ಹೊಸ ಕಥೆಯೊಂದಿಗೆ ಬರ್ತಿದ್ದಾರೆ ರಾಧೆಶ್ಯಾಮ

ಹೊಸ ಕಥೆಯೊಂದಿಗೆ ಬರ್ತಿದ್ದಾರೆ ರಾಧೆಶ್ಯಾಮ

ಕನ್ನಡದಲ್ಲಿ ಸಾಕಷ್ಟು ವಿಭಿನ್ನ ಕಥಾಹಂದರದ ಧಾರಾವಾಹಿಗಳು ಈಗಾಗಲೆ ಪ್ರೇಕ್ಷಕರನ್ನು ರಂಜಿಸ್ತಾಯಿವೆ. ಒಂದೆಡೆ ಇತರ ಭಾಷೆಯಿಂದ ಡಬ್​ ಆದ ಧಾರಾವಾಹಿಗಳು ಆದ್ರೆ.. ಇನ್ನೊದೆಡೆ ಕನ್ನಡ ಧಾರಾವಾಹಿಗಳ ಸದ್ದು ಜೋರಾಗಿದೆ.

ಇದೀಗ ಮತ್ತೆ ಕನ್ನಡಲ್ಲಿ ಒಂದಿಷ್ಟು ಧಾರಾವಾಹಿಗಳು ಲಾಂಚ್​ ಆಗ್ತಾಯಿವೆ. ಅದರಲ್ಲಿ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಹೊಸ ಕಥೆಯೊಂದಿಗೆ ನಿಮ್ಮ ಮುಂದೆ ಒಂದು ಧಾರಾವಾಹಿ ಬರಲು ಸಜ್ಜಾಗ್ತಾಯಿದೆ. ಯಾವುದಪ್ಪಾ ಆ ಧಾರಾವಾಹಿ ಅಂತಿರಾ? ಅದು ಮತ್ಯಾವುದು ಅಲ್ಲಾ ರಾಧೆ ಶ್ಯಾಮ.

blank

ರಾಧೆ ಶ್ಯಾಮ ಟೈಟಲ್​ ಕೇಳಿದ್ರೆ ಇದೊಂದು ಪೌರಾಣಿಕ ಕಥೆಯುಳ್ಳ ಧಾರಾವಾಹಿ ಎಂಬ ಊಹೆಯು ಬರತ್ತೆ. ಕಾರಣ ಇತ್ತೀಚಿನ ದಿನಗಳಲ್ಲಿ ರಾಧಾಕೃಷ್ಣ ಹೀಗೇ ಒಂದಿಷ್ಟು ಈ ಜೋಡಿಯ ಕಥೆಗಳು ಹೆಚ್ಚಾಗಿ ಸದ್ದು ಮಾಡ್ತಾಯಿವೆ. ಆದ್ರೇ ಈ ರಾಧೆಶ್ಯಾಮನ ಕಥೆ ತುಂಬಾನೆ ಡಿಫ್ರೆಂಟ್​. ಇದು ಒಂದು ದಿಟ್ಟ ಹೆಣ್ಣುಮಗಳ ಸುತ್ತ ಹೆಣೆಯುವ ಕಥೆಯಾಗಿದೆ.

ಸದ್ಯ ಈ ಧಾರಾವಾಹಿಯ ಪ್ರೋಮೋ ರಿಲೀಸ್​ ಆಗಿದ್ದು.. ಈ ಧಾರಾವಾಹಿಯ ನಾಯಕಿ ಅಪ್ಪ ಅಮ್ಮನ ಮುದ್ದಿನ ಮಗಳು ಹಾಗೂ ಸರಿ ತಪ್ಪನ್ನು ಮುಖಕ್ಕೆ ಹೊಡಿದಾಗೆ ಹೇಳುವ ಹುಡುಗಿ. ಯಾವುದಕ್ಕೂ ಹೆದರದೆ ಮುನ್ನುಗ್ಗುವ ಹೆಣ್ಣು ಎಂಬುವುದು ತಿಳಿಯುತ್ತೆ. ಒಂದು ಫ್ಯಾಮಿಲಿಯ ಪ್ರೋಮೋ ರಿಲೀಸ್​ ಆಗಿದ್ದು ಸಖತ್​ ಸದ್ದು ಮಾಡ್ತಾಯಿದೆ. ಇನ್ನು ಶ್ಯಾಮನ ಮನೆತನ ಎಂತಹದ್ದು ಅವನು ಯಾವ ರೀತಿ ಗುಣದ ಹುಡುಗ ಎಂಬುವುದು ಮುಂದಿನ ಪ್ರೋಮೋದಲ್ಲಿ ತಿಳಿಯಲಿದೆ.

ರಾಧೆಶ್ಯಾಮ ತಂಡ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು. ಯಾವಾಗ ಲಾಂಚ್​ ಆಗಬಹುದು ಎಂಬುವುದನ್ನು ಕಾದು ನೋಡ್ಬೇಕು. ಒಟ್ಟಿನಲ್ಲಿ ಹೊಸ ಕಥೆಯೊಂದಿಗೆ ನಿಮ್ಮನ್ನು ರಂಜಿಸಲು ಸಜ್ಜಾಗಿರುವ ರಾಧೆಶ್ಯಾಮ ಟೀಮ್​ಗೆ ನಮ್ಮ ಕಡೆಯಿಂದಲು ಆಲ್​ ದಿ ಬೆಸ್ಟ್.

Source: newsfirstlive.com Source link