ ತರಲು ಸಜ್ಜಾಗಿದ್ದಾರೆ. ಇನ್ನು 2022ರ ಮೇ ತಿಂಗಳಲ್ಲಿ ಜಪಾನ್ ನಲ್ಲಿ ನಡೆಯುವ ಸ್ಪರ್ಧೆಗೆ ಆಯ್ಕೆ ಆಗಿರುವುದಕ್ಕೆ ಜಿಲ್ಲೆಯ ಜನರು, ಕೃಷ್ಣಪ್ಪಗೆ ಶುಭಕೋರಿದ್ದಾರೆ.

5. ಮುಳುಗುತ್ತಿರುವ ಬೋಟ್​ನಲ್ಲಿದ್ದ ಮೀನುಗಾರರ ರಕ್ಷಣೆ
ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್​ನಲ್ಲಿ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. ಕಾರವಾರದ ಭಟ್ಕಳದ ಮುರುಡೇಶ್ವರ ಬಳಿ ಜನಾರ್ಧನ ಪುರ್ಸು ಹರಿಕಾಂತ ಎನ್ನುವವರಿಗೆ ಸೇರಿದ ಜಲಗಂಗಾ ಬೋಟ್​ನಲ್ಲಿ ಮೀನುಗಾರಿಕೆ ಮಾಡುವಾಗ ಅಲೆಗಳ ಹೊಡೆತಕ್ಕೆ ಬೋಟ್​ ಮುಳುಗಡೆಯಾಗಿತ್ತು. ಈ ವೇಳೆ ಅಲ್ಲೇ ಇದ್ದ ಸ್ಥಳೀಯ ಮೀನುಗಾರರು ರಕ್ಷಣೆಗೆ ಧಾವಿಸಿ ಏಳು ಜನ ಮೀನುಗಾರರನ್ನ ರಕ್ಷಿಸಿದ್ದಾರೆ.

6. ರಾಮಮಂದಿರ ಭೂಮಿ ಪೂಜೆ ನಡೆದು ಇಂದಿಗೆ ವರ್ಷ

blank

ಆಯೋಧ್ಯೆ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗೆ ಇಂದಿಗೆ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಳೆದ ವರ್ಷ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರದ ಭೂಮಿ ಪೂಜೆ ನೆರೆವೇರಿಸಿದ್ದರು. ಇದೀಗ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು ಅಯೋಧ್ಯೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

7. ಇಂಟರ್​ನೆಟ್ ಸಂಪರ್ಕ ಕಲ್ಪಿಸುವ ಯೋಜನೆ ಕೈಬಿಟ್ಟ ರೈಲ್ವೇ

ರೈಲುಗಳಲ್ಲಿ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಕೈಬಿಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸಂಸತ್‌ನಲ್ಲಿ ಹೇಳಿದ್ದಾರೆ .ಉಪಗ್ರಹ ಸಂವಹನ ತಂತ್ರಜ್ಞಾನದ ಮೂಲಕ ಹೌರಾ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ವೈ–ಫೈ ಆಧಾರಿತ ಇಂಟರ್ನೆಟ್ ಸೇವೆಯನ್ನು ಪ್ರಾಯೋಗಿಕವಾಗಿ ನೀಡಲಾಗಿತ್ತು ಎಂದು ಲೋಕಸಭೆಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ. ಇನ್ನು ಈ ಯೋಜನೆಗೆ ಹೆಚ್ಚಿನ ಬಂಡವಾಳ ಬೇಕಾಗುತ್ತದೆ. ಹೀಗಾಗಿ ವೆಚ್ಚದ ದೃಷ್ಟಿಯಿಂದ ಇದು ಪರಿಣಾಮಕಾರಿಯಾಗಿಲ್ಲ ಎಂದು ಸಚಿವರು ಹೇಳಿದ್ದಾರೆ.

8. ಇಂದು ಸುಪ್ರೀಂಕೋರ್ಟ್​ನಲ್ಲಿ ಪೆಗಾಸಸ್ ಅರ್ಜಿ ವಿಚಾರಣೆ

ಪೆಗಾಸಸ್ ​ ಬೇಹುಗಾರಿಕೆಗೆ ಆಕ್ಷೇಪಣೆ ಸಲ್ಲಿಸಿದ್ದ 9 ಮನವಿ ಅರ್ಜಿಗಳನ್ನು ಇಂದು ಸುಪ್ರೀಂಕೋರ್ಟ್​ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿ ಎನ್​.ವಿ.ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್​ ನೇತೃತ್ವದ ಪೀಠ ವಿಚಾರಣೆ ನಡೆಸಲಿದ್ದು, ಪೆಗಾಸಸ್​ ಬೇಹುಗಾರಿಕೆ ತನಿಖೆಗೆ ವಿಶೇಷ ತಂಡ ರಚನೆ ಮಾಡಬೇಕು ಹಾಗೂ ಸುಪ್ರೀಂ ಕೋರ್ಟ್​ನ ಕಣ್ಗಾವಲಿನಲ್ಲಿ ತನಿಖೆ ನಡೆಸುವಂತೆ ಎಡಿಟರ್ಸ್​ ಗಿಲ್ಡ್​ ಹಾಗೂ ಹಿರಿಯ ಪತ್ರಕರ್ತರಾದ ಎನ್​.ರಾಮ್​, ಶಶಿಕುಮಾರ್ ಸೇರಿದಂತೆ ಒಟ್ಟು 9 ಮಂದಿ ಅರ್ಜಿ ಸಲ್ಲಿಸಿದ್ದರು.

9. ಮಾದಕ ನಟಿ ಸನ್ನಿಗೆ ಜಿರಳೆ ಕಾಟ…!

blank

ಬಾಲಿವುಡ್​ ಬ್ಯೂಟಿ ಸನ್ನಿ ಲಿಯೋನ್​ ಮನೆಯಲ್ಲಿ ಜಿರಳೆ ಕಾಟವಂತೆ. ಈಗಂತ ಸ್ವತಃ ಹಾಟ್​ ಬ್ಯೂಟಿ ಸನ್ನಿಯೇ ಜಿರಳೆ ಹಿಡಿಯಲು ಹರಸಾಹಸ ಪಡುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಹೊಸ ಮನೆಗೆ ಪ್ರವೇಶ ಮಾಡಿದ್ದ ಸನ್ನಿ ಮನೆಯಲ್ಲಿ ಜಿರಳೆ ಸಖತ್​ ಕಾಟ ಕೊಡುತ್ತಿದೆಯಂತೆ. ಅದನ್ನು ಓಡಿಸಲು ಪತಿ ಡೇನಿಯಲ್​ ಜೊತೆ ಸೇರಿ ಸನ್ನಿ ಹೋರಾಟಾನೇ ಮಾಡಿದ್ದಾರೆ. ಇನ್ನು ಜಿರಳೆಗೆ ಯಾವುದೇ ಹಾನಿಯಾಗಿಲ್ಲ ಅಂತ ಸನ್ನಿ ಪೋಸ್ಟ್​ಗೆ ಕ್ಯಾಪ್ಷನ್​ ಕೂಡ ಹಾಕಿದ್ದಾರೆ.

10. ಬೂಮ್ರಾ ,ಶಮಿ ಬೌಲಿಂಗ್‌ಗೆ ತತ್ತರಿಸಿದ ಇಂಗ್ಲೆಂಡ್

ಭಾರತ ತಂಡದ ಭಲೇ ಜೋಡಿ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಬೌಲಿಂಗ್‌ ಮುಂದೆ ಆತಿಥೇಯ ಇಂಗ್ಲೆಂಡ್ ತಡಬಡಾಯಿಸಿದೆ. ನಿನ್ನೆ ಆರಂಭವಾದ ಮೊದಲ ಟೆಸ್ಟ್‌ನಲ್ಲಿ ಯಾರ್ಕರ್ ಪರಿಣತ ಬೂಮ್ರಾ ಮತ್ತು ಸ್ವಿಂಗ್ ಸುಲ್ತಾನ ಶಮಿ ಅವರಿಬ್ಬರ ಆಟಕ್ಕೆ ತತ್ತರಿಸಿದ ಇಂಗ್ಲೆಂಡ್ ತಂಡವು 65.4 ಓವರ್‌ಗಳಲ್ಲಿ 183 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡಕ್ಕೆ ಇಂಡಿಯಾ ತಂಡ ದೊಡ್ಡ ಆಘಾತವನ್ನು ನೀಡಿದೆ.

Source: newsfirstlive.com Source link